/newsfirstlive-kannada/media/post_attachments/wp-content/uploads/2025/06/POORAN.jpg)
ವೆಸ್ಟ್ ವಿಂಡೀಸ್ ವಿಕೆಟ್ ಕೀಪರ್ ಮತ್ತು ಗೇಮ್ ಚೇಂಜರ್ ಬ್ಯಾಟರ್ ನಿಕೋಲಸ್ ಪೂರನ್ ಕ್ರಿಕೆಟ್ ಲೋಕಕ್ಕೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ಹೆನ್ರಿಚ್ ಕ್ಲಾಸೆನ್ ನಿವೃತ್ತಿ ಘೋಷಣೆ ಬೆನ್ನಲ್ಲೇ ಪೂರನ್ ಕೂಡ ಎಲ್ಲಾ ಮಾದರಿಯ ಅಂತಾರಾಷ್ಟ್ರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ.
ಇದನ್ನೂ ಓದಿ: ಅಮ್ಮ ಕೊಟ್ಟ ಊಟ ಕೂಡ ಮಾಡದೆ ಮಗ ನೇಣಿಗೆ ಶರಣು.. ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಆತ್ಮಹತ್ಯೆ ಶಂಕೆ..
ಇನ್ಮುಂದೆ ಪೂರನ್ ಐಪಿಎಲ್ ಸೇರಿದಂತೆ ಫ್ರಾಂಚೈಸಿ ಕ್ರಿಕೆಟ್ ಲೀಗ್ನಲ್ಲಿ ಮಾತ್ರ ಆಡಲಿದ್ದಾರೆ. ಪ್ರಸ್ತುತ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಬ್ಯಾಟ್ ಆಡುತ್ತಿದ್ದಾರೆ. 61 ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿರುವ ಪೂರನ್, 99.5 ಸ್ಟ್ರೈಕ್ರೇಟ್ನೊಂದಿಗೆ 1983 ರನ್ಗಳಿಸಿದ್ದಾರೆ. ಒಟ್ಟು 58 ಇನ್ನಿಂಗ್ಸ್ ಆಡಿ ಮೂರು ಶತಕ ಮತ್ತು 11 ಅರ್ಧ ಶತಕ ಬಾರಿಸಿದ್ದಾರೆ.
ಟಿ-20 ಕ್ರಿಕೆಟ್ನಲ್ಲಿ 106 ಮ್ಯಾಚ್ಗಳನ್ನಾಡಿ 136.39 ಸ್ಟ್ರೈಕ್ರೇಟ್ನೊಂದಿಗೆ 2275 ರನ್ಗಳಿಸಿದ್ದಾರೆ. ಆಗಾಗ ಬೌಲಿಂಗ್ ಮಾಡ್ತಿದ್ದ ಪೂರನ್, 6 ವಿಕೆಟ್ ಕೂಡ ಪಡೆದುಕೊಂಡಿದ್ದಾರೆ. ಸಿಕ್ಸರ್ಗಳ ಬಾರಿಸೋದ್ರಲ್ಲಿ ಪಂಟರ್ ಆಗಿರುವ 29 ವರ್ಷದ ಪೂರನ್ ಅವರ ಸೊಗಸಾದ ಆಟಗಳನ್ನು ಐಪಿಎಲ್ನಲ್ಲಿ ಕಣ್ತುಂಬಿಕೊಳ್ಳಬಹುದು.
ಇದನ್ನೂ ಓದಿ: ಐಪಿಎಲ್ ಸೆನ್ಸೇಷನಲ್.. ಈ ಸ್ಟಾರ್ ಮೇಲೆ ಕ್ಯಾಪ್ಟನ್, ಕೋಚ್ ಕೃಪೆ ಬೇಕೇಬೇಕು..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ