newsfirstkannada.com

×

18 ಕೋಟಿಗೆ ಡೀಲ್! LSG ಉಳಿಸಿಕೊಂಡ ಮೊದಲ ಸ್ಟಾರ್ ಹೆಸರು ರಿವೀಲ್, ರಾಹುಲ್ ಅಲ್ಲ..!

Share :

Published October 30, 2024 at 9:17am

Update October 30, 2024 at 9:32am

    ಕೆಎಲ್​ ರಾಹುಲ್​​ಗೆ ಬಿಗ್ ಶಾಕ್ ನೀಡಿದ ಎಲ್​ಎಸ್​​ಜಿ

    ವೆಸ್ಟ್​ ವಿಂಡೀಸ್ ಆಟಗಾರನ ಜೊತೆ LSG ಒಪ್ಪಂದ

    ಒಟ್ಟು ಐದು ಆಟಗಾರರ ಉಳಿಸಿಕೊಳ್ಳಲಿದೆ ಲಕ್ನೋ

ಕೆಎಲ್ ರಾಹುಲ್​​ಗೆ ಎಲ್​​ಎಸ್​​ಜಿ ಬಿಗ್ ಶಾಕ್ ನೀಡಿದ್ದು, ನಿಕೋಲಸ್​ ಪೂರನ್​ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ. ಪೂರನ್  ಉಳಿಸಿಕೊಳ್ಳುವ ಪ್ರಕ್ರಿಯೆಯ ಮೊದಲ ಭಾಗವಾಗಿ ಫ್ರಾಂಚೈಸಿ ಮತ್ತು ಆಟಗಾರನ ನಡುವೆ ಒಪ್ಪಂದ ಏರ್ಪಟ್ಟಿದೆ.

ವೆಸ್ಟ್​ ವಿಂಡೀಸ್​​ನ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್​​ಮನ್ ಆಗಿರುವ ಪೂರನ್​​ಗೆ 18 ಕೋಟಿ ನೀಡಿ ಎಲ್​ಎಸ್​​ಜಿ ತಂಡದಲ್ಲೇ ಉಳಿಸಿಕೊಂಡಿದೆ. ಆ ಮೂಲಕ ಪೂರನ್ ಅವರೇ ಎಲ್​​ಎಸ್​ಜಿ ನಾಯಕರಾಗುವ ಸಾಧ್ಯತೆ ಇದೆ. ಕಳೆದ ಸೀಸನ್​​ಗಳಲ್ಲಿ ಕೆಎಲ್ ರಾಹುಲ್ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಪೂರನ್​​ಗೆ  ಇದೆ.

ವರದಿಗಳ ಪ್ರಕಾರ ಎಲ್​ಎಸ್​​ಜಿ ಮಾಲೀಕ ಸಂಜೀವ್ ಗೊಯೆಂಕಾ ಮತ್ತು ಪೂರನ್ ನಡುವೆ ಒಪ್ಪಂದ ಏರ್ಪಟ್ಟಿದೆ. 2023ರಲ್ಲಿ ಪೂರನ್​​ಗೆ ಎಲ್​ಎಸ್​ಜಿ 16 ಕೋಟಿ ನೀಡಿತ್ತು. ಇನ್ನು ಕನ್ನಡಿಗ ಕೆಎಲ್ ರಾಹುಲ್​ಗೆ ಕ್ಯಾಪ್ಟನ್ ಆಗಿ ಮುಂದುವರಿಯುವಂತೆ ಎಲ್​ಎಸ್​ಜಿ ಕೇಳಿಕೊಂಡಿದೆ ಎಂದು ವರದಿಯಾಗಿದೆ. ಇನ್ನು, ಎಲ್​​ಎಸ್​ಜಿ ಒಟ್ಟು ಐದು ಆಟಗಾರರನ್ನು ಉಳಿಸಿಕೊಳ್ಳಲಿದೆ. ರವಿ ಬಿಷ್ಣೋಯಿ, ಮಯಾಂಕ್ ಯಾದವ್, ಆಯುಷ್ ಬದೋನಿ ಹಾಗೂ ಮೊಹ್ಸಿನ್ ಖಾನ್ ಅವರನ್ನು ಉಳಿಸಿಕೊಳ್ಳಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:LSGಗೆ ಬೇಕೇಬೇಕು ಕೆಎಲ್ ರಾಹುಲ್; ಕನ್ನಡಿಗನ ಉಳಿಸಿಕೊಳ್ಳಲು ಇದೆ ಮೂರು ಕಾರಣ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

18 ಕೋಟಿಗೆ ಡೀಲ್! LSG ಉಳಿಸಿಕೊಂಡ ಮೊದಲ ಸ್ಟಾರ್ ಹೆಸರು ರಿವೀಲ್, ರಾಹುಲ್ ಅಲ್ಲ..!

https://newsfirstlive.com/wp-content/uploads/2024/10/KL-RAHUL-1-1.jpg

Load More