/newsfirstlive-kannada/media/post_attachments/wp-content/uploads/2024/10/NITA-AMBANI-SAARI.jpg)
ನೀತಾ ಅಂಬಾನಿ, ಭಾರತದ ಅತ್ಯಂತ ಪ್ರಭಾವಿ ಮಹಿಳೆ, ಅವರು ಹಲವು ಬಾರಿ ಪರೋಪಕಾರಕ್ಕಾಗಿ ಸುದ್ದಿಯಾದ್ರೆ, ಕೆಲವು ಬಾರಿ ತಮ್ಮದೇ ಆದ ವಿಶೇಷ ಶೈಲಿಯ ಉಡುಗೆ ತೊಡುಗೆಗಳಿಂದ ಹೊಸ ಫ್ಯಾಶನ್ ಸೆಟ್ ಮಾಡುತ್ತಾರೆ. ಅವರು ಆಯ್ದುಕೊಳ್ಳುವ ಉಡುಗೆ ತೊಡುಗೆಗಳು ಪರಂಪರೆ ಹಾಗೂ ಸಮಕಾಲಿನ ಸೊಬಗಿನ ಪ್ರತಿಬಿಂಬದಂತಿರುತ್ತವೆ. ಅವರನ್ನು ಫ್ಯಾಶನ್ ಐಕಾನ್ ಆಗಿಯೇ ಗುರುತಿಸಿಬಿಡುತ್ತವೆ. ಅವರು ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ, ಹೈ ಪ್ರೊಫೈಲ್ ಕಾರ್ಯಕ್ರಮಗಳು, ಗ್ಯಾದರಿಂಗ್ಗಳು ಹೀಗೆ ಎಲ್ಲಿಯೇ ಹೋದರು ಅವರು ಉಟ್ಟಿರುವ ಸೀರೆ, ಬಳೆಯಿಂದ ಹಿಡಿದು ವ್ಯಾನಿಟಿ ಬ್ಯಾಗ್ವರೆಗೂ ಎಲ್ಲರೂ ಮಾತನಾಡುತ್ತಾರೆ. ಈಗ ನೀತಾ ಅಂಬಾನಿ ಮತ್ತೊಮ್ಮೆ ಅದೇ ರೀತಿಯ ಫ್ಯಾಶನ್ ಸೆಟ್ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಅವರು ಉಟ್ಟ ನಿಯೋನ್ ಗ್ರೀನ್ ಬಣ್ಣದ ಸೀರೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಟ್ರೆಂಡ್ ಸೃಷ್ಟಿ ಮಾಡುತ್ತಿದೆ.
ಇದನ್ನೂ ಓದಿ:Meal Prepping ಭಾರತದಂತಹ ದೇಶದಲ್ಲಿ ಇದು ಒಳ್ಳೆಯ ಐಡಿಯಾನಾ? ಇದರಿಂದಾಗುವ ಪ್ರಯೋಜನಗಳೇನು?
ನೀತಾ ಅಂಬಾನಿಯವರ ಸ್ಟೈಲ್, ಭಾರತೀಯ ಪರಂಪರೆಗಳ ಆಳವಾದ ಬೇರಿನೊಂದಿಗೆ ಕೂಡಿಕೊಂಡಿರುತ್ತವೆ ಹಾಗೂ ಸಮಕಾಲಿನ ಭಾರತೀಯ ವಿನ್ಯಾಸಗಳೊಂದಿಗೆ ಕಂಗೊಳಿಸುತ್ತದೆ. ಈಗಾಗಲೇ ಹೇಳಿದಂತೆ ಮತ್ತೊಮ್ಮೆ ಈಗ ಫ್ಯಾಶನ್ ಲೋಕದ ಜನರು ನೀತಾ ಅಂಬಾನಿಯತ್ತ ದೃಷ್ಟಿ ಸರಿಸಿದ್ದಾರೆ. ಅವರ ನಿಯೋನ್ ಗ್ರೀನ್ ಬಣ್ಣದ ಸೀರೆಯೊಂದು ಈಗ ಟ್ರೆಂಡ್ ಸೆಟ್ ಮಾಡಿದೆ. ಈ ಒಂದು ಸೀರೆ ಅದರ ಐಷಾರಾಮಿ ಕರಕುಶಲತೆ, ಕಸೂತಿ, ನೇಯ್ದ ಶ್ರೀಮಂತಿಕೆಯು ಜನರ ಕಣ್ಣನ್ನು ಬೆರುಗುಗೊಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಆ ಸೀರೆಯದ್ದೇ ಸುದ್ದಿ ದೊಡ್ಡದಾಗಿ ಚರ್ಚೆಗೆ ಒಳಪಟ್ಟಿದೆ. ಹೆಣ್ಣು ಮಕ್ಕಳು ಸಾಮಾನ್ಯವಾಗಿ ಇದೇ ಸ್ಟೈಲ್ನಲ್ಲಿ ಬೇರೆ ಕಲರ್ ಇಲ್ವಾ ಅಂತ ಸೀರೆ ಬಗ್ಗೆ ಕೇಳುತ್ತಾರೆ. ಆದ್ರೆ ನೀತಾ ಅಂಬಾನಿಯವರುಟ್ಟ ಸೀರೆಯಲ್ಲಿ ಇದೆಲ್ಲವನ್ನೂ ಮರೆತು ಬರೀ ಸೀರೆಯನ್ನಷ್ಟೇ ಇಷ್ಟಪಟ್ಟು, ವ್ಹಾವ್ ಎಂದು ಕಮೆಂಟಿಸುತ್ತಿದ್ದಾರೆ.
ಇದನ್ನೂ ಓದಿ:ಮನೆಯಲ್ಲಿ ತಯಾರು ಮಾಡಿದ ಈ 8 ಜ್ಯೂಸ್ಗಳು ದೇಹದಲ್ಲಿನ ಯೂರಿಕ್ ಆಮ್ಲವನ್ನು ಕಡಿಮೆ ಮಾಡುತ್ತದೆ. ಏನಿದು ಯೂರಿಕ್ ಆಮ್ಲ?
ಯಾವಾಗ ನೀತಾ ಅಂಬಾನಿಯವರು ಈ ಒಂದು ಸಾರಿ ದೊಡ್ಡ ಸದ್ದು ಮಾಡಲು ಶುರುವಾಯ್ತೋ ಕೂಡಲೇ ಅಂತಹುದೇ ಸೀರೆಯನ್ನು ದೆಹಲಿಯ ಮನಿಶ್ ಮಲ್ಹೋತ್ರಾ ಫ್ಲಾಗ್ಶೀಪ್ ಲಾಂಚ್ ಮಾಡಿದೆ. ಇದು ಸದ್ಯದ ಸಮಕಾಲಿನ ಯುವತಿಯರೂ ಕೂಡ ಕಾರ್ಯಕ್ರಮಗಳಿಗಾಗಿ ಆಯ್ಕೆ ಮಾಡುವ ಸೀರೆಯಾಗಿದ್ದು. ಡಿಮ್ಯಾಂಡ್ ಕೂಡ ಜೋರಾಗಿದೆ.ಕೇವಲ ಸಾರಿ ಮಾತ್ರವಲ್ಲ ನೀತಾ ಅಂಬಾನಿ ಕಾಣಿಸಿಕೊಂಡ ಫೋಟೋದಲ್ಲಿ ಅವರು ಹಾಕಿಕೊಂಡಿರುವ ರಿಂಗ್ ಕೂಡ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ನಿಯೋನ್ ಗ್ರೀನ್ ಕಲರ್ ಸಾರಿಯಲ್ಲಿ ಮಿಂಚಿರುವ ನೀತಾ ಅಂಬಾನಿಯವರು ಆ ಒಂದು ಫೋಟೋದಲ್ಲಿ ಡೈಮಂಡ್ ರಿಂಗ್ ಕೂಡ ಹಾಕಿದ್ದಾರೆ. ಆ ಶೈಲಿಯ ಇಯರ್ ರಿಂಗ್ ಕೂಡ ಸದ್ಯ ಟ್ರೆಂಡಿಂಗ್ನಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ