newsfirstkannada.com

58 ನಿಮಿಷಕ್ಕೆ ಬಜೆಟ್‌.. ಅತಿ ಹೆಚ್ಚು, ಅತಿ ಕಡಿಮೆ ಅವಧಿಯ ದಾಖಲೆ ಯಾರ ಹೆಸರಲ್ಲಿದೆ ಗೊತ್ತಾ?

Share :

Published February 1, 2024 at 2:12pm

Update February 1, 2024 at 2:14pm

    6ನೇ ಬಾರಿ 58 ನಿಮಿಷಗಳಲ್ಲಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್

    2020ರಲ್ಲಿ 2 ಗಂಟೆ 42 ನಿಮಿಷ ಬಜೆಟ್ ಮಂಡಿಸಿದ್ದ ಹಣಕಾಸು ಸಚಿವೆ

    ಮನಮೋಹನ್ ಸಿಂಗ್ ಮಾಡಿದ ಭಾಷಣ ಸಾರ್ವಕಾಲಿಕ ದಾಖಲೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 6ನೇ ಬಾರಿಗೆ ಯಶಸ್ವಿಯಾಗಿ ಬಜೆಟ್ ಮಂಡನೆ ಮಾಡಿದ್ದಾರೆ. 2024ನೇ ಸಾಲಿನ ಬಜೆಟ್‌ ಅನ್ನು ಕೇವಲ 58 ನಿಮಿಷಕ್ಕೆ ಓದಿ ಮುಗಿಸಿರೋದು ವಿಶೇಷವಾಗಿದೆ. ಸರಿಯಾಗಿ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್‌ ಓದಲು ಆರಂಭಿಸಿದ ನಿರ್ಮಲಾ ಸೀತಾರಾಮನ್ ಅವರು 11.58ಕ್ಕೆ ಬಜೆಟ್‌ ಭಾಷಣ ಅಂತ್ಯಗೊಳಿಸಿದರು.

ಲೋಕಸಭಾ ಚುನಾವಣೆಗೂ ಮುನ್ನ ಮಂಡಿಸಿದ ಬಜೆಟ್ ಮಧ್ಯಂತರ ಬಜೆಟ್ ಆಗಿತ್ತು. ಹೀಗಾಗಿ ಕಡಿಮೆ ಅವಧಿಯಲ್ಲಿ ಬಜೆಟ್‌ ಮಂಡಿಸಿ ಮುಗಿಸಿದ್ದಾರೆ. ಈ ಹಿಂದೆ ಲೋಕಸಭೆಯಲ್ಲಿ 5 ಬಾರಿ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್ ಅವರು 6ನೇ ಬಾರಿ 58 ನಿಮಿಷಗಳಲ್ಲಿ ಬಜೆಟ್ ಮಂಡಿಸಿದ್ದಾರೆ. ಈ ಹಿಂದೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ವರ್ಷ ಹಾಗೂ ಅವಧಿಯ ವಿವರ ಇಂತಿದೆ.

ವರ್ಷ – ನಿಮಿಷಗಳು
2019 140 ನಿಮಿಷ
2020 160 ನಿಮಿಷ
2021 100 ನಿಮಿಷ
2022 91 ನಿಮಿಷ
2023 87 ನಿಮಿಷ
2024 58 ನಿಮಿಷ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024ರಲ್ಲಿ 58 ನಿಮಿಷದಲ್ಲಿ ಬಜೆಟ್ ಮಂಡಿಸಿದ್ರೆ 2020ರಲ್ಲಿ 2 ಗಂಟೆ 42 ನಿಮಿಷ ಬಜೆಟ್ ಮಂಡಿಸಿ ದಾಖಲೆ ಮಾಡಿದ್ದರು.

ಇದನ್ನೂ ಓದಿ: Budget2024: ಬಜೆಟ್ ಮಂಡನೆಯಲ್ಲಿ ನಿರ್ಮಲಾ ಸೀತಾರಾಮನ್ ಹೊಸ ದಾಖಲೆ; ಏನದು?

ಅತಿ ಹೆಚ್ಚು ಅವಧಿಯ ದಾಖಲೆ!
ಭಾರತದ ಸಂಸತ್ ಇತಿಹಾಸದಲ್ಲಿ ಅತಿ ಹೆಚ್ಚು ಅವಧಿಯಲ್ಲಿ ಬಜೆಟ್ ಮಂಡಿಸಿದ ದಾಖಲೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗಿದೆ. 1991ರ ಅಧಿವೇಶನದಲ್ಲಿ ಮನಮೋಹನ್ ಸಿಂಗ್ ಅವರು ಬರೋಬ್ಬರಿ 18,650 ಪದಗಳ ಬಜೆಟ್‌ ಮಂಡಿಸಿದ್ದರು. ಭಾರತದ ಆರ್ಥಿಕತೆಯ ಬಗ್ಗೆ ಮನಮೋಹನ್ ಸಿಂಗ್ ಮಾಡಿದ ಭಾಷಣ ಸಾರ್ವಕಾಲಿಕ ದಾಖಲೆಯಾಗಿ ಉಳಿದಿದೆ.

ಅತಿ ಕಡಿಮೆಯ ಬಜೆಟ್‌!
ಅತಿ ಹೆಚ್ಚು ಅವಧಿಯ ದಾಖಲೆ ಮನಮೋಹನ್ ಸಿಂಗ್ ಅವರ ಹೆಸರಲ್ಲಿದ್ರೆ ಅತಿ ಕಡಿಮೆ ಅವಧಿಯಲ್ಲಿ ಬಜೆಟ್ ಮಂಡಿಸಿದ ಖ್ಯಾತಿ ಮಾಜಿ ಹಣಕಾಸು ಸಚಿವೆ ಹಿರೂಭಾಯಿ ಮುಲ್ಲಾಜಿಬಾಯಿ ಪಟೇಲ್ ಅವರ ಹೆಸರಲ್ಲಿದೆ. 1977ರಲ್ಲಿ ಬಜೆಟ್ ಮಂಡಿಸಿದ್ದ ಹಿರೂಭಾಯಿ ಮುಲ್ಲಾಜಿಬಾಯಿ ಪಟೇಲ್ ಅವರು 800 ಪದಗಳಲ್ಲಿ ತಮ್ಮ ಭಾಷಣ ಮುಗಿಸಿದ್ದರು. ಇದು ಅತಿ ಕಡಿಮೆಯ ಬಜೆಟ್ ಅನ್ನೋ ದಾಖಲೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

58 ನಿಮಿಷಕ್ಕೆ ಬಜೆಟ್‌.. ಅತಿ ಹೆಚ್ಚು, ಅತಿ ಕಡಿಮೆ ಅವಧಿಯ ದಾಖಲೆ ಯಾರ ಹೆಸರಲ್ಲಿದೆ ಗೊತ್ತಾ?

https://newsfirstlive.com/wp-content/uploads/2024/02/Shortest-Budget-india.jpg

Load More