ಮನೆಯ ಟಾಯ್ಲೆಟ್ ಮೇಲೂ ಟ್ಯಾಕ್ಸ್.. ಹಿಮಾಚಲ ಪ್ರದೇಶದಲ್ಲಿ ಹೊಸ ತೆರಿಗೆ; ನಿರ್ಮಲಾ ಸೀತಾರಾಮನ್ ಶಾಕ್‌!

author-image
admin
Updated On
ಮನೆಯ ಟಾಯ್ಲೆಟ್ ಮೇಲೂ ಟ್ಯಾಕ್ಸ್.. ಹಿಮಾಚಲ ಪ್ರದೇಶದಲ್ಲಿ ಹೊಸ ತೆರಿಗೆ; ನಿರ್ಮಲಾ ಸೀತಾರಾಮನ್ ಶಾಕ್‌!
Advertisment
  • ಜನರ ಮನೆಯಲ್ಲಿರುವ ಟಾಯ್ಲೆಟ್‌ಗಳ ಮೇಲೆ ಸರ್ಕಾರದಿಂದ ತೆರಿಗೆ
  • ಇನ್ಮುಂದೆ ಒಳಚರಂಡಿ ಬಿಲ್ ಜೊತೆಗೆ ಟಾಯ್ಲೆಟ್ ಬಿಲ್ ಅನ್ನು ಕಟ್ಟಬೇಕು
  • ನಂಬಲು ಸಾಧ್ಯವಿಲ್ಲ. ಇದು ನಿಜಾನಾ? ಎಂದ ನಿರ್ಮಲಾ ಸೀತಾರಾಮನ್!

ನವದೆಹಲಿ: ಮನೆಯಿಂದ ಹೊರ ಹಾಕುವ ಕಸದ ಮೇಲೆ ತೆರಿಗೆ ಹಾಕೋದನ್ನ ಕೇಳಿದ್ದೇವೆ. ಮನೆಯ ಕಸವನ್ನು ರಸ್ತೆ ಬದಿ ಎಸೆದ್ರೆ ದಂಡ ಹಾಕೋದನ್ನು ನೋಡಿದ್ದೇವೆ. ಆದರೆ ಮನೆಯಲ್ಲಿರುವ ಟಾಯ್ಲೆಟ್‌ಗಳ ಮೇಲೆ ತೆರಿಗೆ ವಿಧಿಸೋ ಬಗ್ಗೆ ಕೇಳಿರೋದು ಅನುಮಾನ. ಹಿಮಾಚಲ ಪ್ರದೇಶ ಸರ್ಕಾರ ಜನರ ಮನೆಯಲ್ಲಿರುವ ಟಾಯ್ಲೆಟ್‌ಗಳ ಮೇಲೆ ತೆರಿಗೆ ವಿಧಿಸಲು ಅಧಿಸೂಚನೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ಹಿಮಾಚಲ ಪ್ರದೇಶದಲ್ಲಿ ಇಂತಹದೊಂದು ಕಾನೂನು ಜಾರಿಗೆ ಬಂದಿದೆ. ಟಾಯ್ಲೆಟ್ ಮೇಲೂ ಟ್ಯಾಕ್ಸ್. ಹೌದು ಜನರು ಮನೆಯಲ್ಲಿರುವ ಟಾಯ್ಲೆಟ್‌ಗಳ ಮೇಲೆ ಸರ್ಕಾರ ತೆರಿಗೆ ವಿಧಿಸಲು ಸಿಎಂ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಸೂಚನೆ ನೀಡಿದೆ.

ಇದನ್ನೂ ಓದಿ: 6 ಕಾಂಗ್ರೆಸ್ ಶಾಸಕರು ಅನರ್ಹ.. ಹಿಮಾಚಲ ಪ್ರದೇಶ ಬಿಕ್ಕಟ್ಟಿಗೆ ಹೊಸ ಟ್ವಿಸ್ಟ್‌ ಕೊಟ್ಟ ಸ್ಪೀಕರ್; ಸರ್ಕಾರ ಸೇಫ್‌? 

ಹಿಮಾಚಲ ಪ್ರದೇಶ ನಗರ ಪ್ರದೇಶದಲ್ಲಿರುವ ಪ್ರತಿ ಟಾಯ್ಲೆಟ್ ಮೇಲೆ 25 ರೂಪಾಯಿ ತೆರಿಗೆ ವಿಧಿಸಲು ಆದೇಶ ನೀಡಲಾಗಿದೆ. ಇನ್ಮುಂದೆ ಇಲ್ಲಿನ ಪ್ರತಿ ತಿಂಗಳು ಪ್ರತಿ ಟಾಯ್ಲೆಟ್‌ಗೆ 25 ರೂಪಾಯಿ ತೆರಿಗೆ ಕಟ್ಟಬೇಕು. ಒಳಚರಂಡಿ ಬಿಲ್ ಜೊತೆಗೆ ಟಾಯ್ಲೆಟ್ ಬಿಲ್ ಅನ್ನು ಜಲಶಕ್ತಿ ಇಲಾಖೆಗೆ ನೀಡಬೇಕು ಎನ್ನಲಾಗಿದೆ.

publive-image ಹಿಮಾಚಲ ಪ್ರದೇಶದಲ್ಲಿ ನೀರಿನ ಬಿಲ್‌ ಜೊತೆಗೆ ಶೇ.30 ರಷ್ಟು ಒಳಚರಂಡಿ ಬಿಲ್ ಕೂಡ ನೀಡಬೇಕು. ನಗರ ಪ್ರದೇಶದ ಎಲ್ಲಾ ಉಪವಿಭಾಗಗಳಿಗೂ ಸರ್ಕಾರ ಈ ಆದೇಶ ಹೊರಡಿಸಿದೆ. ಈ ಮೊದಲು ಹಿಮಾಚಲ ಪ್ರದೇಶದಲ್ಲಿ ನೀರಿನ ಬಿಲ್ ಕೂಡ ಇರಲಿಲ್ಲ. ಈಗ ಪ್ರತಿಯೊಂದು ನೀರಿನ ಸಂಪರ್ಕಕ್ಕೂ ಪ್ರತಿ ತಿಂಗಳು 100 ರೂಪಾಯಿ ಬಿಲ್ ಪಾವತಿ ಮಾಡಬೇಕಿದೆ. ಇದೇ ಅಕ್ಟೋಬರ್ ತಿಂಗಳಿನಿಂದ ನೀರಿನ ಬಿಲ್ ನೀಡಲು ರಾಜ್ಯ ಸರ್ಕಾರ ಆದೇಶ ನೀಡಿದೆ.


">October 4, 2024

ನಿರ್ಮಲಾ ಸೀತಾರಾಮನ್ ಕಿಡಿ!
ಹಿಮಾಚಲ ಪ್ರದೇಶ ಸರ್ಕಾರ ಟಾಯ್ಲೆಟ್ ಸೀಟ್‌ ಮೇಲೂ ಟ್ಯಾಕ್ಸ್‌ ಹಾಕಿರುವುದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿಕಾರಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾ Xನಲ್ಲಿ ಪೋಸ್ಟ್ ಮಾಡಿರುವ ನಿರ್ಮಲಾ ಸೀತಾರಾಮನ್ ಅವರು ಇದನ್ನು ನಂಬಲು ಸಾಧ್ಯವಿಲ್ಲ. ಇದು ನಿಜಾನಾ? ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್ ಆಂದೋಲನ ನಡೆಸುತ್ತಿದ್ದಾರೆ. ಆದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ಟಾಯ್ಲೆಟ್ ಮೇಲೂ ತೆರಿಗೆ ಹಾಕುತ್ತಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಒಳ್ಳೆ ಶೌಚಾಲಯದ ವ್ಯವಸ್ಥೆ ನೀಡಲಿಲ್ಲ. ಇದು ದೇಶಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment