newsfirstkannada.com

ನಾವು 7-8 ಕ್ಷೇತ್ರಗಳ ಟಿಕೆಟ್ ಕೇಳ್ತಿಲ್ಲ, ಕೇವಲ 3 ಸ್ಥಾನಗಳಿಗೆ ಬೇಡಿಕೆ ಅಷ್ಟೇ -ನಿಖಿಲ್ ಕುಮಾರಸ್ವಾಮಿ ಕೌಂಟರ್

Share :

Published March 19, 2024 at 8:11am

Update March 19, 2024 at 8:12am

    ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ

    ಹಾಸನ, ಮಂಡ್ಯ, ಕೋಲಾರ ಕ್ಷೇತ್ರ ಬಿಟ್ಟುಕೊಡುವಂತೆ ಪಟ್ಟು

    ಮಂಡ್ಯ ಕ್ಷೇತ್ರದ ಟಿಕೆಟ್​​ಗಾಗಿ ಪಟ್ಟು ಹಿಡಿದಿರುವ ಸುಮಲತಾ

ರಾಮನಗರ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಜೆಡಿಎಸ್ ಯುವ ನಾಯಕ ನಿಖಿಲ್​ ಕುಮಾರಸ್ವಾಮಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ.

ಈ ಸಭೆಗೂ ಮುನ್ನ ಸುದ್ದಿಗೋಷ್ಟಿ ನಡೆಸಿದ ನಿಖಿಲ್​ ಕುಮಾರಸ್ವಾಮಿ.. ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿದ್ದೇವೆ. ನಾವು ಹೆಚ್ಚಿನ ಸ್ಥಾನ ಕೇಳಿಲ್ಲ. ಕಾರಣ ಮೋದಿಯವರನ್ನ ಗೆಲ್ಲಿಸಿ‌ ಮತ್ತೊಮ್ಮೆ ಪ್ರಧಾನಿ ಮಾಡುವ ಉದ್ದೇಶ ನಮಗಿದೆ. ಹಾಗಾಗಿ ರಾಜ್ಯದಲ್ಲಿ 28 ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಪಣ ತೊಟ್ಟಿದ್ದೀವಿ. ನಾವು ಕೇವಲ ಮೂರು ಕ್ಷೇತ್ರಗಳಲ್ಲಿ ಟಿಕೇಟ್ ಕೇಳ್ತಿದ್ದೀವಿ ಎಂದಿದ್ದಾರೆ.

ನಾವು 7-8 ಕ್ಷೇತ್ರಗಳಿಗೆ ಟಿಕೆಟ್ ಕೇಳಿಲ್ಲ. ನಾವು ಕೇವಲ ಮೂರು ಕ್ಷೇತ್ರಗಳಲ್ಲಿ ಟಿಕೇಟ್ ಕೇಳ್ತಿದ್ದೀವಿ. ಕೋಲಾರದಲ್ಲಿ ಹೆಚ್ಚಿನ ಮತಗಳು ಜೆಡಿಎಸ್ ಪರವಾಗಿದೆ. ಹಾಗಾಗಿ ಕೋಲಾರವೂ ನಮಗೆ ಬೇಕು ಎಂದು ಕಾರ್ಯಕರ್ತರ ಒತ್ತಡ ಇದೆ. ಹಾಸನ, ಮಂಡ್ಯ, ಕೋಲಾರ ಮೂರು ಕ್ಷೇತ್ರಗಳಲ್ಲಿ ಮಾತ್ರ ನಾವು ಟಿಕೆಟ್ ಕೇಳ್ತಿದ್ದೇವೆ. ಈ ಬಗ್ಗೆ ನಮ್ಮ ಮುಖಂಡರು, ಕಾರ್ಯಕರ್ತರ ಅಭಿಪ್ರಾಯವನ್ನು ಬಿಜೆಪಿ ವರಿಷ್ಠರಿಗೆ ತಿಳಿಸುವ ಕೆಲಸ ಆಗುತ್ತಿದೆ ಎಂದರು.

ಇದನ್ನೂ ಓದಿ: ಕೋಲಾರಕ್ಕಾಗಿ ಬಿಜೆಪಿ, ಜೆಡಿಎಸ್​ ಮಧ್ಯೆ ಬಿಗ್​ ಫೈಟ್; ಬಹಿರಂಗ ಅಸಮಾಧಾನ ಹೊರಹಾಕಿದ HDK

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾವು 7-8 ಕ್ಷೇತ್ರಗಳ ಟಿಕೆಟ್ ಕೇಳ್ತಿಲ್ಲ, ಕೇವಲ 3 ಸ್ಥಾನಗಳಿಗೆ ಬೇಡಿಕೆ ಅಷ್ಟೇ -ನಿಖಿಲ್ ಕುಮಾರಸ್ವಾಮಿ ಕೌಂಟರ್

https://newsfirstlive.com/wp-content/uploads/2024/03/NIKHIL.jpg

Load More