/newsfirstlive-kannada/media/post_attachments/wp-content/uploads/2025/04/VIRAT_SURYA.jpg)
ಪ್ರತಿ ಬಾರಿಯಂತೆ ಈ ಸಲನೂ ಐಪಿಎಲ್ ಯಶಸ್ವಿಯಾಗಿ ನಡೆಯುತ್ತಿದ್ದು 10 ತಂಡದ ಆಟಗಾರರು ತಮ್ಮ ತಮ್ಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಬಾರಿ ಚಾಂಪಿಯನ್ ಆಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಈ ಸಲ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದೆ. ಕೋಲ್ಕತ್ತಾ ವಿರುದ್ಧ ಬ್ಯಾಟಿಂಗ್ನಲ್ಲಿ ಆರ್ಭಟಿಸಿದ್ದ ನಿಕೋಲಸ್ ಪೂರನ್ ಹಾಗೂ ಮಿಚೆಲ್ ಮಾರ್ಷ್ ನಡುವೆ ಆರೆಂಜ್ ಕ್ಯಾಪ್ಗಾಗಿ ಪೈಪೋಟಿ ನಡೆದಿದೆ.
ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಓಪನರ್ ಆಗಿದ್ದ ಮಿಚೆಲ್ ಮಾರ್ಚ್ ಅಬ್ಬರದ ಬ್ಯಾಟಿಂಗ್ ಮಾಡಿದ್ದರು. ಈ ಪಂದ್ಯದಲ್ಲಿ ಮಾರ್ಷ್ 48 ಎಸೆತಕ್ಕೆ 81 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು. ಆದರೆ ಇದರ ಬೆನ್ನಲ್ಲೇ 3ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಆಗಮಿಸಿದ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು.
ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ನಿಂದ ಕೆಕೆಆರ್ ಬೌಲರ್ಸ್ಗಳಿಗೆ ಬೆಂಡೆತ್ತಿದರು. ಹೀಗಾಗಿಯೇ ಕೇವಲ 36 ಬಾಲ್ಗಳಲ್ಲಿ 8 ಭರ್ಜರಿ ಸಿಕ್ಸರ್ಗಳಿಂದ 87 ರನ್ಗಳ ಗಳಿಸಿ ಅಜೇಯರಾಗಿ ಉಳಿದರು. ಸದ್ಯ 2025ರ ಐಪಿಎಲ್ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದವರಲ್ಲಿ ನಿಕೋಲಸ್ ಪೂರನ್ ಮೊದಲ ಸ್ಥಾನದಲ್ಲಿದ್ದು ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಹೀನಾಯ ಸ್ಥಿತಿಗೆ ತಲುಪಿದ ಚೆನ್ನೈ ಸೂಪರ್ ಕಿಂಗ್ಸ್.. ಫಿನಿಷರ್ ಪಾತ್ರ ನಿರ್ವಹಿಸುವಲ್ಲಿ ಧೋನಿ ಮತ್ತೆ ಫೇಲ್..!
ಈ ಟೂರ್ನಿಯಲ್ಲಿ ಮಿಚೆಲ್ ಮಾರ್ಷ್ 265 ರನ್ಗಳನ್ನು ಗಳಿಸಿ 2ನೇ ಸ್ಥಾನದಲ್ಲಿದ್ರೆ, ನಿಕೋಲಸ್ ಪೂರನ್ 288 ರನ್ಗಳಿಂದ ಮೊದಲ ಸ್ಥಾನದಲ್ಲಿದ್ದಾರೆ. ಈ ಇಬ್ಬರಿಗೂ ಕೇವಲ 23 ರನ್ಗಳ ಅಂತರ ಮಾತ್ರ ಇದೆ. ಯಾವುದೇ ಸಮಯದಲ್ಲಿ ಇದು ಬದಲಾವಣೆ ಆಗಬಹುದು. ಆದರೆ ಆರೆಂಜ್ ಕ್ಯಾಪ್ ಮಾತ್ರ ಲಕ್ನೋ ಟೀಮ್ನಲ್ಲಿ ಉಳಿಯಲಿದೆ. ಏಕೆಂದರೆ ಈ ಇಬ್ಬರು ಬ್ಯಾಟರ್ಸ್ ಲಕ್ನೋ ತಂಡದವರು ಆಗಿದ್ದಾರೆ.
ಇನ್ನುಳಿದಂತೆ ಪೂರನ್, ಮಾರ್ಷ್ ಬಳಿಕ 3ನೇ ಸ್ಥಾನದಲ್ಲಿ ಮುಂಬೈ ತಂಡದ ಪ್ಲೇಯರ್ ಸೂರ್ಯಕುಮಾರ್ ಇದ್ದಾರೆ. ಇವರು ಈವರೆಗೆ 199 ರನ್ಗಳನ್ನು ಗಳಿಸಿದ್ದಾರೆ. ಈ ಬಾರಿಯ ರನ್ ಗಳಿಕೆಯಲ್ಲಿ ವಿರಾಟ್ ಕೊಹ್ಲಿ ಕೊಂಚ ಹಿಂದಿದ್ದಾರೆ. ಕೆಕೆಆರ್ ಜೊತೆ 59, ಸಿಎಸ್ಕೆ ವಿರುದ್ಧ 31, ಗುಜರಾತ್ ಜೊತೆ 7 ಹಾಗೂ ಮುಂಬೈ ವಿರುದ್ಧ 67 ರನ್ಗಳಿಂದ ಒಟ್ಟು 167 ರನ್ಗಳನ್ನು ಗಳಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ