ಸಖತ್ ಖುಷಿಯಲ್ಲಿದ್ದಾರೆ ನಿನಗಾಗಿ ಸೀರಿಯಲ್​ ತಂಡ.. ಏನದು ಗೆಸ್​ ಮಾಡ್ತೀರಾ..?

author-image
Veena Gangani
ಸಖತ್ ಖುಷಿಯಲ್ಲಿದ್ದಾರೆ ನಿನಗಾಗಿ ಸೀರಿಯಲ್​ ತಂಡ.. ಏನದು ಗೆಸ್​ ಮಾಡ್ತೀರಾ..?
Advertisment
  • ನೂರಾರು ಕೋಟಿ ಆಸ್ತಿ ಒಡತಿಯಾಗಿದ್ದಾಳೆ ರಚನಾ
  • ಹೊಸ ತಿರುವು ಪಡೆದುಕೊಂಡ ನಿನಗಾಗಿ ಸೀರಿಯಲ್
  • ಹದ್ದಿನ ಕಣ್ಣೀಟ್ಟಿದ್ದ ಕುಟುಂಬದವರಿಗೆ ನರಕದ ದರ್ಶನ

ನಿನಗಾಗಿ ಧಾರಾವಾಹಿ ಇತ್ತಿಚೀಗೆ 300 ಸಂಚಿಕೆಗಳನ್ನ ಪೂರೈಸಿದೆ. ಕಥೆಯಲ್ಲಿ ಮಹಾ ತಿರುವು ಪಡೆದುಕೊಳ್ತಿದೆ. ನೂರಾರು ಕೋಟಿ ಆಸ್ತಿ ಒಡತಿಯಾಗಿದ್ದಾಳೆ ರಚನಾ. ಹೌದು, ನಿನಗಾಗಿ ಧಾರಾವಾಹಿ ಒಂದೇ ಸ್ಟೋರಿಗೆ ಜೋತು ಬೀಳದೇ ಕಥೆಯಲ್ಲಿ ಬೇರೆ ಬೇರೆ ಆಯಾಮಗಳನ್ನ ಅಳವಡಿಸಿಕೊಂಡು ಮುನ್ನುಗ್ಗುತ್ತಿದೆ.

ಇದನ್ನೂ ಓದಿ: 5 ಹುಲಿಗಳ ಅಂತ್ಯ ಕೇಸ್​​.. ವಿಷಪ್ರಾಶನ ಮಾಡಿದವರು ಯಾರು? ತಂದೆ, ಮಗನ ತೀವ್ರ ವಿಚಾರಣೆ

publive-image

ಮೊದಲ ಆಯಾಮದಲ್ಲಿ ರಚನಾ ಸೂಪರ್​ ಸ್ಟಾರ್​ ಆಗಿರೋ ಹಿಂದಿನ ಕಹಾನಿ ಬಿಚ್ಚಿಟ್ಟಿದ್ದಾರೆ. ನಂತರದ ಮೈಲುಗಲ್ಲು ರಚನಾ-ಕೃಷ್ಣ ಭೇಟಿ, ಮಗುನ ಹೆತ್ತರೆ ಮಾತ್ರ ತಾಯಿಯಲ್ಲ. ಮಮತೆ ನೀಡಿದವಳು ತಾಯಿನೋ ಅನ್ನೋದನ್ನ ಬಿತ್ತರಿಸಿತ್ತು. ನಂತರ ಕಥೆ ಹೊರಳಿದ್ದು ಜೀವ-ರಚನಾ ಪ್ರೀತಿಯ ಪಯಣದತ್ತ.

publive-image

ಹೀಗೆ ಸಾಗುತ್ತಿದ್ದ ಕಥೆಯಲ್ಲಿ ಮಹಾ ತಿರುವು ತಂದುಕೊಟ್ಟಿದ್ದು ಜೀವ ಹಿನ್ನಲೆ ನೂರಾರು ಕೋಟಿ ಆಸ್ತಿ, ಕುಟುಂಬ ಇದ್ರು ಕೂಡ ಎಲ್ಲಾ ತೊರೆದು ಜೀವ ದೂರ ಹೋಗಿದ್ಯಾಕೆ ಅನ್ನೋದರ ಸುತ್ತ ಸದ್ಯ ಕಥೆ ಸಾಗ್ತಿದೆ. ಈ ನಡುವೆ ರಣ ಹದ್ದುಗಳ ರೀತಿ ಅಪ್ಪನ ಆಸ್ತಿಗೆ ಕಿತ್ತಾಡ್ತಿದ್ದಾರೆ ಸೋ ಕಾಲ್ಡ್​ ಫ್ಯಾಮಿಲಿ.

publive-image

ಜೀವ ಅಪ್ಪ ಸಾಯೋಕು ಮೊದಲು ಇಡೀ ಆಸ್ತಿನ ಮೊಮ್ಮಗಳು ಕೃಷ್ಣಾಳ ಹೆಸರಿಗೆ ಬರೆದಿದ್ದಾನೆ. ಕೃಷ್ಣ ವಯಸ್ಸಿಗೆ ಬರೋವರೆಗೂ ರಚನಾ ಆಸ್ತಿಗೆ ಒಡತಿಯಾಗಿರುತ್ತಾಳೆ. ಈ ವಿಲ್​ ರಹಸ್ಯ ಹೊರ ಬರ್ತಿದ್ದಾಗೆ, ಆಸ್ತಿ ಬೇಡ ಅಂತಿದ್ದ ಜೀವಗೆ ಶಾಕ್​ ಆಗಿದೆ. ಹದ್ದಿನ ಕಣ್ಣೀಟ್ಟಿದ್ದ ಕುಟುಂಬದವ್ರಿಗೆ ನರಕದ ದರ್ಶನ ಕಾದಿದೆ.

ಈ ನಡುವೆ ಜೀವನ ಅಶ್ವಸ್ತ ಅಮ್ಮ ನಂಬ್ತಿಲ್ಲ. ತಾಯಿ ಯಾಕೆ ಹೀಗೆ ಆಡ್ತಿದ್ದಾಳೆ? ಜೀವನ ಆಸೆ ಅಂತೆ ರಚನಾ ಇಡೀ ಆಸ್ತಿನ ಬಿಟ್ಟುಕೊಟ್ಟು ಮನೆಬಿಟ್ಟು ಹೊರಡ್ತಾಳಾ? ಕುಕ್ಕೋಕೆ ಕಾಯ್ತಿರೋ ರಾಣಗೆ ಕೃಷ್ಣ ಆಹಾರ ಆಗ್ತಾಳಾ? ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment