/newsfirstlive-kannada/media/post_attachments/wp-content/uploads/2025/05/Nirav_Modi.jpg)
ನವದೆಹಲಿ: ವಜ್ರದ ಉದ್ಯಮಿ ನೀರವ್ ಮೋದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಲಂಡನ್ ಹೈಕೋರ್ಟ್ ಮತ್ತೊಮ್ಮೆ ತಿರಸ್ಕಾರ ಮಾಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ)ಗೆ 6,000 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ವಜ್ರದ ಉದ್ಯಮಿ 2019ರಿಂದಲೂ ಇಂಗ್ಲೆಂಡ್ನ ಜೈಲಿನಲ್ಲಿದ್ದಾರೆ ಎನ್ನಲಾಗಿದೆ.
ಲಂಡನ್ನ ಕಿಂಗ್ಸ್ ಬೆಂಚ್ ಡಿವಿಷನ್ನಲ್ಲಿರುವ ಹೈಕೋರ್ಟ್ಗೆ ನೀರವ್ ಮೋದಿ ಪರ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಾಲಯ ಜಾಮೀನು ನೀಡಲು ತಿರಸ್ಕಾರ ಮಾಡಿದೆ. ಲಂಡನ್ಗೆ ಭೇಟಿ ನೀಡಿದ್ದ ತನಿಖಾಧಿಕಾರಿಗಳು ಮತ್ತು ಕಾನೂನು ಅಧಿಕಾರಿಗಳು ಜಾಮೀನು ನೀಡದಂತೆ ನೋಡಿಕೊಳ್ಳಬೇಕು ಎಂದು ವಕೀಲರಿಗೆ ಮೊದಲೇ ತಿಳಿಸಿದ್ದರು.
ಇದನ್ನೂ ಓದಿ:ಕನ್ನಡಿಗ ಪಡಿಕ್ಕಲ್ RCB ತಂಡದಲ್ಲಿ ಆಡ್ತಾರಾ.. ಮಯಾಂಕ್ ಅಗರ್ವಾಲ್ಗೆ ಎಷ್ಟು ಕೋಟಿ ಹಣ ಕೊಡಲಾಗಿದೆ?
ಅದರಂತೆ ಕೋರ್ಟ್ನಲ್ಲಿ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ ವಕೀಲರು ಜಾಮೀನು ಅನ್ನು ಯಾವುದೇ ಕಾರಣಕ್ಕೂ ನೀಡಬಾರದು ಎಂದು ಬಲವಾಗಿ ವಾದ ಮಂಡಿಸಿದರು. ಇದನ್ನು ಪರಿಗಣಿಸಿದ ನ್ಯಾಯಾಲಯ ನೀರವ್ ಮೋದಿಗೆ ಜಾಮೀನು ನಿರಾಕರಣೆ ಮಾಡಿದೆ. ಇದರಿಂದ ಪರಾರಿಯಾಗಿದ್ದ ವಜ್ರದ ಉದ್ಯಮಿಗೆ ಮತ್ತೆ ಜೈಲೆ ಗತಿ ಆಗಿದೆ.
ನೀರವ್ ಮೋದಿಗೆ ಜಾಮೀನು ಸಿಗದಂತೆ ವಕೀಲರ ವಾದ ಮಂಡನೆಯನ್ನು ಸಿಬಿಐ ಸಮರ್ಥಿಸಿಕೊಂಡಿದೆ. ಪಿಎನ್ಬಿ ಬ್ಯಾಂಕ್ಗೆ ಸುಮಾರು 6,498.20 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪ ಹೊತ್ತಿರುವ ನೀರವ್ ಮೋದಿ ಭಾರತ ಬಿಟ್ಟು ಪರಾರಿಯಾಗಿದ್ದರು. ಈ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ವಿಚಾರಣೆಗಾಗಿ ಸಿಬಿಐಗೆ ಬೇಕಾಗಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ