Advertisment

ನಾಮಪತ್ರಕ್ಕೆ ಕೊನೇ ದಿನ; ನಿಖಿಲ್ ಸೇರಿ ಇಂದು ಯಾರು ಯಾರು ಉಮೇದುವಾರಿಕೆ ಸಲ್ಲಿಸ್ತಾರೆ?

author-image
Bheemappa
Updated On
ನಾಮಪತ್ರಕ್ಕೆ ಕೊನೇ ದಿನ; ನಿಖಿಲ್ ಸೇರಿ ಇಂದು ಯಾರು ಯಾರು ಉಮೇದುವಾರಿಕೆ ಸಲ್ಲಿಸ್ತಾರೆ?
Advertisment
  • ಮಾಜಿ ಸಿಎಂಗಳ ಸಮ್ಮುಖದಲ್ಲಿ ನಿಖಿಲ್ ನಾಮಪತ್ರ ಸಲ್ಲಿಕೆ
  • ಮುಡಾ ಮರೆಗೆ ಸರಿಸಿರುವ ಈ ಹೈವೋಲ್ಟೇಜ್​​ ಉಪಕದನ
  • ಚನ್ನಪಟ್ಟಣದಲ್ಲಿ ಅಭಿಮನ್ಯು ವರ್ಸಸ್​ ಸೈನಿಕನ ಮಿನಿ ಸಮರ

ಮೂರು ದಿಕ್ಕು, ಮೂರು ಕ್ಷೇತ್ರದ ಉಪ ಕದನ. ಕಾಂಗ್ರೆಸ್​​ಗೆ ಅಗ್ನಿಪರೀಕ್ಷೆ. ಬಿಜೆಪಿಗೆ ದಿ ಪ್ರತಿಷ್ಠೆ. ದಳಕ್ಕೆ ಮಾತ್ರ ಅಸ್ತಿತ್ವದ ಹೋರಾಟವಾಗಿದೆ. ಮುಡಾವನ್ನ ಮರೆಗೆ ಸರಿಸಿದ ಈ ಹೈವೋಲ್ಟೇಜ್​​ ಕದನ, ಅನುಕಂಪ, ಸಹಾನುಭೂತಿಯ ಮತ ಕೇಳುತ್ತಿದೆ. ಅಧಿಕೃತವಾಗಿ 3 ಕ್ಷೇತ್ರಗಳ ಅಖಾಡಕ್ಕೆ ಅಭ್ಯರ್ಥಿಗಳ ರಂಗಪ್ರವೇಶ ಆಗಿದ್ದು, ಉಪ ಚುನಾವಣೆ ರಂಗು ಪಡೆದಿದೆ.

Advertisment

ಕರ್ನಾಟಕ ಉಪ ಕದನದ ಕುರುಕ್ಷೇತ್ರ ರಂಗೇರುತ್ತಿದೆ. ನಾಡಿನ ನಾಡಿಮಿಡಿತ ಏನು ಅನ್ನೋ ಚಿತ್ರಣ ಕಟ್ಟಿಕೊಡುವ ಈ 3 ವಿಧಾನಸಭಾ ಉಪ ಚುನಾವಣೆ ಪ್ರತಿಷ್ಠೆ, ಅಸ್ತಿತ್ವದ ಹೋರಾಟಕ್ಕೆ ಸಾಕ್ಷಿ ಆಗಲಿದೆ. ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಕಾಳಗ ಶುರುವಾಗಿದ್ದು, ರಣಕಲಿಗಳಿಗೆ ಕದನ ಕಣ ಸೇರುವ ರಣೋತ್ಸಾಹ. ಸದ್ಯ ನಾಮಪತ್ರ ಭರಾಟೆ ಜೋರಾಗಿದ್ದು, ಇವತ್ತು ಉಮೇದುವಾರಿಕೆ ಸಲ್ಲಿಸಲು ಕೊನೆ ದಿನವಾಗಿದೆ.

ಇದನ್ನೂ ಓದಿ: ಗೃಹ ಆರೋಗ್ಯ ಯೋಜನೆಗೆ CM ಸಿದ್ದರಾಮಯ್ಯ ಚಾಲನೆ.. ಬಿಪಿ, ಶುಗರ್, ಕ್ಯಾನ್ಸರ್ ತಪಾಸಣೆ; ಉಚಿತ ಔಷಧಿ ಪೂರೈಕೆ

publive-image

ಉಪ ಚುನಾವಣೆ ಕಣದಲ್ಲಿ ಇವತ್ತು ನಾಮಪತ್ರ ಭರಾಟೆ

ರಂಗೇರಿರುವ ಚನ್ನಪಟ್ಟಣ ಚುನಾವಣ ಅಖಾಡದಲ್ಲಿ ಸೈನಿಕ-ಅಭಿಮನ್ಯು ಚದುರಂಗದಾಟ ಶುರುವಾಗಿದೆ. ಈಗಾಗಲೇ ಕೈ ಹಿಡಿದಿರೋ ಸಿ.ಪಿ ಯೋಗೇಶ್ವರ್‌ ಮಿನಿ ಸಮರವನ್ನ ಮತ್ತಷ್ಟು ರಣರೋಚಕ ಘಟ್ಟಕ್ಕೆ ಕೊಂಡೊಯ್ದಿದ್ದಾರೆ. ಬೊಂಬೆನಾಡಿನ ಕೈ ಅಧಿಪತಿಯಾಗಿ ಈಗಾಗಲೇ ಯೋಗೇಶ್ವರ್ ನಾಮಪತ್ರ ಸಲ್ಲಿಸಿದ್ದಾರೆ. ಇದೀಗ ಎನ್‌ಡಿಎ ಕೂಟದ ಅಭ್ಯರ್ಥಿಯಾಗಿ ಇವತ್ತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಳಿಕ ಚನ್ನಪಟ್ಟಣದ ಶೇರ್ವಾ ಹೋಟೆಲ್ ಸರ್ಕಲ್‌ನಿಂದ ರೋಡ್ ಶೋ ಮೂಲಕ ತಾಲೂಕು ಕಚೇರಿಗೆ ಆಗಮಿಸಲಿದ್ದಾರೆ. ಬಳಿಕ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಹೆಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಮಧ್ಯಾಹ್ನ 12ಗಂಟೆಗೆ ನಿಖಿಲ್ ನಾಮಪತ್ರ ಸಲ್ಲಿಸಲಿದ್ದಾರೆ.

Advertisment

ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿ- ಕೈ ಅಭ್ಯರ್ಥಿ ನಾಮಪತ್ರ

ಇತ್ತ ಶಿಗ್ಗಾಂವಿ ಉಪಕದನ ಕಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಅಖಾಡಕ್ಕೆ ಧುಮುಕಿದ್ದು ಸಾಂಕೇತಿಕವಾಗಿ ನಾಮಪತ್ರ ಕೂಡ ಸಲ್ಲಿಕೆ ಮಾಡಿದ್ದಾರೆ. ಇತ್ತ ಕೈ ಅಭ್ಯರ್ಥಿಯಾಗಿ ಯಾಸಿರ್ ಅಹ್ಮದ್ ಖಾನ್ ಪಠಾಣ್​ಗೆ ಕಾಂಗ್ರೆಸ್ ಟಿಕೆಟ್‌ ನೀಡಿದೆ. ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ ಇಂದು ಅದ್ಧೂರಿ ಮೆರವಣಿಗೆ ಮೂಲಕ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಕೂಡಾ ಇವತ್ತು ಉಮೇದುವಾರಿಕೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯೇ ಯಾಕೆ? ಬಿ.ಎಸ್ ಯಡಿಯೂರಪ್ಪ ಹೇಳಿದ್ದು ನಿಜವಾಗುತ್ತಾ?

publive-image

ಸಂಡೂರಿನಲ್ಲಿ ಬಂಗಾರು ಹನುಮಂತು VS ಅನ್ನಪೂರ್ಣ!

ಗಣಿನಾಡಿನ ಸಂಡೂರಿನಲ್ಲೂ ಬೈ ಎಲೆಕ್ಷನ್ ಧೂಳ್‌ ಎಬ್ಬಿಸಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಇ ತುಕಾರಾಂ ಪತ್ನಿ ಅನ್ನಪೂರ್ಣ ಅಖಾಡಕ್ಕೆ ಧುಮುಕಿದ್ದಾರೆ. ನಿನ್ನೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇವತ್ತು ಅನ್ನಪೂರ್ಣ ವಿರುದ್ಧ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ತಮ್ಮ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ಮೂಲಕ ಮಿನಿ ಸಮರದ ಅಖಾಡದಲ್ಲಿ ಕಾದಾಟಕ್ಕೆ ಅಧಿಕೃತವಾಗಿ ಇಳಿಯಲಿದ್ದಾರೆ.

Advertisment

ಚನ್ನಪಟ್ಟಣ ಬೈ ಎಲೆಕ್ಷನ್‌ ಕಣದಲ್ಲಿ ಅಭಿಮನ್ಯು ವರ್ಸಸ್​ ಸೈನಿಕ ಮುಖಾಮುಖಿ ಆಗಿದ್ದಾರೆ. ಈ ಬಾರಿಯಾದ್ರೂ ಚಕ್ರವ್ಯೂಹವನ್ನ ಅಭಿಮನ್ಯುವಾಗಿ ಭೇದಿಸ್ತಾರಾ? ಎಂಬ ಕೌತುಕ ಮೂಡಿದೆ. ಇತ್ತ ಶಿಗ್ಗಾಂವಿ, ಸಂಡೂರಿನಲ್ಲಿ ಯಾವ ಪಕ್ಷ ಗೆದ್ದು ಬೀಗುತ್ತೆ ಎಂಬ ಕುತೂಹಲ ಹೆಚ್ಚಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment