newsfirstkannada.com

ಬಿಜೆಪಿಗಿಂತ 3 ಪಟ್ಟು ವೋಟ್​ ಶೇರಿಂಗ್ ನಮ್ಮ ಪಕ್ಷಕ್ಕಿದೆ -ನಿಖಿಲ್ ಕುಮಾರಸ್ವಾಮಿ ಹೀಗೆ ಬ್ಯಾಟ್ ಬೀಸಿದ್ದು ಯಾಕೆ..? 

Share :

Published February 23, 2024 at 10:57am

    ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಅಭ್ಯರ್ಥಿ ಆಗುವಂತೆ ಒತ್ತಡ

    ಕಳೆದ ವಿಧಾನಸಭೆ ಎಲೆಕ್ಷನ್​​ನಲ್ಲಿ ಜೆಡಿಎಸ್​ಗೆ ಹೆಚ್ಚು ವೋಟ್​

    ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ

ಬೆಂಗಳೂರು: ಮಂಡ್ಯ, ಹಾಸನ ಟಿಕೆಟ್​​​ಗೆ ಬಿಜೆಪಿ ನಾಯಕರಿಂದ ಬೇಡಿಕೆ ವಿಚಾರ ಸಂಬಂಧ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ತೆಗೆದುಕೊಂಡ ವೋಟ್ ಶೇರಿಂಗ್ ನೋಡಿದಾಗ, ಬಿಜೆಪಿಗಿಂತ 3 ಪಟ್ಟು ವೋಟ್​​ಗಳು ಜೆಡಿಎಸ್ ಹೆಚ್ಚು ಬಂದಿವೆ ಎಂದು ಹೇಳಿದ್ದಾರೆ.

ಕೋಲಾರ, ಮಂಡ್ಯ, ಹಾಸನದಲ್ಲಿ ಜೆಡಿಎಸ್ ಪರ ಅತಿಹೆಚ್ಚು ಮತ ಬಂದಿದೆ. ಮುಂದಿನ ದಿನಗಳಲ್ಲಿ ಸೀಟು ಶೇರಿಂಗ್ ಮಾತುಕತೆ ಆಗುತ್ತದೆ, ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಇಲ್ಲ, ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಇನ್ನೊಂದು ನಿಖಿಲ್​ ಕುಮಾರಸ್ವಾಮಿಯವರೇ ಸ್ಪರ್ಧೆ ಮಾಡಿದರೆ ಒಳ್ಳೆಯದು. ಈ ಬಾರಿ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಸಿ.ಎಸ್.ಪುಟ್ಟರಾಜು ಹೇಳುತ್ತಿದ್ದಾರೆ. ಈ ಇಬ್ಬರ ಸ್ಪರ್ಧೆ ಬಗ್ಗೆ ಹೀಗಿರುವಾಗ ಡಾ.ಮಂಜುನಾಥ್​ ಅವರನ್ನು ಮಂಡ್ಯದಿಂದ ನಿಲ್ಲಿಸಬೇಕು ಎನ್ನಲಾಗುತ್ತಿದೆ. ಸದ್ಯ ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಅಲ್ಲಿವರೆಗೆ ಕಾರ್ಯಕರ್ತರು ಕಾಯ್ದುಕೊಂಡು ಇರಬೇಕು.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಗಿಂತ 3 ಪಟ್ಟು ವೋಟ್​ ಶೇರಿಂಗ್ ನಮ್ಮ ಪಕ್ಷಕ್ಕಿದೆ -ನಿಖಿಲ್ ಕುಮಾರಸ್ವಾಮಿ ಹೀಗೆ ಬ್ಯಾಟ್ ಬೀಸಿದ್ದು ಯಾಕೆ..? 

https://newsfirstlive.com/wp-content/uploads/2024/02/NIKHIL_KUMARASWAMY.jpg

Load More