/newsfirstlive-kannada/media/post_attachments/wp-content/uploads/2025/01/BUDGET-2025.jpg)
ಕೇಂದ್ರ ಬಜೆಟ್​ ಮಂಡನೆಗೆ ಇನ್ನೇನು ಕೆಲವೇ ದಿನಗಳ ಬಾಕಿ ಇವೆ. 2025-26ರ ಸಾಲಿನ ಬಜೆಟ್ ಮಂಡನೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2025ರಂದು ಮಂಡನೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಂಸತ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯ ಎರಡನೇ ಬಜೆಟ್​ ಮಂಡನೆ ಮಾಡಲಿದ್ದಾರೆ.
ಇದನ್ನೂ ಓದಿ:ಇಂದಿರಾ ಎಮರ್ಜೆನ್ಸಿ ಸಿನಿಮಾ ವಿವಾದ.. ಪ್ರಿಯಾಂಕಾ ಗಾಂಧಿಗೆ ಕಂಗನಾ ಹೇಳಿದ್ದೇನು? VIDEO
ಈ ಬಾರಿಯ ಬಜೆಟ್​ನಲ್ಲಿ ಭಾರೀ ನಿರೀಕ್ಷೆಗಳು ಗರಿಗೆದರಿವೆ. 2024-25ರ ಸಾಲಿನ ಬಜೆಟ್​ ನೀರಸ ಬಜೆಟ್​, ಮಿತ್ರ ಪಕ್ಷಗಳನ್ನು ಸಂತುಷ್ಟಗೊಳಿಸಲು ಮಂಡಿಸಲಾದ ಬಜೆಟ್ ಎಂಬ ಟೀಕೆಗೆ ಗುರಿಯಾಗಿತ್ತು. ಆದ್ರೆ ಈ ಬಾರಿ ಬೇರೆಯದ್ದೇ ನಿರೀಕ್ಷೆಗಳನ್ನು ದೇಶದ ಜನರು ಬಜೆಟ್​ ಮೇಲೆ ಇಟ್ಟುಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕೃಷಿ ಕ್ಷೇತ್ರಕ್ಕೆ ಈ ಬಜೆಟ್​ನಲ್ಲಿ ಕೆಲವು ಬಂಪರ್ ಆಫರ್​ಗಳು ಸಿಗಬಹುದು ಎಂಬ ನಿರೀಕ್ಷೆಯಿದೆ. ಕೃಷಿ ಕ್ಷೇತ್ರಕ್ಕೆ ಈ ರೀತಿಯ ಕೊಡುಗೆಗಳು ಸಿಗಬಹುದು ಎಂಬ ಅಪಾರ ನಿರೀಕ್ಷೆಗಳಿವೆ
ಕಿಸಾನ್ ಕ್ರೆಡಿಟ್ ಕಾರ್ಡ್​ ಮಿತಿಯಲ್ಲಿ ಹೆಚ್ಚಳ
ಕೇಂದ್ರ ಸರ್ಕಾರ ಈ ಬಾರಿ ಕಿಸಾನ್ ಕ್ರೆಡಿಟ್ ಕಾರ್ಡ್​​ನ ಮಿತಿಯಲ್ಲಿ ಹೆಚ್ಚಳ ಮಾಡಬಹುದು ಎಂಬ ನಿರೀಕ್ಷೆಯಿದೆ. ಸದ್ಯ ಕಿಸಾನ್​ ಕ್ರೆಡಿಟ್ ಕಾರ್ಡ್​​ನ ಮಿತಿ 3 ಲಕ್ಷ ರೂಪಾಯಿ ಇದೆ. ಇದನ್ನು 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡುವ ನಿರೀಕ್ಷೆಯಲ್ಲಿ ದೇಶದ ರೈತರು ಇದ್ದಾರೆ. ಇದರಿಂದ ರೈತರ ಆದಾಯಕ್ಕೆ ಹೊಸ ಬೂಸ್ಟ್ ಸಿಗಲಿದ್ದು. ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಹೂಡಿಕೆ ಹೆಚ್ಚಾಗುವ ಸಂಭವವವಿದೆ.
ಇದನ್ನೂ ಓದಿ:ಯಾವ ಪವರೂ ಇಲ್ಲ, ಶೇರಿಂಗೂ ಇಲ್ಲ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಲಸ -ಡಿಕೆಶಿ ಹೊಸ ಗಾಳ?
ಕೃಷಿ ಸಂಬಂಧಿತ ಸರುಕಗಳ ಮೇಲಿನ ಜಿಎಸ್​ಟಿ ಕಡಿತ
ಕೃಷಿಕರನ್ನು ಬೆಂಬಲಿಸಲು ಕೇಂದ್ರ ಸರ್ಕಾರ ಈ ಬಾರಿ ಕೃಷಿ ಸಂಬಂಧಿತ ಸರುಕಗಳ ಮೇಲೆ ಅಂದ್ರೆ ಉದಾಹರಣೆಗೆ ಬೀಜ, ಗೊಬ್ಬರ, ಇಂತಹ ಸರುಕಗಳ ಮೇಲಿನ ಜಿಎಸ್​ಟಿ ದರವನ್ನನು ಕಡಿಮೆ ಮಾಡುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇದರಿಂದ ಕೃಷಿಕರಿಗೆ ಉತ್ಪಾದನ ವೆಚ್ಚ ಕಡಿಮೆಯಾಗಿ ಹೆಚ್ಚು ಲಾಭ ಬರುವ ಸಾಧ್ಯತೆ ಇದೆ, ಹೀಗಾಗಿ ಇಂತಹ ಸರಕುಗಳ ಮೇಲೆ ಜಿಎಸ್​ಟಿ ಕಡಿತಗೊಳ್ಳುವ ನಿರೀಕ್ಷೆಯಿಟ್ಟುಕೊಂಡಿದ್ದಾರೆ.
ಕೃಷಿ ಯೋಜನೆಗಳಿಗೆ ಹೆಚ್ಚಿನ ಅನುದಾನ
ಕಳೆದ ಬಾರಿ ಬಜೆಟ್​ನಲ್ಲಿ ಕೃಷಿ ಯೋಜನೆಗಳಿಗಾಗಿ ಸುಮಾರು 65,529 ಕೋಟಿ ರೂಪಾಯಿಯನ್ನು ಮೀಸಲಿಡಲಅಗಿತ್ತು. ಈ ಬಾರಿ ಅದನ್ನು ಕೇಂದ್ರ ಸರ್ಕಾರ ಜಾಸ್ತಿಗೊಳಿಸಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಈ ಬಾರಿ ಶೇಕಡಾ 5 ರಿಂದ 7 ರಷ್ಟು ಕೃಷಿ ಸಂಬಂಧಿತ ಯೋಜನೆಗಳಿಗೆ ಅನುದಾನ ಹೆಚ್ಚಾಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ 8ನೇ ಬಜೆಟ್​
ಫೆಬ್ರವರಿ 1 ರಂದು ನಿರ್ಮಲಾ ಸೀತರಾಮಾನ್ ತಮ್ಮ 8ನೇ ಹಾಗೂ ಮೋದಿ ಸರ್ಕಾರದ ಮೂರನೇ ಅವಧಿಯ ಎರಡನೇ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ. ಇದರಿಂದಾಗಿ ಈ ಹಿಂದೆ ರೈತರಿಗಾದ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು. ಅವರಿಗೆ ಬೇಕಾದ ಅಗತ್ಯ ಪೂರೈಕೆಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿ ವಲಯಕ್ಕೆ ಹೆಚ್ಚು ಅನುದಾನ ಬರುವ ನಿರೀಕ್ಷೆಯಿದೆ
ರೈತರ ಕಲ್ಯಾಣದ ಮೇಲೆ ಗುರಿ
ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಂದ್ರೆ ಕಳೆದ ಮೂರು ಅವಧಿಯಲ್ಲಿ ರೈತರ ಆದಾಯ ದ್ವಿಗುಣಗೊಳಿಸು ಸಂಕಲ್ಪವನ್ನೇ ಹೇಳಿಕೊಂಡು ಬಂದಿದೆ. ರೈತರನ್ನು ಆರ್ಥಿಕವಾಗಿ ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶ ನಮ್ಮ ಸರ್ಕಾರದ್ದು ಎಂದು ಹೇಳಿಕೊಂಡು ಬಂದಿದೆ. ಹೀಗಾಗಿ ಈ ಬಾರಿ ಕೃಷಿ ಕ್ಷೇತ್ರಕ್ಕೆ ಹೊಸ ಹೊಸ ಯೋಜನೆಗಳು ಅನುಷ್ಠಾನಕ್ಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಹಸಿರು ನಂಬಿದ ರೈತರು ಇದ್ದಾರೆ. ಎಲ್ಲರ ಕಣ್ಣುಗಳು ರೈತರ ಸಬಲೀಕರಣಕ್ಕಾಗಿ ಮೋದಿ ಸರ್ಕಾರ ಏನು ನೀಡಲಿದೆ ಎಂಬುದರ ಕಡೆ ನೆಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us