/newsfirstlive-kannada/media/post_attachments/wp-content/uploads/2024/11/NITA-AMBANI-1.jpg)
ಸೌದಿ ಅರೇಬಿಯಾದಲ್ಲಿ ನವೆಂಬರ್ 24 ಮತ್ತು 25 ರಂದು ಐಪಿಎಲ್ ಮೆಗಾ ಹರಾಜು ನಡೆಯಿತು. 10 ಫ್ರಾಂಚೈಸಿಗಳು ಕೋಟಿ ಕೋಟಿ ಹಣ ಸುರಿದು ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಿದವು. ನೀತಾ ಅಂಬಾನಿ ಕೂಡ ಹರಾಜು ಪ್ರಕ್ರಿಯೆಯ ಭಾಗವಾಗಿದ್ದರು.
ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾಗಿರುವ ನೀತಾ ಅಂಬಾನಿ, ಹರಾಜಿನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ಕಳೆದ ಬಾರಿಯಂತೆ ತಮ್ಮ ಫ್ಯಾಷನ್ ಸೆನ್ಸ್ ಪ್ರದರ್ಶಿಸಿದ್ದು, ಅಕ್ಷನ್ ಮೊದಲ ದಿನ ಅವರು ತೊಟ್ಟಿದ್ದ ಪ್ಯಾಂಟ್ ಸೂಟ್ ಬಗ್ಗೆ ಚರ್ಚೆ ಶುರುವಾಗಿದೆ.
ಅಂದ್ಹಾಗೆ ನೀತಾ ಅಂಬಾನಿ ಮೊದಲ ದಿನ ತೊಟ್ಟಿದ್ದ ಪ್ಯಾಂಟ್ ಸೂಟ್ ಬೆಲೆ ಬರೋಬ್ಬರಿ 950 ಡಾಲರ್ ಆಗಿದೆ. ಭಾರತೀ ಕರೆನ್ಸಿಯಲ್ಲಿ ಅದರ ಮೌಲ್ಯವವು 78 ಸಾವಿರ ರೂಪಾಯಿ ಆಗಿದೆ. ಯುರೋಪಿಯನ್ ಮೂಲದ ‘ಮಜೆ’ ಬ್ರಾಂಡ್ಗೆ (Maje) ಸೇರಿದ ಬಟ್ಟೆ ಇದಾಗಿದೆ. ಅವರ ಸ್ಟೈಲ್ ಹಾಗೂ ಸೌಂದರ್ಯ ಹರಾಜಿನ ವೇಳೆ ಗಮನ ಸೆಳೆದಿದ್ದು, ಅವರು ತೊಟ್ಟಿದ್ದ ಬಟ್ಟೆ ಬಗ್ಗೆ ಬಿಸಿಬಿಸಿ ಚರ್ಚೆ ಆಗ್ತಿದೆ.
ಇದನ್ನೂ ಓದಿ:ಐಪಿಎಲ್ 2025: ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್
ಇನ್ನು IPL ಮೆಗಾ ಹರಾಜು-2025 ಪ್ರಕ್ರಿಯೆ ಕೊನೆಗೊಂಡಿದೆ. ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ 27 ಕೋಟಿ, ಶ್ರೇಯಸ್ ಅಯ್ಯರ್ 26.5 ಕೋಟಿ ಬಿಕರಿಯಾದರು. ಕೆಲವು ಪ್ರತಿಭಾವಂತ ಕ್ರಿಕೆಟಿಗರಿಗೆ ಫ್ರಾಂಚೈಸಿಗಳು ಹಣದ ಸುರಿಮಳೆಯಾಗಿದೆ.
View this post on Instagram
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್