newsfirstkannada.com

ಟ್ರಕ್ಕಿಂಗ್​ಗೆ ಹೋದವರ ದುರಂತ ಅಂತ್ಯ.. 9 ಜನರ ಪೈಕಿ 4 ಮೃತದೇಹಗಳಿಗಾಗಿ ಮುಂದುವರೆದ ಶೋಧಕಾರ್ಯ

Share :

Published June 6, 2024 at 7:12am

  ಟ್ರಕ್ಕಿಂಗ್​ ಹೋದ 22 ಜನರ ಪೈಕಿ 19 ಮಂದಿ ಬೆಂಗಳೂರಿನವರು

  ಉತ್ತರಾಖಂಡ್ ಸಹಸ್ತ್ರ ತಾಳ್ ಶಿಖರದಲ್ಲಿ ಘನಘೋರ ದುರಂತ

  ಮೃತರ ಪೈಕಿ ಕರ್ನಾಟಕದ ಐವರು, ಮಹಾರಾಷ್ಟ್ರದ 3 ಜನ ಸಾವು

ಉತ್ತರಾಖಂಡ್​​ ಸಹಸ್ತ್ರ ತಾಳ್ ಶಿಖರದ ಚಾರಣಕ್ಕೆ ತೆರಳಿದ್ದ ಬೆಂಗಳೂರಿನ 22 ಚಾರಣಿಗರು ಹವಾಮಾನ ವೈಪರೀತ್ಯದಿಂದಾಗಿ ಹಿಮದ ನಡುವೆ ಸಿಲುಕಿದ್ದಾರೆ. ಈ ಪೈಕಿ 11 ಜನರನ್ನು ರಕ್ಷಣೆ ಮಾಡಿದ್ದು, ಐವರ ಮೃತ ದೇಹಗಳನ್ನು ಹೊರ ತರಲಾಗಿದ್ದು, ಚಾರಣಿಗರ ರಕ್ಷಣೆಯ ದೃಶ್ಯವಂತೂ ರೋಚಕವಾಗಿದೆ. ಉತ್ತರಾಖಂಡ್ ಸಹಸ್ತ್ರ ತಾಳ್ ಶಿಖರದಲ್ಲಿ ಘನಘೋರ ದುರಂತವೇ ನಡೆದಿದೆ. ಹಿಮದ ನಡುವೆ ಹೆಲಿಕಾಪ್ಟರ್​ಗಳ ಹಾರಾಟ.. ಪರ್ವತ ಶ್ರೇಣಿಗಳಲ್ಲಿ ಕನ್ನಡಿಗರಿಗಾಗಿ ಹುಡುಕಾಟ ನಡೆಯಿತು.

ದುರಂತದಲ್ಲಿ 9 ಪ್ರವಾಸಿಗರ ಸಾವು, ಐದು ಮೃತದೇಹ ಹೊರಕ್ಕೆ

ಕರ್ನಾಟಕದಿಂದ 22 ಜನರ ಚಾರಣಿಗರ ತಂಡವೊಂದು ಉತ್ತರಾಖಂಡದ ಎತ್ತರದ ಶಾಸ್ತ್ರತಾಳ್ ಮಯಳಿ ಪ್ರದೇಶಕ್ಕೆ ತೆರಳಿ, ಅಲ್ಲಿಂದ ಚಾರಣ ಆರಂಭಿಸಿತ್ತು. ಚಾರಣದ ಗಮ್ಯಸ್ಥಾನವನ್ನು ತಲುಪಿದ ತಂಡ ಮತ್ತೆ ಶಿಬಿರಕ್ಕೆ ಹಿಂತಿರುಗಲು ಮುಂದಾಗಿದೆ. ಆಗ ಮಾರ್ಗ ಮಧ್ಯೆ ನಡೆಯಬಾರದ ಘಟನೆ ನಡೆದು ಹೋಗಿದೆ. ಹಿಮಗಾಳಿಯಿಂದಾಗಿ ಹವಾಮಾನ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ ಎಲ್ಲ ಚಾರಣಿಗರು ಅದೇ ಸ್ಥಳದಲ್ಲಿ ಅಪಾಯಕ್ಕೆ ಸಿಲುಕಿದ್ದಾರೆ. ಇದರ ಪರಿಣಾಮ 9 ಜನ ಚಾರಣಿಗರು ಮೃತಪಟ್ಟಿದ್ದಾರೆ. 13 ಜನರನ್ನು ರಕ್ಷಣೆ ಮಾಡಲಾಗಿದೆ. ಇದುವರೆಗೆ ಐವರ ಮೃತದೇಹ ಮಾತ್ರ ಸಿಕ್ಕಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಮೃತರ ಪೈಕಿ ಕರ್ನಾಟಕದ ಐವರು, ಮಹಾರಾಷ್ಟ್ರದ ಮೂವರು, ಇನ್ನೊಬ್ಬರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಪತ್ತೆಯಾದ ಮೃತರ ವಿವರ

 • ಸಿಂಧು ವೆಕೆಕಲಂ
 • ಆಶಾ ಸುಧಾಕರ್
 • ಸುಜಾತ ಮುನ್ಗೂರ್ವಾಡಿ
 • ವಿನಾಯಕ್ ಮುನ್ಗೂರ್ವಾಡಿ
 • ಚೈತ್ರಾ ಪ್ರಣೀತ್

ನಾಪತ್ತೆಯಾಗಿರುವ ಪ್ರವಾಸಿಗರು

 • ಅನಿತಾ ರಂಗಪ್ಪ
 • ಪದ್ಮಿನಿ ಹೆಗ್ಡೆ
 • ವೆಂಕಟೇಶ್ ಪ್ರಸಾದ್ ಕೆ.ಎನ್
 • ಪದ್ಮನಾಭ ಕೆ.ಪಿ

ಕನ್ನಡಿಗರ ರಕ್ಷಣೆಗಾಗಿ ಡೆಹ್ರಾಡೂನ್​ಗೆ ಸಚಿವ ಕೃಷ್ಣಬೈರೇಗೌಡ

ಚಾರಣಕ್ಕೆ ಹೋಗಿದ್ದ 22 ಜನರಲ್ಲಿ 13 ಮಂದಿಯನ್ನು ರಕ್ಷಣೆ ಮಾಡಿ, ಅಕ್ಕ-ಪಕ್ಕದ ಗ್ರಾಮಗಳಿಗೆ ಹೆಲಿಕಾಫ್ಟರ್​ ಮೂಲಕ ಸ್ಥಳಾಂತರ ಮಾಡಲಾಗಿದೆ. ಇನ್ನು ಉತ್ತರಾಖಂಡದಲ್ಲಿ ಸಿಲುಕಿರುವ ಕರ್ನಾಟಕದ ಚಾರಣಿಗರನ್ನು ರಕ್ಷಿಸುವ ಕಾರ್ಯಾಚರಣೆ ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಕಂದಾಯ ಸಚಿವ ಕೃಷ್ಣಬೈರೇಗೌಡ ಡೆಹ್ರಾಡೂನ್​ಗೆ ತೆರಳಿ ರಕ್ಷಣಾ ಕಾರ್ಯಕ್ಕೆ ಸಹಕಾರ ನೀಡಲಿದ್ದಾರೆ. ಚಾರಣಿಗರ ಮೃತದೇಹಗಳನ್ನು ಹೊರತೆಗೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಉತ್ತರಖಾಂಡ್ ಘೋರ ದುರಂತ; 9 ಮಂದಿ ಕನ್ನಡಿಗರಿಗೆ ಸಿಎಂ ಸಂತಾಪ

ಇನ್ನು ಟ್ರಕ್ಕಿಂಗ್​ ಹೋದ 22 ಜನರ ಪೈಕಿ, 19 ಮಂದಿ ಬೆಂಗಳೂರಿನವರು. ಉಳಿದ ಮೂವರು ಮಹಾರಾಷ್ಟ ಮೂಲದ ಗೈಡ್​ಗಳು. ಟ್ರಕ್ಕಿಂಗ್​ ಹೋದವರು ದುರಂತ ಅಂತ್ಯ ಕಂಡಿದ್ದು, ಉಳಿದ ನಾಲ್ವರಿಗಾಗಿ ಇವತ್ತು ಶೋಧ ಕಾರ್ಯ ಮುಂದುವರಿಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ರಕ್ಕಿಂಗ್​ಗೆ ಹೋದವರ ದುರಂತ ಅಂತ್ಯ.. 9 ಜನರ ಪೈಕಿ 4 ಮೃತದೇಹಗಳಿಗಾಗಿ ಮುಂದುವರೆದ ಶೋಧಕಾರ್ಯ

https://newsfirstlive.com/wp-content/uploads/2024/06/UTTARAKHAND.jpg

Load More