/newsfirstlive-kannada/media/post_attachments/wp-content/uploads/2025/02/NIRMALA-SITHARAMN-SAREE.jpg)
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ನಿರಂತರ 8ನೇ ಬಜೆಟ್ ಮಂಡಿಸಲಿದ್ದಾರೆ. ಪ್ರತಿ ಬಾರಿ ಬಜೆಟ್ ಮಂಡನೆಗೆ ಬಂದಾಗಲೂ ನಿರ್ಮಲಾ ಸೀತಾರಾಮನ್ ಅವರು ಉಟ್ಟುಕೊಂಡು ಬಂದಿರುವ ಸೀರೆಯ ಬಗ್ಗೆ ಚರ್ಚೆಗಳು ನಡೆದೇ ನಡೆಯುತ್ತವೇ. ಈ ಬಾರಿಯೂ ಕೂಡ ಅದು ಮುಂದುವರಿದಿದೆ.
ಸತತ 8ನೇ ಬಜೆಟ್ ಮಂಡನೆಗೆ ಸಜ್ಜಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಮಧಬನಿ ಕಲೆ ಇರುವ ಸೀರೆಯನ್ನು ಧರಿಸಿ ಸಂಸತ್ ಭವನದತ್ತ ಹೆಜ್ಜೆಯಿಟ್ಟಿದ್ದಾರೆ. ಈ ಮೂಲಕ ಅವರು ಮಧುಬನಿ ಕಲೆ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತೆ ದುಲಾರಿ ದೇವಿಯರವರಿಗೆ ಗೌರವ ಸಲ್ಲಿಕೆ ಮಡಿದ್ದಾರೆ.
ಇದನ್ನೂ ಓದಿ:BUDGET: ನಿರ್ಮಲಾ ಸೀತಾರಾಮನ್ರಿಂದ ಇಂದು ಬಜೆಟ್ ಮಂಡನೆ; ಮಧ್ಯಮ ವರ್ಗದವರಿಗೆ ಸಿಗುತ್ತಾ ರಿಲೀಫ್?
ನಿರ್ಮಲಾ ಅವರು ಇತ್ತೀಚೆಗೆ ಮಿಥಿಲಾ ಆರ್ಟ್ ಇನ್ಸ್ಟಿಟ್ಯೂಟ್ಗೆ ಹೋಗಿದ್ದಾಗ ದುಲಾರಿ ಅವರನ್ನು ಭೇಟಿಯಾಗಿದ್ದರು. ಬಿಹಾರದಲ್ಲಿ ಮಧಬನಿ ಕಲೆಯ ಕುರಿತು ಮಾತಕತೆ ನಡೆಸಿದ್ದರು. ಇದೇ ವೇಳೆ ದುಲಾರಿ ದೇವಿ ಅವರು ಸಚಿವೆಗೆ ಸೀರೆಯನ್ನು ಉಡುಗೊರೆಯಾಗಿ ನೀಡಿ. ಬಜೆಟ್ ದಿನ ಇದನ್ನು ಧರಿಸುವಂತೆ ಮನವಿ ಮಾಡಿದ್ದರು. ಕೆನೆ ಬಣ್ಣ, ಚಿನ್ನದ ವರ್ಣದ ಅಂಚು ಹೊಂದಿರುವ ಈ ಸೀರೆಯ ಮೇಳೆ ಮಧಬನಿ ಕಲೆಯ ಚಿತ್ತಾರವಿದೆ. ದುಲಾರಿ ದೇವಿಯವರಿಗೆ 2021ರಲ್ಲಿ ಪದ್ಮಶ್ರಿ ಗೌರವ ನೀಡಿ ಸನ್ಮಾನಿಸಲಾಗಿತ್ತು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ