ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಗಟ್ಟಿಮೇಳ ಖ್ಯಾತಿಯ ರೌಡಿ ಬೇಬಿ ನಿಶಾ.. ಏನದು ಗೊತ್ತಾ?

author-image
Veena Gangani
Updated On
ಗಟ್ಟಿಮೇಳದ ರೌಡಿ ಬೇಬಿಗೆ ಜೊತೆಯಾದ ವಿಕಾಶ್ ಉತ್ತಯ್ಯ; ಯಾರು ಈ ಹೊಸ ಸ್ಟಾರ್​ ನಟ?
Advertisment
  • ಗಟ್ಟಿಮೇಳ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ತೆಲುಗಿನಲ್ಲಿ ಅಭಿನಯ
  • ಅದ್ಬುತ ನಟನೆಯ ಮೂಲಕ ಸಾಕಷ್ಟು ಫ್ಯಾನ್ಸ್​ ಗಳಿಸಿಕೊಂಡಿದ್ದ ನಟಿ
  • ಗಟ್ಟಿಮೇಳ ಧಾರಾವಾಹಿಯ ರೌಡಿ ಬೇಬಿ ಅಂತ ಖ್ಯಾತಿ ಪಡೆದ ನಟಿ ನಿಶಾ

ಗಟ್ಟಿಮೇಳ ಅಭಿಮಾನಿಗಳಿಗೆ ಒಂದು ಗುಡ್​ ನ್ಯೂಸ್​ ಇದೆ. ಗಟ್ಟಿಮೇಳ ಧಾರಾವಾಹಿ ಸೂಪರ್​ ಹಿಟ್​​ ನಂತರ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದರು ನಟಿ ನಿಶಾ ರವಿಕೃಷ್ಣನ್. ತಿಂಗಳಲ್ಲಿ ಹದಿನೈದು ದಿನ ಗಟ್ಟಿಮೇಳ ಶೂಟಿಂಗ್​ ಮಾಡಿದ್ರು, ಇನ್ನುಳಿದ ದಿನಗಳನ್ನ ತೆಲುಗು ಪ್ರಾಜೆಕ್ಟ್​​ಗೆ ಮೀಸಲಿಟ್ಟಿದ್ದರು.

publive-image

ಇದನ್ನೂ ಓದಿ:ಟಿಸಿ ಕೊಡಲಿಲ್ಲ ಎಂದು ವಿದ್ಯಾರ್ಥಿ ಸಾವು ಕೇಸ್​ಗೆ ಟ್ವಿಸ್ಟ್​.. ಡೆತ್​ ನೋಟ್​ನಲ್ಲಿ ಏನಿದೆ?

ಹಾಗಂತ ಕನ್ನಡದಲ್ಲಿ ಕೆಲಸ ಮಾಡಬಾರದು ಅನ್ನೋದೇನು ಇರಲಿಲ್ಲ. ಒಳ್ಳೆ ಪ್ರಾಜೆಕ್ಟ್​​ಗಳು, ಸಮಯ ಕೂಡಿಬಂದಿರಲಿಲ್ವಂತೆ. ಈಗ ಸಂದರ್ಭ ಒದಗಿದ್ದು ಕನ್ನಡದ ಅಭಿಮಾನಿಗಳನ್ನ ರಂಜಿಸಲಿದ್ದಾರೆ. ನಟಿ ಹಾಗೂ ನನ್ನಮ್ಮ ಸೂಪರ್​ ಸ್ಟಾರ್ ಖ್ಯಾತಿಯ ಸುಪ್ರಿತಾ ಪ್ರಮೋದ್​ ಶೆಟ್ಟಿ ಅವರು ಹೊಸ ಪ್ರೋಡಕ್ಷನ್​ ಹೌಸ್​ ಶುರು ಮಾಡಿದ್ದು, ಪತಿ ಪ್ರಮೋದ್​ ಶೆಟ್ಟಿ ಬೆಂಬಲದ ಜೊತೆಗೆ ಸೀರಿಯಲ್​ ನಿರ್ಮಾಣ ಮಾಡುತ್ತಿದ್ದಾರೆ. ಈ ಪ್ರಾಜೆಕ್ಟ್​ ವರ್ಷದಿಂದ ತಯಾರಿ ನಡಿತಿದ್ದು, ಕೆಲವೇ ತಿಂಗಳಲ್ಲಿ ಶೂಟಿಂಗ್​ ಶುರುವಾಗಲಿದೆ.

publive-image

ಇನ್ನು, ಹೆಸರಿಡದ ಈ ಹೊಸ ಸೀರಿಯಲ್​ಗೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ ನಿಶಾ. ಕತೆಗೆ ಬರೋದಾದ್ರೇ ಜೀ ತಮಿಳಿನಲ್ಲಿ ಪ್ರಸಾರವಾಗ್ತಿರೋ ಕನ್ನಡದ ಬ್ಯೂಟಿ ನಿತ್ಯಾ ರಾಮ್​ ನಾಯಕಿ ಆಗಿ ಅಭಿನಯಿಸುತ್ತಿರೋ ಅಣ್ಣ ಎಂಬ ಧಾರಾವಾಹಿಯ ಎಳೆಯನ್ನ ಹೊಂದಿರಲಿದೆ. ಅಂದ್ಹಾಗೆ, ಜೀ ಕನ್ನಡ ವಾಹಿನಿಯಲ್ಲಿ ಮತ್ತೊಮ್ಮೆ ನಿಶಾ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ರೌಡಿ ಬೇಬಿಯ ನಯಾ ಅವತಾರವನ್ನ ನೋಡೋಕೆ ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment