Advertisment

ಕಾಂಗ್ರೆಸ್​ ಸೇರ್ತೇನೆ ಎಂದಿದ್ದ ಸಿಪಿ ಯೋಗೇಶ್ವರ್​​​ ಪುತ್ರಿ ನಿಶಾ ಯೂಟರ್ನ್​​.. ಅಸಲಿಗೆ ಆಗಿದ್ದೇನು?

author-image
Veena Gangani
Updated On
ಕಾಂಗ್ರೆಸ್​ ಸೇರ್ತೇನೆ ಎಂದಿದ್ದ ಸಿಪಿ ಯೋಗೇಶ್ವರ್​​​ ಪುತ್ರಿ ನಿಶಾ ಯೂಟರ್ನ್​​.. ಅಸಲಿಗೆ ಆಗಿದ್ದೇನು?
Advertisment
  • ಸದ್ಯಕ್ಕೆ ನಾನು ಯಾವುದೇ ಪಕ್ಷದಲ್ಲೂ ಇಲ್ಲ ಎಂದು ಹೇಳಿದ ನಿಶಾ ಯೋಗೇಶ್ವರ್
  • ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮಾಡಿ ನಿಶಾ ಯೋಗೇಶ್ವರ್ ಏನಂದ್ರು?
  • ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಪ್ರಭಾವಿ ನಾಯಕ ಸಿ.ಪಿ ಯೋಗೇಶ್ವರ್ ಪುತ್ರಿ

ರಾಮನಗರ: ನಾನು ಸದ್ಯದಲ್ಲಿ ಯಾವ ಪಾರ್ಟಿಯಲ್ಲೂ ಇಲ್ಲ. ನೀವು ನನ್ನ ಯಾವುದೇ ಪಾರ್ಟಿ ಆಫೀಸ್​ನಲ್ಲಿ ಅಭ್ಯರ್ಥಿ ಪರ ಪ್ರಚಾರ ಮಾಡುವುದನ್ನು ನೋಡುವುದಿಲ್ಲ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಪ್ರಭಾವಿ ನಾಯಕ ಸಿ.ಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಹೇಳಿದ್ದಾರೆ.

Advertisment

ಇದನ್ನೂ ಓದಿ: ದೇವೇಗೌಡ್ರೇ ಗರ್ವನೂ ಇಲ್ಲ, ಅಹಂಕಾರವೂ ಇಲ್ಲ; ನನ್ನದು ಕನ್ನಡಿಗರ ರಕ್ತದಲ್ಲಿರುವ ಸ್ವಾಭಿಮಾನ; ಸಿದ್ದರಾಮಯ್ಯ

ಮೊನ್ನೆ ಮೊನ್ನೆಯಷ್ಟೇ ನಾನು ವೈಯಕ್ತಿಕವಾಗಿ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದರು. ಇದೀಗ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡುವ ಮೂಲಕ ನಾನು ಸದ್ಯದಲ್ಲಿ ಯಾವ ಪಾರ್ಟಿಯಲ್ಲಿ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Advertisment

ಇನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡ ನಿಶಾ ಯೋಗೇಶ್ವರ್, ಈ ನಡುವೆ ನಾನು ಎಲ್ಲೂ ಹೋದ್ರೂ ಕಾಂಗ್ರೆಸ್​ ಪಾರ್ಟಿ ಸೇರ್ಪಡೆ ಆಗಿರುವುದಕ್ಕೆ ಅಭಿನಂದನೆಗಳು ಅಂತಾ ಹೇಳ್ತಾರೆ. ಇದು ನಿಜಾ ಅಲ್ಲ. ನಾನು ನನ್ನ ಜನರನ್ನು ಕತ್ತಲಿನಲ್ಲಿ ಇಡಲು ಇಷ್ಟ ಪಡೋದಿಲ್ಲ. ಅದಕ್ಕಾಗಿ ಈ ಸ್ಪಷ್ಟಿಕರಣವನ್ನು ನೀಡುತ್ತಿದ್ದೇನೆ. ನಾನು ಸದ್ಯದಲ್ಲಿ ಯಾವ ಪಾರ್ಟಿಯಲ್ಲಿ ಇಲ್ಲ. ನೀವು ನನ್ನ ಯಾವುದೇ ಪಾರ್ಟಿ ಆಫೀಸ್​ನಲ್ಲಿ ಅಭ್ಯರ್ಥಿ ಪರ ಪ್ರಚಾರ ಮಾಡುವುದನ್ನು ನೋಡಿರುವುದಿಲ್ಲ. ನಾನು ಕೇವಲ ಜನರ ಮಧ್ಯೆ ಅವರ ಜೊತೆಯಲ್ಲಿ ಇದ್ದೇನೆ. ಹೌದು, ನಾನು ಪ್ರಯತ್ನ ಮಾಡಿದ್ದೆ. ಒಂದು ಕಡೆಯಿಂದ ಮಾತ್ರವಲ್ಲ ಹಲವಾರು ಕಡೆಗಳಿಂದ ಪ್ರಯತ್ನ ಪಟ್ಟಿದೆ. ನಾನು ಯಾವತ್ತು ಒಂದು ಪಾರ್ಟಿ ಸೇರುತ್ತೇನೋ, ಅವಾಗ ಸಂಬಂಧ ಕಲ್ಪಿಸುವುದು ಸರಿ. ಸದ್ಯಕ್ಕೆ ನಾನೂ ಯಾವ ಪಾರ್ಟಿಯಲ್ಲೂ ಇಲ್ಲ. ನಿಮ್ಮೆಲ್ಲರಿಂದ ಹಲವಾರು ಪ್ರಶ್ನೆಗಳು ಬರುತ್ತೀವೆ. ಈ ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಉತ್ತರ ನೀಡುತ್ತೇನೆ. ನನ್ನ ಹತ್ತಿರ ಕೂಡ ಪ್ರಶ್ನೆಗಳಿವೆ ಅದಕ್ಕೂ ಕೂಡ ಉತ್ತರ ಹುಡುಕಿಕೊಳ್ಳುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment