newsfirstkannada.com

ವಿದೇಶ ಪ್ರವಾಸ ಮಾಡಿ ರಿಲ್ಯಾಕ್ಸ್ ಆದ ನಿಖಿಲ್ ಕುಮಾರಸ್ವಾಮಿ.. ಪ್ರೇಕ್ಷಣೀಯ ಸ್ಥಳಗಳಲ್ಲಿ ಪತ್ನಿಯ ಕೈಹಿಡಿದು ಹೆಜ್ಜೆ..! Video

Share :

Published July 31, 2023 at 9:54am

    ವಿದೇಶದಲ್ಲಿ ನಿಖಿಲ್​ ಫುಲ್​ ಜಾಲಿ ಮೂಡ್

    ಅದ್ಭುತ ಕ್ಷಣಗಳ ಫೋಟೋ ಹಂಚಿಕೊಂಡ ನಿಖಿಲ್

    ಪತ್ನಿಯ ಕೈಹಿಡಿದು ನಡೆದ ವಿಡಿಯೋ ವೈರಲ್

ಕುಟುಂಬದ ಜೊತೆ ವಿದೇಶಿ ಪ್ರವಾಸದಲ್ಲಿರುವ ಜೆಡಿಎಸ್​ ಯುವ ನಾಯಕ ನಿಖಿಲ್​ ಕುಮಾರಸ್ವಾಮಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೆಂಡತಿ ಮತ್ತು ಮಗು ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಮತ್ತು ಬೆಂಬಲಿಗರಿಗೆ ಹೊಸ, ಹೊಸ ಅಪ್​ಡೇಟ್ ಕೊಡುತ್ತಿದ್ದಾರೆ.

ಐಲ್ಯಾಂಡ್‌ನಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಜುಲೈ 21 ರಂದು ಈ ಫೋಟೋ ಹಂಚಿಕೊಂಡಿದ್ದು, ಅಂದು ತಮ್ಮ ಪತ್ನಿ ರೇವತಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು ನಿನ್ನೆ ವಿಡಿಯೋ ಒಂದನ್ನು ಅಪ್​ಲೋಡ್ ಮಾಡಿದ್ದಾರೆ. ವಿದೇಶದ ರಸ್ತೆ ಮೇಲೆ ಹೆಂಡತಿ ಕೈ ಹಿಡಿದು ನಿಖಿಲ್ ವಾಕಿಂಗ್ ಮಾಡ್ತಿರೋ ವಿಡಿಯೋವನ್ನ ತನ್ನ ಇನ್ಸ್​ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಅವರ ಇಡೀ ಫ್ಯಾಮಿಲಿ ವಿದೇಶಿ ಪ್ರವಾಸ ಕೈಗೊಂಡಿದೆ. ಕುಮಾರಸ್ವಾಮಿ ವಿದೇಶಿ ಪ್ರವಾಸ ಬೆನ್ನಲ್ಲೇ ರಾಜ್ಯರಾಜಕಾರಣದಲ್ಲಿ ಭಾರೀ ಸುದ್ದಿಯಾಗಿತ್ತು. ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಸಿಂಗಾಪುರದಿಂದ ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದರು. ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ಕುಮಾರಸ್ವಾಮಿ ಕುಟುಂಬದ ವಿದೇಶಿ ಪ್ರವಾಸದ ಫೋಟೋಗಳು ವೈರಲ್ ಆಗಿದ್ದವು. ಸಿಂಗಾಪುರ ಬದಲಾಗಿ ಯುರೋಪ್ ದೇಶಗಳಲ್ಲಿ ಟ್ರಿಪ್ ಮಾಡುತ್ತಿರುವ ಫೋಟೋಗಳನ್ನು ವೈರಲ್ ಮಾಡಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದೇಶ ಪ್ರವಾಸ ಮಾಡಿ ರಿಲ್ಯಾಕ್ಸ್ ಆದ ನಿಖಿಲ್ ಕುಮಾರಸ್ವಾಮಿ.. ಪ್ರೇಕ್ಷಣೀಯ ಸ್ಥಳಗಳಲ್ಲಿ ಪತ್ನಿಯ ಕೈಹಿಡಿದು ಹೆಜ್ಜೆ..! Video

https://newsfirstlive.com/wp-content/uploads/2023/07/NIKHIL.jpg

Load More