/newsfirstlive-kannada/media/post_attachments/wp-content/uploads/2024/02/NIkhil-Kumarswamy-On-Mandya.jpg)
ರಾಮನಗರ: ಚನ್ನಪಟ್ಟಣ ಉಪಚುನಾವಣೆಯ ಮೆಗಾ ಫಲಿತಾಂಶಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಗೆಲ್ತ್ತಾರಾ? ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲ್ತಾರಾ ಅನ್ನೋ ಪ್ರಶ್ನೆಗೆ ಉತ್ತರ ಶನಿವಾರ ಮಧ್ಯಾಹ್ನದ ಹೊತ್ತಿಗೆ ಬಯಲಾಗಲಿದೆ. ಈ ಫಲಿತಾಂಶಕ್ಕೂ ಮೊದಲೇ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಸೆಲೆಬ್ರೇಷನ್‌ಗೆ ತಯಾರಿ ಮಾಡಿಕೊಂಡಿದ್ದಾರೆ.
ನಾಳೆ ಬೆಳಗ್ಗೆ ಚನ್ನಪಟ್ಟಣ ಉಪಚುನಾವಣೆಯ ಮತಎಣಿಕೆ ಆರಂಭವಾಗಲಿದೆ. ಆದರೆ ಫಲಿತಾಂಶ ಹೊರಬರುವ ಮುನ್ನವೇ ನಿಖಿಲ್ ಕುಮಾರಸ್ವಾಮಿ ಅವರ ಹೆಸರಿನ ಪಕ್ಕದಲ್ಲಿ ಎಂಎಲ್‌ಎ ಅನ್ನೋ ನಾಮಫಲಕಗಳನ್ನು ರೆಡಿ ಮಾಡಲಾಗಿದೆ.
ಇದನ್ನೂ ಓದಿ: 30 ಸಾವಿರ ಅಂತರದಲ್ಲಿ ಚನ್ನಪಟ್ಟಣ ಗೆಲುವು.. ಸಿಎಂ, ಡಿಸಿಎಂಗೆ ರಹಸ್ಯ ವರದಿ ನೀಡಿದ ಸಿ.ಪಿ ಯೋಗೇಶ್ವರ್!
3ನೇ ಅಗ್ನಿ ಪರೀಕ್ಷೆಯಲ್ಲಿ ಗೆಲ್ತಾರಾ ನಿಖಿಲ್?
ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣ ಉಪಚುನಾವಣೆ 3ನೇ ಅಗ್ನಿಪರೀಕ್ಷೆಯಾಗಿದೆ. ಈ ಹಿಂದೆ ಮಂಡ್ಯ ಲೋಕಸಭೆ, ರಾಮನಗರ ವಿಧಾನಭೆ ಚುನಾವಣೆಯಲ್ಲಿ ನಿಖಿಲ್ ಸೋಲು ಅನುಭವಿಸಿದ್ದರು. ಸತತ 2 ಸೋಲು ನಿಖಿಲ್ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರಿಗೆ ನೋವು ಉಂಟಾಗುವಂತೆ ಮಾಡಿದೆ.
ಈ ಬಾರಿ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ತಮ್ಮ ಯುವ ನಾಯಕ ಚನ್ನಪಟ್ಟಣದಲ್ಲಿ ಗೆದ್ದಾಯ್ತು ಅನ್ನೋ ನಂಬಿಕೆಯಲ್ಲಿ ಇದ್ದಾರೆ. ಅದೇ ವಿಶ್ವಾಸದಲ್ಲಿ ಶಾಸಕರ ಕಚೇರಿಗೆ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ನಾಮಫಲಕವನ್ನು ರೆಡಿ ಮಾಡಿಸಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ ಫಲಿತಾಂಶದ್ದೇ ಟೆನ್ಷನ್; ಮತಎಣಿಕೆ ಹೇಗಿರುತ್ತೆ? ಬಂದೋಬಸ್ತ್ ಹೇಗಿದೆ ಗೊತ್ತಾ?
ಶ್ರೀಯುತ ನಿಖಿಲ್ ಕುಮಾರಸ್ವಾಮಿ, ಶಾಸಕರು, ಚನ್ನಪಟ್ಟಣ ಅನ್ನೋ ನಾಮಫಲಕವನ್ನು ಶಾಸಕರ ಕಚೇರಿ ಹಾಗೂ ಟೇಬಲ್ ಮೇಲೆ ಇಡಲು ರೆಡಿ ಮಾಡಲಾಗಿದೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರಕ್ಕೆ ಬೈಎಲೆಕ್ಷನ್ ನಡೆದಿದೆ. ತಂದೆ ಕ್ಷೇತ್ರದಲ್ಲೇ ಗೆಲುವು ಸಾಧಿಸಿ ನಿಖಿಲ್ ಕುಮಾರಸ್ವಾಮಿ ಶಾಸಕರಾಗುತ್ತಾರಾ. ಚನ್ನಪಟ್ಟಣದ ನೂತನ ಶಾಸಕರಾಗಿ ವಿಧಾನಸಭೆಗೆ ಎಂಟ್ರಿ ಕೊಡ್ತಾರಾ ಅನ್ನೋದಕ್ಕೆ ಪ್ರಶ್ನೆಗೆ ಕೆಲವೇ ಗಂಟೆಯಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ