Advertisment

ನೈಸ್​ ರೋಡಲ್ಲಿ ಹೋಗೋ ವಾಹನ ಮಾಲೀಕರಿಗೆ ಬಿಗ್​ ಶಾಕ್​​.. ಟೋಲ್​​ ಭಾರೀ ಹೆಚ್ಚಳ

author-image
Veena Gangani
Updated On
ನೈಸ್​ ರೋಡಲ್ಲಿ ಹೋಗೋ ವಾಹನ ಮಾಲೀಕರಿಗೆ ಬಿಗ್​ ಶಾಕ್​​.. ಟೋಲ್​​ ಭಾರೀ ಹೆಚ್ಚಳ
Advertisment
  • ಟೋಲ್ ದರ ಹೆಚ್ಚಳದ ಬೆನ್ನಲ್ಲೇ ಪ್ರಯಾಣಿಕರಿಗೆ ಶಾಕ್
  • ಮಾದಾವರ ಮಾರ್ಗದ ಬಿಎಂಟಿಸಿ ಬಸ್ ದರ ಹೆಚ್ಚಳ
  • ನಗರಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಶುಲ್ಕ ಹೆಚ್ಚಳ

ಬೆಂಗಳೂರು: ನೈಸ್ ರೋಡ್​ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಏರಿಕೆ ಕಂಡ ಟೋಲ್ ಬಿಸಿ ಬಿಎಂಟಿಸಿ ಪ್ರಯಾಣಿಕರ ಜೇಬು ಸುಡುವ ಸಮಯ ಸನ್ನಿಹಿತವಾಗಿದೆ. ಅಷ್ಟಕ್ಕೂ ಟೋಲ್ ದರಕ್ಕೂ ಬಿಎಂಟಿಸಿ ಬಸ್ ಪ್ರಯಾಣಕ್ಕೂ ಏನ್ ಸಂಬಂಧ ಅನ್ನೋರು ಈ ಸ್ಟೋರಿ ಓದಲೇಬೇಕು.

Advertisment

publive-image

ಇದನ್ನೂ ಓದಿ:ನಂಬಿದ್ರೆ ನಂಬಿ ಬಿಟ್ಟರೇ ಬಿಡಿ..! ಒಂದು ಜೊತೆ ಮಾಮೂಲಿ ಚಪ್ಪಲಿ ಬೆಲೆ 1 ಲಕ್ಷ ರೂಪಾಯಿ

ತರಕಾರಿ ದರ, ಪೆಟ್ರೋಲ್​ ರೇಟು ಹೀಗೇ ರಾಜ್ಯದಲ್ಲಿ ಬೆಲೆ ಏರಿಕೆಯ ಪರ್ವ ಶುರುವಾಗಿದೆ. ಇದರ ಮುಂದುವರಿದ ಭಾಗ ಅನ್ನೋ ಹಾಗೇ ಜುಲೈ 1ರಿಂದ NICE ರೋಡ್ ಟೋಲ್​ ದರ ಕೂಡ ಏರಿಕೆಯಾಗಿದ್ದು, ವಾಹನ ಸವಾರರು ಪರದಾಡ್ತಿದ್ದಾರೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಗರಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಶುಲ್ಕ ಹೆಚ್ಚಿಸಿದೆ.

ಇದರ ಜೊತೆಗೆ ನೈಸ್ ರಸ್ತೆಯ ನಿರ್ವಾಹಕ ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ ಕೂಡ ಟೋಲ್ ಶುಲ್ಕ ಹೆಚ್ಚಳ ಮಾಡಿದೆ. ಇದರ ಎಫೆಕ್ಟ್ ಬಿಎಂಟಿಸಿ ಪ್ರಯಾಣಿಕರಿಗೂ ತಟ್ಟಲಿದ್ದು, ಟೋಲ್ ದರ ಏರಿಕೆ ಬೆನ್ನಲ್ಲೇ ಮಾದಾವರ ಮಾರ್ಗದ BMTC ಬಸ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ.

Advertisment

publive-image

ಟೋಲ್ ಬರೆ

ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆವರೆಗಿನ 9 ಕಿ.ಮೀ ಉದ್ದದ ಟೋಲ್ ₹50 ರಿಂದ ₹60ಕ್ಕೆ ಏರಿಕೆಯಾಗಿದೆ. ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆವರೆಗೆ ಪರಿಷ್ಕೃತ ಟೋಲ್ 45 ರೂಪಾಯಿಂದ 50ಕ್ಕೆ ಹೆಚ್ಚಳವಾಗಿದೆ. ಬಿಎಂಟಿಸಿ ಬಸ್​ನಲ್ಲಿ ಬಿಐಇಸಿ - ಎಲೆಕ್ಟ್ರಾನಿಕ್ ಸಿಟಿಗೆ ಸದ್ಯ-65 ರುಪಾಯಿ ಚಾರ್ಜ್ ಇದ್ರೆ, ಇದರಲ್ಲಿ 40 ರುಪಾಯಿ ಟಿಕೆಟ್ ದರ 25 ರುಪಾಯಿ ಟೋಲ್ ದರವಿದೆ. ಟೋಲ್ ದರ ಹೆಚ್ಚಿದ್ರಿಂದ ಟಿಕೆಟ್ ರೇಟ್ ಕೂಡ 65 ರಿಂದ 75 ರೂಪಾಯಿವರೆಗೆ ಹೆಚ್ಚಳವಾಗೋ ಸಾಧ್ಯತೆ ಇದೆ. ಒಟ್ಟಿನಲ್ಲಿ ಬಿಎಂಟಿಸಿ ಬಸ್​ಗಳಿಗೆ NICE ರಸ್ತೆಯಲ್ಲಿ ಟೋಲ್ ಹಾಕದಂತೆ ಸಾರಿಗೆ ಇಲಾಖೆ ಮನವಿ ಮಾಡಿದೆ ಎನ್ನಲಾಗಿದೆ. ಬಟ್ ಟಿಕೆಟ್ ದರ ಹೆಚ್ಚಳವಾಗೋ ಸಾಧ್ಯತೆ ಹೆಚ್ಚಾಗಿಯೇ ಇದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಪಕ್ಕಾ ಅನ್ನೋ ಮಾತುಗಳು ಕೂಡ ಕೇಳಿ ಬರ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment