ಸತತ 6ನೇ ಬಾರಿಯೂ ಮದ್ರಾಸ್ IITಗೆ ಅಗ್ರಸ್ಥಾನ.. ಟಾಪ್ 10ರಲ್ಲಿ ಬೆಂಗಳೂರು IIScಗೆ ಎಷ್ಟನೇ ಸ್ಥಾನ?

author-image
Gopal Kulkarni
Updated On
ಸತತ 6ನೇ ಬಾರಿಯೂ ಮದ್ರಾಸ್ IITಗೆ ಅಗ್ರಸ್ಥಾನ.. ಟಾಪ್ 10ರಲ್ಲಿ ಬೆಂಗಳೂರು IIScಗೆ ಎಷ್ಟನೇ ಸ್ಥಾನ?
Advertisment
  • NIRF Ranking ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಪಡೆದ ಮದ್ರಾಸ್​ IIT
  • ಕರ್ನಾಟಕದ ಯಾವ ಸಂಸ್ಥೆಗೆ ಟಾಪ್​ 10 ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ?
  • ಸತತ ಆರನೇ ಬಾರಿಗೆ NIRF ಱಂಕಿಂಗ್ ಪಟ್ಟಿಯಲ್ಲಿ ಮದ್ರಾಸ್ ಫಸ್ಟ್​!

ನವದೆಹಲಿ: NIRF, ನ್ಯಾಷನಲ್ ಇನ್ಸ್​ಟ್ಯೂಷನಲ್​ ಱಂಕಿಂಗ್​ ಫ್ರೇಮ್​ವರ್ಕ್​ 2024ರ ಸಾಲಿನ ಱಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂದು ತನ್ನ ವೆಬ್​ಸೈಟ್​ನಲ್ಲಿ ಱಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿರುವ ಎನ್​ಐಆರ್​ಎಫ್​, ಭಾರತದ ಟಾಪ್​ 10 ಐಐಟಿ ಸಂಸ್ಥೆಗಳ ಪ್ರತಿಭೆಗನುಣವಾಗಿ ಱಂಕ್ ನೀಡಿದೆ.

ನ್ಯಾಷನಲ್ ಇನ್ಸ್​ಟ್ಯೂಷನಲ್ ಱಂಕಿಂಗ್ ಫ್ರೇಮ್ ​ವರ್ಕ್​ ಬಿಡುಗಡೆ ಮಾಡಿರುವ ಱಂಕಿಂಗ್ ಪಟ್ಟಿಯಲ್ಲಿ ಮತ್ತೆ ಮದ್ರಾಸ್ ಐಐಟಿ ಸಂಸ್ಥೆ ಮೊದಲ ಸ್ಥಾನದಲ್ಲಿದೆ. ಸತತ ಆರು ವರ್ಷಗಳಿಂದ ಮದ್ರಾಸ್ ಐಐಟಿ ಕಾಲೇಜು ಮೊದಲ ಱಂಕ್ ಪಡೆಯುವ ಮೂಲಕ ದಾಖಲೆ ಮೆರೆದಿದೆ.

ಇದನ್ನೂ ಓದಿ:IIT ದೆಹಲಿಯಿಂದ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ.. ಎಷ್ಟು ಮಂದಿಗೆ PhD ನೀಡಿದ್ರು?

publive-image
ಒಟ್ಟು 10,885 ಐಐಟಿ ಸಂಸ್ಥೆಗಳು 9ನೇ ಆವೃತ್ತಿಯ ಱಂಕಿಂಗ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು. ಅವುಗಳಲ್ಲಿ ಮದ್ರಾಸ್ ಐಐಟಿ ಎಲ್ಲಾ ವಿಭಾಗಗಳ ಜೊತೆಗೆ ಎಂಜಿನಿಯರಿಂಗ್ ವಿಭಾಗದಲ್ಲಿಯೂ ಕೂಡ ಅಗ್ರಸ್ಥಾನವನ್ನು ಮತ್ತೊಮ್ಮೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿವೆ. 2016ರಿಂದಲೂ ಮೊದಲ ಱಂಕ್​ ಪಡೆದುಕೊಳ್ಳುತ್ತಲೇ ಬಂದಿದೆ. ಅದರಲ್ಲೂ ಎಂಜಿನಿಯರಿಂಗ್ ವಿಭಾಗದಲ್ಲಿ ಮದ್ರಾಸ್ ಐಐಟಿ ತನ್ನ ಅಗ್ರಸ್ಥಾನವನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ:ಸ್ಕಾಲರ್​ಶಿಪ್​ಗಾಗಿ ಇನ್ಫೋಸಿಸ್ ಅರ್ಜಿ ಆಹ್ವಾನ.. ಆಯ್ಕೆಯಾದವರಿಗೆ ಎಷ್ಟು ಲಕ್ಷ? ಅರ್ಹತೆಗಳು ಏನು?

ಇನ್ನು ಬೆಂಗಳೂರಿನ ಐಐಎಸ್​ಸಿ ಱಂಕಿಂಗ್​ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಳ್ಳುವ ಮೂಲಕ, ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ಬಾಂಬೆ ಐಐಟಿ ಮೂರನೇ ಸ್ಥಾನದಲ್ಲಿದೆ.

ಟಾಪ್​ 10 ಪಟ್ಟಿಯಲ್ಲಿರುವ ಸಂಸ್ಥೆಗಳು

1) ಭಾರತೀಯ ತಂತ್ರಜ್ಞಾನ ಸಂಸ್ಥೆ(IIT) ಮದ್ರಾಸ್ (ಚೆನ್ನೈ)
2 ) ಭಾರತೀಯ ವಿಜ್ಞಾನ ಸಂಸ್ಥೆ (IISc) ಬೆಂಗಳೂರು
3) ಭಾರತೀಯ ತಂತ್ರಜ್ಞಾನ ಸಂಸ್ಥೆ(IIT) ಬಾಂಬೆ (ಮುಂಬೈ)
4) ಭಾರತೀಯ ತಂತ್ರಜ್ಞಾನ ಸಂಸ್ಥೆ(IIT) ದೆಹಲಿ (ನವದೆಹಲಿ)
5) ಭಾರತೀಯ ತಂತ್ರಜ್ಞಾನ ಸಂಸ್ಥೆ(IIT) ಕಾನ್ಪುರ್ (ಉತ್ತರಪ್ರದೇಶ
6) ಭಾರತೀಯ ತಂತ್ರಜ್ಞಾನ ಸಂಸ್ಥೆ(IIT)ಖರಗ್​ಪುರ್ (ಪ.ಬಂಗಾಳ)
7) ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(AIMS) (ದೆಹಲಿ)
8 )ಭಾರತೀಯ ತಂತ್ರಜ್ಞಾನ ಸಂಸ್ಥೆ(IIT) ಗುಹವಾಟಿ (ಅಸ್ಸಾಂ)
9) ಭಾರತೀಯ ತಂತ್ರಜ್ಞಾನ ಸಂಸ್ಥೆ(IIT) ರೂಕ್ರೀ (ಉತ್ತರಾಖಂಡ್)
10)ಜವಹಾರಲಾಲ್ ನೆಹರು ವಿವಿ (JNU) ದೆಹಲಿ (ನವದೆಹಲಿ)

ಹೀಗೆ ಒಟ್ಟು ಹತ್ತು ಐಐಟಿ ಹಾಗೂ ಐಐಎಸ್​ಸಿ ಸಂಸ್ಥೆಗಳು ಟಾಪ್10 ಪಟ್ಟಿಯಲ್ಲಿ ತಮ್ಮ ಹೆಸರನ್ನು ಪಡೆದುಕೊಂಡಿವೆ. ಅದರಲ್ಲೂ ಮದ್ರಾಸ್ ಐಐಟಿ 6ನೇ ಬಾರಿಯೂ ತನ್ನ ಮೊದಲ ಸ್ಥಾನ ಕಾಪಾಡಿಕೊಳ್ಳುವ ಮೂಲಕ, ತನ್ನ ವಿಶ್ವಾರ್ಹತೆಯನ್ನು ಮತ್ತೊಮ್ಮೆ ಸಾಬೀತು ಪಡೆಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment