/newsfirstlive-kannada/media/post_attachments/wp-content/uploads/2024/11/JOB_COAL_INDIA.jpg)
ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ. (NIACL) ಇಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ನೇಮಕ ಮಾಡಲು ಹೊಸ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಹೀಗಾಗಿ ಯಾರಿಗೆ ಇಷ್ಟ ಇದೆಯೋ ಅಂತಹ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿಗಳು ಇನ್ನು ಆರಂಭ ಆಗಿಲ್ಲ. 9 ದಿನದ ನಂತರ ಅರ್ಜಿ ಪ್ರಕ್ರಿಯೆ ಪ್ರಾರಂಭ ಮಾಡಲಾಗುತ್ತದೆ. ಹೀಗಾಗಿ ಅರ್ಜಿ ಸಲ್ಲಿಸಬೇಕು ಎನ್ನುವವರು ಇಲ್ಲದ ತಮ್ಮ ದಾಖಲೆಗಳನ್ನು ಸಂಬಂಧ ಪಟ್ಟ ಇಲಾಖೆಯಿಂದ ಪಡೆದುಕೊಂಡರೇ ಅಪ್ಲೇ ಮಾಡಲು ಸುಲಭವಾಗುತ್ತದೆ.
ಎನ್ಐಎಸಿಎಲ್ ಕೇವಲ ಸಣ್ಣದಾದ ಅಧಿಸೂಚನೆ ಮಾತ್ರ ರಿಲೀಸ್ ಮಾಡಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದೆ. ಸಂಪೂರ್ಣವಾದ ಮಾಹಿತಿ ಇರುವ ನೋಟಿಫಿಕೆಶನ್ ಅನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಸಂಸ್ಥೆಯ ವೆಬ್ಸೈಟ್ಗೆ ಅಭ್ಯರ್ಥಿಗಳು ಭೇಟಿ ಕೊಟ್ಟು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ ಎಂದು ಹೇಳಲಾಗಿದೆ.
ಶೈಕ್ಷಣಿಕ ಅರ್ಹತೆ ಏನು ಕೇಳಿದ್ದಾರೆ?
ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು
ಉದ್ಯೋಗದ ಹೆಸರು
ಸಹಾಯಕ ಹುದ್ದೆಗಳು
ಇದನ್ನೂ ಓದಿ:ಈ ವಿಭಾಗದ ಅಭ್ಯರ್ಥಿಗಳಿಂದ BHEL ಅರ್ಜಿ ಆಹ್ವಾನ.. ವೇತನ ₹84,000, ನಾಳೆ ಕೊನೆ ದಿನ
ಒಟ್ಟು ಎಷ್ಟು ಹುದ್ದೆಗಳು ಇವೆ?
500
ವಯೋಮಿತಿ
18 ರಿಂದ 30 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅವಕಾಶ
ಆಯ್ಕೆ ಪ್ರಕ್ರಿಯೆ ಹೇಗೆ ಇದೆ?
ಪೂರ್ವಭಾವಿ ಪರೀಕ್ಷೆ (Preliminary) (100 ಮಾರ್ಕ್ಸ್)
ಮುಖ್ಯ ಪರೀಕ್ಷೆ (250 ಮಾರ್ಕ್ಸ್)
ಪ್ರಾದೇಶಿಕ ಭಾಷಾ ಪರೀಕ್ಷೆ
ಪ್ರಮುಖ ದಿನಾಂಕಗಳು ಇಲ್ಲಿವೆ
ವಿವರವಾದ ಅಧಿಸೂಚನೆ ರಿಲೀಸ್ ದಿನ- 17 ಡಿಸೆಂಬರ್ 2024
ಅರ್ಜಿ ಆರಂಭ ಆಗುವ ದಿನಾಂಕ- 17 ಡಿಸೆಂಬರ್ 2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 01 ಜನವರಿ 2025
ಡಿಸೆಂಬರ್ 17, 2024 ರಂದು ಬಿಡುಗಡೆ ಮಾಡುವ ವಿವರವಾದ ಅಧಿಸೂಚನೆಯಲ್ಲಿ ಅರ್ಜಿ ಶುಲ್ಕ ಸೇರಿದಂತೆ ಇತರೆ ಮಾಹಿತಿ ಸಂಪೂರ್ಣವಾಗಿ ನೀಡಲಾಗುತ್ತದೆ.
ವೆಬ್ಸೈಟ್- https://www.newindia.co.in/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ