180 ಕ್ಯಾರೆಟ್ ಡೈಮಂಡ್.. ನೀತಾ ಅಂಬಾನಿ ನೆಕ್ಲೆಸ್‌ ರೆಡಿ ಮಾಡಲು ಎಷ್ಟು ದಿನ? ಎಷ್ಟು ಸಾವಿರ ಗಂಟೆ ಬೇಕಾಯ್ತು?

author-image
Veena Gangani
Updated On
180 ಕ್ಯಾರೆಟ್ ಡೈಮಂಡ್.. ನೀತಾ ಅಂಬಾನಿ ನೆಕ್ಲೆಸ್‌ ರೆಡಿ ಮಾಡಲು ಎಷ್ಟು ದಿನ? ಎಷ್ಟು ಸಾವಿರ ಗಂಟೆ ಬೇಕಾಯ್ತು?
Advertisment
  • ಬಹಳ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಂತ್​, ರಾಧಿಕಾ
  • ಅನಂತ್​ ಅಂಬಾನಿ ಮದುವೆಯಲ್ಲಿ ನೀತಾ ಅಂಬಾನಿ ಧರಿಸಿದ್ರು ವಜ್ರದ ಸರ
  • ನೀತಾ ಅಂಬಾನಿ ಧರಿಸಿರೋ 5 ಎಳೆಯ ಸರದ ಬಗ್ಗೆ ಕಾಂತಿಲಾಲ್ ಹೇಳಿದ್ದೇನು?

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದಲ್ಲಿ ದೇಶ ವಿದೇಶದ ಗಣ್ಯರು ಭಾಗಿಯಾಗಿದ್ದಾರೆ. ಸದ್ಯ ಮುಖೇಶ್ ಅಂಬಾನಿ ಕುಟುಂಬಸ್ಥರಲ್ಲಿ ಸಂತಸದ ವಾತಾವರಣ ಮುಗಿಲು ಮುಟ್ಟಿದೆ. ಮುಖೇಶ್​ ಅಂಬಾನಿ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಬಹಳ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

publive-image

ಇದನ್ನೂ ಓದಿ: ಅಬ್ಬಾ.. ಅನಂತ್​ ಅಂಬಾನಿ ಧರಿಸಿದ್ದ ಡೈಮಂಡ್‌ ಲಯನ್ ಬ್ರೂಚ್ ಫೋಟೋ ರಿಲೀಸ್‌; ಇದರ ಸ್ಪೆಷಲ್ ಏನು? 

ತಮ್ಮ ಕಿರಿಯ ಪುತ್ರನ ಮದುವೆಯಲ್ಲಿ ಅಂಬಾನಿ ಕುಟುಂಬಸ್ಥರು ಮಿರ ಮಿರ ಮಿಂಚಿದ್ದಾರೆ. ಅದರಲ್ಲೂ ಅನಂತ್​ ಅಂಬಾನಿ ಅವರ ತಾಯಿ ನೀತಾ ಅಂಬಾನಿ ಅವರು ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಹೌದು, ಎಲ್ಲಿ ನೋಡಿದರು ದೇಶ ವಿದೇಶದ ಗಣ್ಯರು, ಬಾಲಿವುಡ್​​ ಸ್ಟಾರ್ಸ್​ಗಳು ಇದರ ಮಧ್ಯೆ ಅಂಬಾನಿ ಕುಟುಂಬಸ್ಥರು. ತಮ್ಮ ಕಿರಿಯ ಮಗನ ಮದುವೆಗೆ ನೀತಾ ಅಂಬಾನಿ ಅವರು ಧರಿಸಿದ್ದ ನೆಕ್ಲೆಸ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಹಿಂದೆ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್​ನಲ್ಲಿ ನೀತಾ ಅಂಬಾನಿ ಅವರು ಹಸಿರು ಬಣ್ಣವನ್ನು ಒಳಗೊಂಡ ವಜ್ರದ ನೆಕ್ಲೆಸ್ ಧರಿಸಿದ್ದರು. ಅದರ ಬೆಲೆ ಬರೋಬ್ಬರಿ 500 ಕೋಟಿ ರೂಪಾಯಿ. ಈಗ ಧರಿಸಿರೋ ನೆಕ್ಲೆಸ್ ಬಗ್ಗೆ ಆಭರಣ ಪ್ರಿಯರು ಸರ್ಚ್​ ಮಾಡುತ್ತಿದ್ದಾರೆ. ಜೊತೆಗೆ ಅಂಬಾನಿ ಕುಟುಂಬಸ್ಥರ ಆಭರಣಗಳನ್ನು ಆಯ್ಕೆ ಮಾಡೋದು ಯಾರು ಎಂಬುವುದರ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದರು.

ಈಗ ನೀತಾ ಅಂಬಾನಿ ಅವರು ಧರಿಸಿರೋ ನೆಕ್ಲೆಸ್ ಬರೋಬ್ಬರಿ 100 ಕ್ಯಾರೆಟ್ ಹಳದಿ ವಜ್ರವನ್ನು ಒಳಗೊಂಡಿದೆ.  ಇದನ್ನು ಸ್ವತಃ ಮುಖೇಶ್​ ಅಂಬಾನಿ ಅವರೇ ಆಯ್ಕೆ ಮಾಡಿದ್ದಾರಂತೆ. ಮುಖೇಶ್​ ಅಂಬಾನಿ ಅವರು ಹೆಸರಾಂತ ಸಂಗ್ರಾಹಕರು ಮತ್ತು ಆಭರಣಗಳ ಕಾನಸರ್ ಆಗಿದ್ದಾರೆ. ಹೀಗಾಗಿ ತಮ್ಮ ಪತ್ನಿಯ ಸರವನ್ನು ಮುಖೇಶ್​ ಅಂಬಾನಿ ಅವರೇ ಸೆಲೆಕ್ಟ್ ಮಾಡಿದ್ದಾರಂತೆ. ಆ ನೆಕ್ಲೆಸ್ 80 ಕ್ಯಾರೆಟ್ ಪಚ್ಚೆ ಹರಳನ್ನು ಒಳಗೊಂಡಿದ್ದು, ಅದರ ಸುತ್ತ ವಜ್ರದ ಹರಳನ್ನು ಜೋಡಿಸಲಾಗಿದೆ. ಈ ಬಗ್ಗೆ ಖುದ್ದು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಆಭರಣ ವ್ಯಾಪಾರಿಗಳಾದ ಕಾಂತಿಲಾಲ್ ಛೋಟಾಲಾಲ್ ಅವರು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಕಾಂತಿಲಾಲ್ ಛೋಟಾಲಾಲ್ ಪ್ರಕಾರ, ಅಪರೂಪದ ಗುಲಾಬಿ, ನೀಲಿ, ಹಸಿರು ಮತ್ತು ಕಿತ್ತಳೆ ಬಣ್ಣದ ವಜ್ರಗಳಿಂದ ಹಾರವನ್ನು ಮಾಡಲಾಗಿತ್ತು. ಪ್ರತಿ ತುಣುಕು ತಯಾರಿಸಲು 4,000 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಾಗಿದೆ. ಅಂದ್ರೆ 166 ದಿನಕ್ಕೂ ಹೆಚ್ಚು ದಿನಗಳು ಬೇಕಾಗಿದೆ. ಸರ ಅದ್ಭುತವಾಗಿ ಕಾಣಲು ಬಿಳಿ ವಜ್ರಗಳನ್ನು ಸೇರಿಸಲಾಗಿದೆ. ಇದು ಭಾರತದ ಶ್ರೀಮಂತ ಆಭರಣ ತಯಾರಿಕೆ ಪರಂಪರೆಗೆ ಗೌರವ ಸಲ್ಲಿಸಿದ ವಿನ್ಯಾಸದ ಅಂಶವಾಗಿದೆಯಂತೆ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment