/newsfirstlive-kannada/media/post_attachments/wp-content/uploads/2024/07/nipah_virus.jpg)
ತಿರುವನಂತಪುರ: ಕೇರಳಕ್ಕೆ ಮತ್ತೆ ನಿಫಾ ಸೋಂಕು ವಕ್ಕರಿಸಿದೆ. ಪಾಲಕ್ಕಾಡ್ ಮೂಲದ 38 ವರ್ಷದ ಮಹಿಳೆಯೊಬ್ಬರಿಗೆ ನಿಫಾ ಸೋಂಕು ದೃಢಪಟ್ಟಿದೆ. ಹೀಗಾಗಿ ಕೋಝಿಕ್ಕೋಡ್ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ಮಹಿಳೆ ಗಂಭೀರ ಸ್ಥಿತಿಯಲ್ಲಿ ಇದ್ದಾಳೆ.
ಇದನ್ನೂ ಓದಿ: ಗಣಪತಿ, ನಾಗರ ಮೂರ್ತಿಗೆ ಕಾಲಿಂದ ಒದ್ದು ವಿಕೃತಿ; ಶಿವಮೊಗ್ಗದಲ್ಲಿ ಟೈಟ್ ಸೆಕ್ಯೂರಿಟಿ
ಇನ್ನೂ, ಮಹಿಳೆಯ 10 ವರ್ಷದ ಮಗಳು, ಸಂಬಂಧಿಕರಿಗೂ ಪರೀಕ್ಷೆ ಹಾಗೂ ಆಕೆಯ ಸಂಪರ್ಕಕ್ಕೆ ಬಂದ 57 ಜನರಿಗೆ ಕ್ವಾರಂಟೈನ್ ಮಾಡಲಾಗಿದೆ. ಈಗಾಗಲೇ 110 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಕೇರಳದಲ್ಲಿ ಇತ್ತೀಚೆಗೆ 2 ನಿಫಾ ವೈರಸ್ ಸೋಂಕು ಪತ್ತೆಯಾಗಿತ್ತು.
ಶನಿವಾರ ಸೋಂಕಿನಿಂದ ಓರ್ವ ಬಾಲಕಿ ಮೃತಪಟ್ಟಿದ್ದಳು. ಶನಿವಾರ, ಕೋಝಿಕ್ಕೋಡ್‌ನಲ್ಲಿ 18 ವರ್ಷದ ಬಾಲಕಿಯ ಸಾವು ನಿಪಾ ಸೋಂಕಿನಿಂದ ಉಂಟಾಗಿದೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ. ರಾಜ್ಯದಲ್ಲಿ ಎರಡು ನಿಪಾ ವೈರಸ್ ಪ್ರಕರಣಗಳು ದೃಢಪಟ್ಟ ನಂತರ ಮಲಪ್ಪುರಂ, ಪಾಲಕ್ಕಾಡ್ ಮತ್ತು ಕೋಝಿಕ್ಕೋಡ್ ಈ ಮೂರು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ