newsfirstkannada.com

ಸ್ಟಾರ್​ ಹೀರೋಯಿನ್​​ ಜೊತೆ ಕಾಣಿಸಿಕೊಂಡ ಉದ್ಯಮಿ ನಿಖಿಲ್​ ಕಾಮತ್​; ವಿಡಿಯೋ ವೈರಲ್‌!

Share :

Published August 18, 2024 at 5:23pm

Update August 20, 2024 at 3:33pm

    ಫೋರ್ಬ್ಸ್ ಪಟ್ಟಿಯಲ್ಲಿ ಹೆಸರು ಪಡೆದಿದ್ದ ನಿಖಿಲ್ ಕಾಮತ್

    ರಸ್ತೆಯಲ್ಲಿ ನಟಿಯೊಂದಿಗೆ ಹೋಗುವಾಗ ವಿಡಿಯೋ ಸೆರೆ

    ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್

ಖ್ಯಾತ ಉದ್ಯಮಿ ನಿಖಿಲ್ ಕಾಮತ್ ಭಾರತದ ವಾಣಿಜ್ಯೋದ್ಯಮಿ. ಕೆಲವೇ ವರ್ಷಗಳಲ್ಲಿ ಉದ್ಯಮದಲ್ಲಿ ಅತ್ಯಂತ ಉತ್ತುಂಗದ ಶ್ರೇಣಿಗೆ ಏರಿದವರು. ಖ್ಯಾತ ಸ್ಟಾಕ್‌ ಬ್ರೋಕಿಂಗ್‌ ವೇದಿಕೆ ಜೆರೋಧಾ ಸಂಸ್ಥೆಯ ಸಹ ಸ್ಥಾಪಕ ನಿಖಿಲ್‌ ಕಾಮತ್‌ ಅವರು 2023ರ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಹೆಸರು ಪಡೆದಿದ್ದರು. ಸದ್ಯ ನಿಖಿಲ್‌ ಕಾಮತ್‌ ಅವರು ಖ್ಯಾತ ನಟಿಯೊಂದಿಗೆ ಬೈಕ್​ ರೈಡ್ ಮಾಡುತ್ತ ರೋಡ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: 60 TMC ನೀರು ಖಾಲಿ ಮಾಡಿಸೋದನ್ನು ಸುಳ್ಳಾಗಿಸಿದ್ದೇಗೆ..? ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಟೀಮ್ ಮಹತ್ವದ ಕಾರ್ಯ

ಬೆಂಗಳೂರಿನವರೇ ಆದ ನಿಖಿಲ್‌ ಕಾಮತ್‌ ಅವರು ಹಿಂದಿ ಸಿನಿಮಾ ನಟಿ ರಿಯಾ ಚಕ್ರವರ್ತಿಯೊಂದಿಗೆ ಮುಂಬೈನ ರಸ್ತೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಿಖಿಲ್‌ ಕಾಮತ್‌- ನಟಿ ರಿಯಾ ಇಬ್ಬರು ಒಂದೇ ಬೈಕ್​ನಲ್ಲಿ ಕುಳಿತು ಬೈಕ್​ ರೈಡಿಂಗ್ ಎಂಜಾಯ್ ಮಾಡುತ್ತಿದ್ದಾರೆ. ಈ ಮೊದಲು ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಯಾರಿಗೂ ಕನ್​ಫರ್ಮ್​ ಇರಲಿಲ್ಲ. ಸದ್ಯ ಮುಂಬೈನ ಬಂದ್ರಾದ ರಸ್ತೆಯೊಂದರಲ್ಲಿ ನಿಖಿಲ್‌ ಕಾಮತ್‌ ಬೈಕ್ ರೈಡ್ ಮಾಡುತ್ತಿದ್ದರೆ, ಹಿಂದೆ ನಟಿ ರಿಯಾ ಕುಳಿತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಖಾಲಿ ಇರೋ ಜಾಬ್​ಗಳಿಗೆ ಆಯಿಲ್ ಇಂಡಿಯಾ ಲಿಮಿಟೆಡ್​ ಅರ್ಜಿ ಆಹ್ವಾನ.. ನೀವು ಟ್ರೈ ಮಾಡಿ..!

ಬೈಕ್ ರೈಡ್ ಮಾಡುತ್ತಿರೋ ನಿಖಿಲ್‌ ಕಾಮತ್‌ ಮುಖ ಕಾಣದಂತೆ ಮಾಸ್ಕ್​ ಧರಿಸಿದ್ದು ತಲೆಗೆ ಹೆಲ್ಮೆಟ್ ಹಾಕಿಕೊಂಡಿದ್ದಾರೆ. ಹಿಂದೆ ಕುಳಿತಿರುವ ರಿಯಾ ಕೂಡ ಮಾಸ್ಕ್​ ಅಷ್ಟೇ ಹಾಕಿಕೊಂಡಿದ್ದು ಹೆಲ್ಮೆಟ್ ಹಾಕಿಕೊಂಡಿಲ್ಲ. ಹೀಗಾಗಿ ನೆಟ್ಟಿಗರು ನಟಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ದೃಶ್ಯವನ್ನು ಯಾರೋ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ.

ಈ ಹಿಂದೆ ಅಂದರೆ 2023ರಲ್ಲಿ ಈ ಇಬ್ಬರು ಒಟ್ಟಿಗೆ ಒಂದೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಪಾರ್ಟಿ ಮುಗಿದ ಮೇಲೆ ನಿಖಿಲ್ ಕಾಮತ್ ಕಾರಿನ ಮುಂಭಾಗದಲ್ಲಿ ಕುಳಿತರೆ, ರಿಯಾ ಹಿಂಭಾಗದಲ್ಲಿ ಕುಳಿತ್ತಿದ್ದರು. ಅಂದಿನಿಂದ ಈ ಇಬ್ಬರ ನಡುವೆ ಏನೋ ನಡೀತ್ತಿದೆ ಎಂದು ಊಹಾಪೋಹಗಳು ಎದ್ದಿದ್ದವು. ಆದರೆ ಸದ್ಯ ವೈರಲ್​ ಆಗಿರುವ ವಿಡಿಯೋ ಎಲ್ಲದಕ್ಕೂ ಪುಷ್ಠಿ ನೀಡುವಂತೆ ಇದೆ. ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ದುರಂತ ಸಾವಿನ ನಂತರ ನಟಿ ರಿಯಾ ಚಕ್ರವರ್ತಿ ಮತ್ತೆ ಪ್ರೀತಿ ಬಲೆಗೆ ಬಿದ್ದಿದ್ದಾರೆ ಎನ್ನಲಾಗ್ತಿದೆ. ಉದ್ಯಮಿ ನಿಖಿಲ್ ಕಾಮತ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಎಲ್ಲೆಡೆಯಿಂದ ಕೇಳಿ ಬರುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಟಾರ್​ ಹೀರೋಯಿನ್​​ ಜೊತೆ ಕಾಣಿಸಿಕೊಂಡ ಉದ್ಯಮಿ ನಿಖಿಲ್​ ಕಾಮತ್​; ವಿಡಿಯೋ ವೈರಲ್‌!

https://newsfirstlive.com/wp-content/uploads/2024/08/NIKIL_KAMATH_RIYA.jpg

Load More