newsfirstkannada.com

ಅಪ್ಪನ ಆರೋಗ್ಯದ ಬಗ್ಗೆ ನಿಖಿಲ್ ಭಾವುಕ; ಮಗನ ಮಾತು ಕೇಳಿ ವೇದಿಕೆಯಲ್ಲೇ ಗಳಗಳನೇ ಕಣ್ಣೀರಿಟ್ಟ ಕುಮಾರಸ್ವಾಮಿ

Share :

Published March 15, 2024 at 6:22pm

    ‘ಒಳ್ಳೆಯವರಿಗೆ ಆ ದೇವರು ಪರೀಕ್ಷೆ ಮಾಡುತ್ತಾನೆ’ ಎಂದ ನಿಖಿಲ್

    ನನ್ನ ಆಯಸ್ಸು ತಂದೆಯವರಿಗೆ ಕೊಟ್ಟ ಜನಸೇವೆ ಮಾಡಲು ಅವಕಾಶ ಕೊಡಲಿ

    ಮಂಡ್ಯ ಕಾರ್ಯಕರ್ತರ ಸಭೆಯಲ್ಲಿ ಕುಮಾರಸ್ವಾಮಿ, ನಿಖಿಲ್ ಒಟ್ಟಿಗೆ ಭಾವುಕ

ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆದ ಜೆಡಿಎಸ್​ ಕಾರ್ಯಕರ್ತರ ಸಭೆಯು ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿ ಆಯಿತು. ಲೋಕಸಭೆ ಟಿಕೆಟ್​ ಆಯ್ಕೆ ಸಂಬಂಧ ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ಆಯೋಜನೆಗೊಂಡಿತ್ತು. ಈ ವೇಳೆ ಸಿಎಸ್​ ಪುಟ್ಟರಾಜು ಬದಲಿಗೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಾಯ ಮಾಡಿದರು.

ಆಗ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲು ನಿಖಿಲ್ ಕುಮಾರಸ್ವಾಮಿ ವೇದಿಕೆಗೆ ಆಗಮಿಸಿದರು. ವೇದಿಕೆ ಬರುತ್ತಿದ್ದಂತೆಯೇ ನಿಖಿಲ್ ಭಾವುಕರಾದರು. ನನ್ನ ಆಯಸ್ಸು ನನ್ನ ತಂದೆಯವರಿಗೆ ಕೊಟ್ಟು ಜನಸೇವೆ ಮಾಡಲು ಅವಕಾಶ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು  ನಿಖಿಲ್ ಕುಮಾರಸ್ವಾಮಿ ಕಣ್ಣೀರು ಇಟ್ಟರು.

ನಿಖಿಲ್ ಭಾವುಕರಾಗಿದ್ದು ಏಕೆ..? 

ವೇದಿಕೆ ಮೇಲೆ ಭಾವುಕರಾಗಿ ಮಾತನಾಡಿದ ನಿಖಿಲ್.. ಕುಮಾರಸ್ವಾಮಿ ಈಗಾಗಲೇ ಎರಡು ಬಾರಿ ಹೃದಯ ಚಿಕಿತ್ಸೆಗೆ ಒಳಗಾಗಿದ್ದಾರೆ. 2018ರ ಚುನಾವಣೆ ಸಂದರ್ಭದಲ್ಲಿ ಕೇವಲ ಒಂದೇ ತಿಂಗಳಿನಲ್ಲಿ ಓಪನ್​ ಹಾರ್ಟ್​ ಸರ್ಜರಿ ಮಾಡಿಸಿಕೊಂಡು ಇಡೀ ರಾಜ್ಯ ಪ್ರವಾಸ ಮಾಡಿದ್ದರು. 25 ವರ್ಷದಿಂದ ಏಕಾಂಗಿಯಾಗಿ ಪಕ್ಷ ಕಟ್ಟಲು ಹೋರಾಟ ಮಾಡಿದ್ದಾರೆ. ವಿಧಿಯ ಆಟ ಏನೋ ಗೊತ್ತಿಲ್ಲ, ಒಳ್ಳೆಯವರಿಗೆ ದೇವರ ಪರೀಕ್ಷೆ ಮಾಡುತ್ತಾನೆ. ಆದರೆ ನನಗೆ ವಿಶ್ವಾಸ ಇದೆ. ನಾನು ಮಂಜುನಾಥ ಸ್ವಾಮಿಯ ಭಕ್ತ. ನನ್ನ ಆಯಸ್ಸು ತಂದೆಯವರಿಗೆ ಕೊಟ್ಟ ಜನಸೇವೆ ಮಾಡಲು ಅವಕಾಶ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಇದನ್ನು ವೇದಿಕೆ ಮೇಲೆ ಕೂತು ಕೇಳಿಸಿಕೊಳ್ಳುತ್ತಿದ್ದ ಕುಮಾರಸ್ವಾಮಿ ಕಣ್ಣೀರು ಇಟ್ಟರು.

ಇದನ್ನು ಓದಿ: ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಸಿಎಸ್ ಪುಟ್ಟರಾಜು ಅಲ್ಲವೇ ಅಲ್ಲ- ದೊಡ್ಡ ಸುಳಿವು ಕೊಟ್ಟ ಕುಮಾರಸ್ವಾಮಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ಪನ ಆರೋಗ್ಯದ ಬಗ್ಗೆ ನಿಖಿಲ್ ಭಾವುಕ; ಮಗನ ಮಾತು ಕೇಳಿ ವೇದಿಕೆಯಲ್ಲೇ ಗಳಗಳನೇ ಕಣ್ಣೀರಿಟ್ಟ ಕುಮಾರಸ್ವಾಮಿ

https://newsfirstlive.com/wp-content/uploads/2024/03/hd-kumarswami.jpg

Load More