newsfirstkannada.com

ಸುಮಲತಾ ವಿರುದ್ಧ ಸೋಲು.. ಆ ದಿನಗಳ ನೆನೆದು ನಿಖಿಲ್ ಭಾವುಕ; ಹೇಳಿದ್ದೇನು?

Share :

Published March 15, 2024 at 3:31pm

    2019ರ ಚುನಾವಣೆಯಲ್ಲಿ ನಾನು ರಾಜಕೀಯಕ್ಕೆ ಬಹಳ ಚಿಕ್ಕ ಹುಡುಗ

    ನನ್ನ ವಿರುದ್ಧ ನಿಂತಿದ್ದ ತಾಯಿ ಗೆಲುವಿಗೆ ಕಾಂಗ್ರೆಸ್ ಕಾರಣ ಎಂದ ನಿಖಿಲ್‌

    ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೂ ಟಾಂಗ್ ಕೊಟ್ಟ ಹೆಚ್‌ಡಿಕೆ ಪುತ್ರ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ನಾಯಕರು ಮಂಡ್ಯದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಸೋಲಿನ ಆ ದಿನಗಳನ್ನ ನೆನೆದು ಭಾವುಕರಾಗಿದ್ದಾರೆ.

ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ನಿಖಿಲ್‌, 2019ರ ಲೋಕಸಭಾ ಚುನಾವಣೆಯಲ್ಲಿ ನನಗೆ ರಾಜಕೀಯದ ಅನುಭವ ಇರಲಿಲ್ಲ. ಆಗ ಬಹಳ ಚಿಕ್ಕ ಹುಡುಗ ನಾನು. ಕಾರ್ಯಕರ್ತರು, ಮುಖಂಡರ ಅಭಿಪ್ರಾಯದಂತೆ ಸ್ಫರ್ಧೆ ಮಾಡಿದೆ. 5.75 ಲಕ್ಷ ಜನ ನನಗೆ ಮತ ನೀಡಿದ್ದರು. ಚುನಾವಣೆಗೂ ಮುನ್ನ ದೇವೇಗೌಡರ ಕಾಲು ಕಟ್ಟಿ ಕೇಳಿಕೊಂಡಿದ್ದೆ. ಮಂಡ್ಯ ಅಭ್ಯರ್ಥಿ ಆಗುವಂತೆ ಮನವಿ ಮಾಡಿದ್ದೆ. 2019ರ ಸೋಲಿನ ನೋವು, ಭಾರ ಮನಸ್ಸಿನಲ್ಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿ ಸಮಾವೇಶದಲ್ಲಿ ಸಿಎಂ ಭಾಷಣ ಮಾಡುತ್ತಾ ನನ್ನ ಸೋಲಿಸಿದ್ದಾಗಿ ಹೇಳಿದ್ದಾರೆ. ನನ್ನ ವಿರುದ್ಧ ನಿಂತಿದ್ದ ತಾಯಿ ಗೆಲುವಿಗೆ ಕಾಂಗ್ರೆಸ್ ಕಾರಣ ಎಂದ್ರು. ಆ ತಾಯಿ ಬಗ್ಗೆ ಮಾತನಾಡುವುದು ಬೇಡ ಈಗ ನಮ್ಮ ಜೊತೆಯಲ್ಲಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋಣ. ಆದರೆ ಅದೇ ವೇದಿಕೆಯಲ್ಲಿ ಪ್ರಮಾಣಿಕವಾಗಿ ನನ್ನ ಪರ ಚುನಾವಣೆ ಮಾಡಿದ್ದೆ ಎಂದು ಡಿಸಿಎಂ ಹೇಳಿದ್ದಾರೆ. ನನಗೆ ಅರ್ಥ ಆಗ್ತಿಲ್ಲ. ಒಬ್ಬೊಬ್ಬರದ್ದು ಒಂದೊಂದು ಹೇಳಿಕೆ ಎಂದು ನಿಖಿಲ್ ಕುಮಾರಸ್ವಾಮಿ ಡಿ.ಕೆ ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಇದೇ ವೇಳೆ ಕಾರ್ಯಕರ್ತರ ಸಭೆಯಲ್ಲಿ ತಂದೆ ಆರೋಗ್ಯದ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು 4-5 ದಿನಗಳಲ್ಲಿ ಕುಮಾರಣ್ಣನಿಗೆ ಹೃದಯ ಚಿಕಿತ್ಸೆ ಇದೆ. ಅವರಿಗೆ ಈಗಾಗಲೇ 2 ಬಾರಿ ಹೃದಯ ಚಿಕಿತ್ಸೆ ಆಗಿದೆ. ಏಕಾಂಗಿಯಾಗಿ ಪಕ್ಷ ಕಟ್ಟಲು ಹೋರಾಟ ಮಾಡಿದ್ದಾರೆ. ವಿಧಿಯ ಆಟ ಏನೋ ಗೊತ್ತಿಲ್ಲ. ಒಳ್ಳೆಯವರಿಗೆ ದೇವರ ಪರೀಕ್ಷೆ ಹೆಚ್ಚು. ನಾನು ಮಂಜುನಾಥ ಸ್ವಾಮಿಯ ಭಕ್ತ. ನನ್ನ ಆಯಸ್ಸು ನನ್ನ ತಂದೆಯವರಿಗೆ ಕೊಟ್ಟು ಜನಸೇವೆ ಮಾಡಲು ಅವಕಾಶ ಕೊಡಲಿ ಎಂದು ಪ್ರಾರ್ಥನೆ ಎಂದು ಹೇಳಿದರು. ನಿಖಿಲ್ ಅವರ ಈ ಮಾತು ಕೇಳಿ ಹೆಚ್‌.ಡಿ ಕುಮಾರಸ್ವಾಮಿ ಅವರು ಭಾವುಕರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಮಲತಾ ವಿರುದ್ಧ ಸೋಲು.. ಆ ದಿನಗಳ ನೆನೆದು ನಿಖಿಲ್ ಭಾವುಕ; ಹೇಳಿದ್ದೇನು?

https://newsfirstlive.com/wp-content/uploads/2024/03/Mandya-Nikhil-kumaraswamy.jpg

Load More