/newsfirstlive-kannada/media/post_attachments/wp-content/uploads/2025/02/modi-Budget-Siddaramaiah.jpg)
ಕೇಂದ್ರ ಸರ್ಕಾರ ಈ ಬಜೆಟ್ ಗಾತ್ರದಲ್ಲಿ ದಾಖಲೆ ಬರೆದಿದೆ. ನಿರೀಕ್ಷೆಯಂತೆ ಈ ಬಾರಿ ಅವರ ಬಜೆಟ್ ಗಾತ್ರ 50 ಲಕ್ಷ ಕೋಟಿ ರೂಪಾಯಿ ಮೈಲಿಗಲ್ಲು ಕ್ರಾಸ್ ಮಾಡಿದೆ. ಲೋಕಸಭೆಯಲ್ಲಿ 50 ಲಕ್ಷ 65 ಸಾವಿರ 345 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದೆ. ಇಡೀ ಬಜೆಟ್ ನೋಡಿದ್ರೆ ಉತ್ತರ, ಈಶಾನ್ಯ ಮೂಲೆಗೆ ದುಡ್ಡಿನ ಸುರಿಮಳೆ ಆಗಿದೆ. ದಕ್ಷಿಣ ಮತ್ತೊಮ್ಮೆ ಕಡೆಗಣನೆಗೆ ತುತ್ತಾಗಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದ ಮೇಲೆ ಅದೇನ್ ಮುನಿಸಿತ್ತೋ ಚೂರು ಕರುಣೆನೂ ತೋರಿಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಇದನ್ನೂ ಓದಿ: ₹12 ಲಕ್ಷ ಆದಾಯ ತೆರಿಗೆ ವಿನಾಯಿತಿ.. ಇದರಿಂದ ಯಾರಿಗೆಲ್ಲಾ ಲಾಭ? ಅಧಿಕೃತ ಟ್ಯಾಕ್ಸ್ ಪಟ್ಟಿ ಇಲ್ಲಿದೆ!
50 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ ರಾಜ್ಯಕ್ಕೆ ಸಿಕ್ಕಿದ್ದೇನು?
ಉತ್ತರ, ಈಶಾನ್ಯದತ್ತ ಚಿತ್ತ ಹರಿಸಿ, ದಕ್ಷಿಣ ಮರೆತ ಕೇಂದ್ರ?
ಕೇಂದ್ರ ಬಜೆಟ್ ಮೇಲೆ ಹೊತ್ತಿದ್ದ ಭಾರೀ ನಿರೀಕ್ಷೆಗಳು ಭ್ರಮನಿರಸನಕ್ಕೆ ತಳ್ಳಿವೆ. ರಾಜ್ಯ ಸರ್ಕಾರ ಕೊಟ್ಟ ದುಡ್ಡಿನ ಪಟ್ಟಿಗೆ ಕ್ಯಾರೇ ಎನ್ನದೇ ಮತ್ತದೇ ಮಲತಾಯಿ ಧೋರಣೆ ತಾಳಿದೆ. ಬಿಹಾರದತ್ತ ಚಿತ್ತ ನೆಟ್ಟ ಕೇಂದ್ರ ಸರ್ಕಾರ ಮುಂಬರುವ ಚುನಾವಣೆಯ ಮ್ಯಾನಿಫೆಸ್ಟೋ ರಿಲೀಸ್ ಮಾಡಿದಂತಿದೆ. ಕೇಂದ್ರದ ಈ ಧೋರಣೆ, ಒಕ್ಕೂಟ ವ್ಯವಸ್ಥೆಗೆ ಆತಂಕ ಮೂಡಿಸುತ್ತಿದೆ ಅಂತ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಬೇಡಿಕೆಗಳ ಬುಕ್ ಲೆಟ್ ಕೊಟ್ಟು ಮನವಿ ಮಾಡಿದ್ರು, ಬಂದಿಲ್ಲ ಅಂದ್ರೆ ಹೇಗೆ ಅಂತ ಪ್ರಶ್ನಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಬಿಜೆಪಿ 2023 ವಿಧಾನಸಭಾ ಚುನಾವಣೆ ಸೋಲಿನ ಸೇಡನ್ನು ಬಜೆಟ್‌ನಲ್ಲಿ ತೀರಿಸಿಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಸಂಸದ ಜಿ.ಸಿ.ಚಂದ್ರಶೇಖರ್, ರಾಜ್ಯಕ್ಕೆ ಏನೂ ಕೊಟ್ಟಿಲ್ಲ, ಹೇಳೋಕೆ ಏನು ಉಳಿದಿಲ್ಲ. ಕರ್ನಾಟಕದಿಂದ ಆಯ್ಕೆ ಆದ ನಿರ್ಮಲಾ ನಿರ್ಲಕ್ಷ್ಯ ನೋಡಿದ್ರೆ, ನಮಗೆ ನಾಚಿಕೆ ಆಗ್ತಿದೆ. ಕಳೆದ ಬಾರಿ ಆಂಧ್ರ, ಈ ಬಾರಿ ಬಿಹಾರ.. ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟದ ಅಗತ್ಯ ಇದೆ ಎಂದಿದ್ದಾರೆ. ಮಾಜಿ ಸಂಸದ ಡಿ.ಕೆ ಸುರೇಶ್ ಅವರು ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಬರೀ ಚಿಪ್ಪು, ಮೊಟ್ಟೆ, ಮೂರು ನಾಮ, ನನ್ನ ತೆರಿಗೆ ನನ್ನ ಹಕ್ಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ❌
ಮೇಕೆದಾಟು ಯೋಜನೆ ❌
ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ❌
ವಿಶೇಷ ಅನುದಾನ ❌
ಬಿಸಿನೆಸ್ ಕಾರಿಡಾರ್ ಗೆ ಅನುದಾನ ❌ಕನ್ನಡಿಗರ ಹಕ್ಕೊತ್ತಾಯಗಳಿಗೆ ಬೆಲೆಯೇ ಇಲ್ಲವೇ? #Budget2025#InjusticeToKarnataka#MyTaxMyRight#ನಮ್ಮತೆರಿಗೆ_ನಮ್ಮಹಕ್ಕುpic.twitter.com/S34H8Pmvpl
— DK Suresh (@DKSureshINC)
ಭದ್ರಾ ಮೇಲ್ದಂಡೆ ಯೋಜನೆ ❌
ಮೇಕೆದಾಟು ಯೋಜನೆ ❌
ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ❌
ವಿಶೇಷ ಅನುದಾನ ❌
ಬಿಸಿನೆಸ್ ಕಾರಿಡಾರ್ ಗೆ ಅನುದಾನ ❌
ಕನ್ನಡಿಗರ ಹಕ್ಕೊತ್ತಾಯಗಳಿಗೆ ಬೆಲೆಯೇ ಇಲ್ಲವೇ? #Budget2025#InjusticeToKarnataka#MyTaxMyRight#ನಮ್ಮತೆರಿಗೆ_ನಮ್ಮಹಕ್ಕುpic.twitter.com/S34H8Pmvpl— DK Suresh (@DKSureshINC) February 1, 2025
">February 1, 2025
ಕಾಂಗ್ರೆಸ್ ನಾಯಕರ ಈ ವಾದವನ್ನ ರಾಜ್ಯ ಬಿಜೆಪಿ ನಾಯಕರು ಒಪ್ಪಲು ಸಿದ್ಧವಿಲ್ಲ. ರೈಲ್ವೇ, ರೋಡ್ನಲ್ಲಿ ರಾಜ್ಯಕ್ಕೆ ಅನುದಾನ ಸಿಗಲಿದೆ. ರಾಜ್ಯಕ್ಕೆ ಸುಮಾರು 7 ಸಾವಿರ ಕೋಟಿ ಸಿಗಲಿದೆ. ರಾಜ್ಯ ಸರ್ಕಾರ ಈ ಕ್ಯಾತೆ ಬಿಟ್ಟು 16ನೇ ಹಣಕಾಸಿನ ಬಗ್ಗೆ ರಾಜ್ಯ ಚಿಂತನೆ ಮಾಡಬೇಕು ಅಂತ ಸಂಸದ ಬೊಮ್ಮಾಯಿ ಸಲಹೆ ಕೊಟ್ಟಿದ್ದಾರೆ. ಕೇಂದ್ರ ಸಚಿವ ವಿ. ಸೋಮಣ್ಣ ಅವರ ಪ್ರಕಾರ ಇದು ಅತ್ಯಂತ ಉತ್ತಮವಾದ ಬಜೆಟ್. ಕರ್ನಾಟಕಕ್ಕೂ ರೈಲ್ವೇಯ ಯೋಜನೆಗಳನ್ನ ಮುಗಿಸಲು ಹಣ ಮೀಸಲಿರಿಸಿದ್ದಾರೆ ಅಂತಾ ಸಮರ್ಥನೆ ಮಾಡ್ಕೊಂಡಿದ್ದಾರೆ.
ಯಾವ ಸರ್ಕಾರ ಬಂದ್ರು ಅಷ್ಟೆ, ಕರ್ನಾಟಕ ಪರಿಸ್ಥಿತಿ ಇಷ್ಟೇ. ಹತ್ತಾರು ಯೋಜನೆಗಳ ಫೈಲ್ಗಳು ಧೂಳು ತಿನ್ನುವಂತಾಗಿದೆ. ಇತ್ತ ಗ್ಯಾರಂಟಿ ಕೊಟ್ಟ ಕಾಂಗ್ರೆಸ್, ದೊಡ್ಡ ಯೋಜನೆ ಕೈಗೆತ್ತಿಕೊಳ್ಳಲಾಗದ ಸ್ಥಿತಿಯಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ