newsfirstkannada.com

ಹಾಸನ ಅಶ್ಲೀಲ ವಿಡಿಯೋ ಪ್ರಕರಣ.. ವಿಡಿಯೋ ನೋಡೋಕೆ ಧೈರ್ಯ ಮಾಡಿಲ್ಲ ಎಂದ ನಿಖಿಲ್​ ಕುಮಾಸ್ವಾಮಿ

Share :

Published May 4, 2024 at 3:07pm

    ಹಾಸನ ಅಶ್ಲೀಲ ಪ್ರಕರಣಕ್ಕೆ ಸಂಬಂಧಿಸಿ ನಿಖಿಲ್​ ಕುಮಾರಸ್ವಾಮಿ ಏನಂದ್ರು?

    ತಾತ ದೇವೇಗೌಡರ ಆರೋಗ್ಯ ವಿಚಾರಿಸಲು ಬಂದ ಜೆಡಿಎಸ್​ ಯುವ ನಾಯಕ

    ದೇವೇಗೌಡರು ಜೀವನ ತೆರದ ಪುಸ್ತಕ ಎಂದ ಮೊಮ್ಮಗ ನಿಖಿಲ್​ ಕುಮಾರಸ್ವಾಮಿ

ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧಿಸಿ ನಿಖಿಲ್​ ಕುಮಾರಸ್ವಾಮಿ ಮಾತನಾಡಿದ್ದಾರೆ. ವಿಡಿಯೋ ನೋಡೋಕೆ ಧೈರ್ಯ ಮಾಡಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಜೆಡಿಎಸ್ ಯುವ​ ನಾಯಕ ನಿಖಿಲ್​ ಕುಮಾರಸ್ವಾಮಿ, ಒಂದೇ ಒಂದು ಬಹಳ ದುಃಖ ತಂದಿದೆ. ನಮ್ಮ ಸುತ್ತಮುತ್ತಲಿನ ಜನ ನೋಡಿ ಹೇಳಿದ್ರು. ಈ ರೀತಿ ವಿಡಿಯೋಗಳು ಇದ್ದಾಗ ಬ್ಲರ್ ಮಾಡಬೇಕಿತ್ತು. ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ಸರಿಯಲ್ಲ. ಅದು ಸಹ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ದಯಮಾಡಿ ಕೈ ಜೋಡಿಸಿ ಮನವಿ ಮಾಡ್ತೀನಿ.. ದೇವೇಗೌಡರು, ಅಜ್ಜಿ ಬಹಳ ನೊಂದಿದ್ದಾರೆ; ನಿಖಿಲ್ ಕುಮಾರಸ್ವಾಮಿ

ಈ ಒಂದು ಪ್ರಕರಣದಲ್ಲಿ ರಾಜಕೀಯವಾಗಿ ರಾಜ್ಯದ ಜನತೆಗೆ ತಪ್ಪು ಸಂದೇಶ ಕೊಡ್ತಾ ಇದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಅದರಲ್ಲೂ ದೇವೇಗೌಡರು ಜೀವನ ತೆರದ ಪುಸ್ತಕ. ದೇವೇಗೌಡರಾಗಲಿ ನಮ್ಮ ಅಜ್ಜಿ ಯುವಕರಿಗೆ ಸ್ಫೂರ್ತಿ. ದಂಪತಿಗಳು ಯಾವ ರೀತಿ ಬದುಕಿ ಬಾಳಬೇಕು ಎಂಬದಕ್ಕೆ ಅವರೇ ಉದಾಹರಣೆ ಎಂದು ನಿಖಿಲಗಗ ಕುಮಾರಸ್ವಾಮಿ ಹೇಳಿದ್ದಾರೆ.

ದಯಮಾಡಿ ನಾನು ಕೈ ಜೋಡಿಸಿ ಮನವಿ ಮಾಡ್ತೀನಿ. ದೇವೇಗೌಡರಿಗೆ 91-92 ವರ್ಷ ವಯಸ್ಸು. ಸಹಜವಾಗಿ ಈ ಎಲ್ಲ ವಿಷಯ ಕೇಳಿ ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತೆ. ಯಾರು ಸಹ ಊಹೆ ಮಾಡೋಕೆ ಆಗಲ್ಲ. ಈಗಲೂ ಹೇಳಿದ್ರು ಬೆಳಗ್ಗೆ 5 ಗಂಟೆಗೆ ದೇವಸ್ಥಾನಕ್ಕೆ ಹೋಗಿ 9 ಗಂಟೆಗೆ ಬಂದೆ ಅಂತ ಹೇಳಿದ್ರು. ಎಲ್ಲ ಗಿಂತ ಜಾಸ್ತಿ ನೊಂದಿದ್ದಾರೆ ಎಂದು ಮೊಮ್ಮಗ ನಿಖಿಲ್​ ಕುಮಾರಸ್ವಾಮಿಯವರು ಅಜ್ಜ-ಅಜ್ಜಿ ಬಗ್ಗೆ ಮಾತನಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಅಶ್ಲೀಲ ವಿಡಿಯೋ ಪ್ರಕರಣ.. ವಿಡಿಯೋ ನೋಡೋಕೆ ಧೈರ್ಯ ಮಾಡಿಲ್ಲ ಎಂದ ನಿಖಿಲ್​ ಕುಮಾಸ್ವಾಮಿ

https://newsfirstlive.com/wp-content/uploads/2024/05/Nikhi.jpg

Load More