newsfirstkannada.com

ಕೇರಳದಲ್ಲಿ ನಿಫಾ, ಮಹಾರಾಷ್ಟ್ರದಲ್ಲಿ ಝಿಕಾ.. ಮತ್ತೆ ಆತಂಕ ಹೆಚ್ಚಿಸಿದ ವೈರಸ್; ದೇಶಾದ್ಯಂತ ವ್ಯಾಪಕ ಕಟ್ಟೆಚ್ಚರ

Share :

15-09-2023

    ಕೊರೊನಾ ಮಹಾಮಾರಿ ಕಾಟವನ್ನ ಇನ್ನೂ ಯಾರು ಮರೆತಿಲ್ಲ

    ನಿನ್ನೆವರೆಗೂ ಐದು ಮಂದಿಗೆ ನಿಫಾ ವೈರಸ್ ಸೋಂಕು ದೃಢವಾಗಿತ್ತು

    1947 ರಲ್ಲಿ ಉಗಾಂಡಾದಲ್ಲಿ ಮೊದಲ ಬಾರಿಗೆ ಝಿಕಾ ವೈರಸ್ ಪತ್ತೆ

ಕೊರೊನಾ ಅನ್ನೋ ಮಹಾಮಾರಿ ಕೊಟ್ಟ ಕಾಟವನ್ನ ಈ ಶತಮಾನದ ಯಾರೊಬ್ಬರು ಮರೆಯೋದಕ್ಕೆ ಸಾಧ್ಯವಿಲ್ಲ. ಲಾಕ್‌ಡೌನ್‌, ಕಂಟೋನ್‌ಮೆಂಟ್ ಜೋನ್, ವಾಕ್ಸಿನ್‌ ಅಬ್ಬಾ ಆ ದಿನಗಳು ಯಾವ ಶತ್ರು ದೇಶಕ್ಕೆ ಬೇಡ ಅನ್ನೋರು ಬಹಳಷ್ಟು ಮಂದಿ ಇದ್ದಾರೆ. ಕೋವಿಡ್-19 ಅನ್ನೋ ವೈರಸ್‌ನಿಂದ ದೂರವಾಗಿ ನಿಟ್ಟುಸಿರು ಬಿಟ್ಟಿರೋ ದೇಶದ ಜನತೆಗೆ ಮತ್ತೊಂದು ವೈರಸ್ ಹಾವಳಿ ಕೇಳಿಸಲು ಆರಂಭವಾಗಿದೆ. ಕೇರಳದಲ್ಲಿ ನಿಫಾ ವೈರಸ್ ಅಕ್ಷರಶಃ ಕೊರೊನಾ ದಿನಗಳನ್ನೇ ನೆನಪಿಸಿದ್ರೆ, ಮಹಾರಾಷ್ಟ್ರದಲ್ಲಿ ಝಿಕಾ ನಿಧಾನವಾಗಿ ಒಬ್ಬರಿಂದ ಒಬ್ಬರಿಗೆ ಹರಡೋ ಮುನ್ಸೂಚನೆಯನ್ನ ಕೊಟ್ಟಿದೆ.

ಕೇರಳದ ಕೋಝಿಕೋಡ್‌ನಲ್ಲಿ ನಿಫಾ ವೈರಸ್ ಹಾವಳಿ ಹೆಚ್ಚಾಗಿದೆ. ನಿನ್ನೆವರೆಗೂ ಐದು ಮಂದಿಗೆ ನಿಫಾ ವೈರಸ್ ಸೋಂಕು ತಗುಲಿದ್ದು ದೃಢವಾಗಿತ್ತು. ಇದೀಗ ಮತ್ತೊಬ್ಬ ರೋಗಿಗೆ ನಿಫಾ ವೈರಸ್ ತಗುಲಿರೋದು ಪತ್ತೆಯಾಗಿದೆ. 39 ವರ್ಷದ ವ್ಯಕ್ತಿಗೆ ನಿಫಾ ವೈರಸ್ ಪತ್ತೆಯಾಗಿದ್ದು, ಆತನ ಸಂಪರ್ಕದಲ್ಲಿದ್ದೋರ ಪತ್ತೆ ಹಚ್ಚಲಾಗುತ್ತಿದೆ. ಇದರೊಂದಿಗೆ ನಿಫಾ ವೈರಸ್‌ಗೆ ತುತ್ತಾದವರ ಸಂಖ್ಯೆ ಕೇರಳದಲ್ಲಿ 6ಕ್ಕೆ ಏರಿಕೆಯಾಗಿದೆ. ಕೇರಳ ಆರೋಗ್ಯ ಇಲಾಖೆ ತೀವ್ರ ಕಟ್ಟೆಚ್ಚರ ಘೋಷಿಸಿದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಕೇರಳದಲ್ಲಿ ನಿಫಾ ವೈರಸ್ ಕಾಟವಾದ್ರೆ ಮಹಾರಾಷ್ಟ್ರದಲ್ಲಿ ಝಿಕಾ ವೈರಸ್ ಹಾವಳಿ ಹೆಚ್ಚಾಗಿದೆ. ಇಬ್ಬರಲ್ಲಿ ಸದ್ಯ ಝಿಕಾ ಸೋಂಕು ದೃಢಪಟ್ಟಿದೆ. 1947 ರಲ್ಲಿ ಉಗಾಂಡಾದಲ್ಲಿ ಮೊದಲ ಬಾರಿಗೆ ಝಿಕಾ ವೈರಸ್ ಸೋಂಕು ವರದಿಯಾಗಿತ್ತು. ಈಡಿಸ್ ಸೊಳ್ಳೆಯ ಕಚ್ಚುವಿಕೆಯ ಮೂಲಕ ಹರಡುವ ರೋಗವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಕೇರಳ, ಮಹಾರಾಷ್ಟ್ರದಲ್ಲಿ ಹಬ್ಬುತ್ತಿರುವ ವೈರಸ್‌ಗಳಿಂದ ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಕೇರಳದಲ್ಲಿ ನಿಫಾ, ಮಹಾರಾಷ್ಟ್ರದಲ್ಲಿ ಝಿಕಾ.. ಮತ್ತೆ ಆತಂಕ ಹೆಚ್ಚಿಸಿದ ವೈರಸ್; ದೇಶಾದ್ಯಂತ ವ್ಯಾಪಕ ಕಟ್ಟೆಚ್ಚರ

https://newsfirstlive.com/wp-content/uploads/2023/09/nipah-virus.jpg

Load More