/newsfirstlive-kannada/media/post_attachments/wp-content/uploads/2024/11/NIMHANS.jpg)
ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು (NIMHANS). NIMHANS ಈಗ ಖಾಲಿ ಇರೋ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಹೀಗಾಗಿ ಅರ್ಹ ಅಭ್ಯರ್ಥಿಗಳು ಕೆಲಸಕ್ಕಾಗಿ ಅರ್ಜಿ ಸಲ್ಲಿಕೆ ಮಾಡಬಹುದು.
ನಿಮ್ಹಾನ್ಸ್ ಸಂಸ್ಥೆ ಒಟ್ಟು 2 ಅಟೆಂಡರ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮುಂದಿನ ಬುಧವಾರ ಎಂದರೆ ನವೆಂಬರ್ 6ನೇ ತಾರೀಕು ಬೆಳಗ್ಗೆ 10 ಗಂಟೆಗೆ ಸಂದರ್ಶನ ನಡೆಯಲಿದೆ. ಬೆಂಗಳೂರಿನಲ್ಲೇ ಕೆಲಸ ಬೇಕಾದವರಿಗೆ ಇದೊಂದು ಸುವರ್ಣಾವಕಾಶ.
ಶೈಕ್ಷಣಿಕ ಅರ್ಹತೆ ಏನು?
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪೂರ್ಣಗೊಳಿಸಿರಬೇಕು
ವಯೋಮಿತಿ ಎಷ್ಟು?
ಅಭ್ಯರ್ಥಿಗಳ ವಯಸ್ಸು ಯಾವುದೇ ಕಾರಣಕ್ಕೂ 40 ವರ್ಷ ಮೀರಿರಬಾರದು.
ಉದ್ಯೋಗ ಎಲ್ಲಿ?
ಬೆಂಗಳೂರಿನ NIMHANS ಆಸ್ಪತ್ರೆಯಲ್ಲಿ ಕೆಲಸ.
ರಿಸರ್ವೇಷನ್
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ
ವೇತನ ಎಷ್ಟು?
ಮಾಸಿಕ ₹ 16,000
ಆಯ್ಕೆ ಪ್ರಕ್ರಿಯೆ ಹೇಗೆ?
ಲಿಖಿತ ಪರೀಕ್ಷೆ
ಸಂದರ್ಶನ ನಡೆಯೋದು ಎಲ್ಲಿ?
ಪರೀಕ್ಷಾ ಹಾಲ್ ಮತ್ತು ಬೋರ್ಡ್ ರೂಮ್
NBRC ಕಟ್ಟಡ, ನಿಮ್ಹಾನ್ಸ್, ಬೆಂಗಳೂರು
ಸಂದರ್ಶನ ನಡೆಯುವ ದಿನ:
ನವೆಂಬರ್ 6, 2024 ಬೆಳಗ್ಗೆ 10 ಗಂಟೆಗೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ