‘ತಪ್ಪಾಗಿದ್ದರೆ ಕ್ಷಮಿಸಿ ಬಿಡಿ..’ ಕೈಮುಗಿದ ನೀತಾ ಅಂಬಾನಿ.. ಮದುವೆಯಲ್ಲಿ ಆಗಿದ್ದೇನು..?

author-image
Ganesh
Updated On
‘ತಪ್ಪಾಗಿದ್ದರೆ ಕ್ಷಮಿಸಿ ಬಿಡಿ..’ ಕೈಮುಗಿದ ನೀತಾ ಅಂಬಾನಿ.. ಮದುವೆಯಲ್ಲಿ ಆಗಿದ್ದೇನು..?
Advertisment
  • ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ
  • ಅಂಬಾನಿ ಕುಟುಂಬದಲ್ಲಿ ಈಗ ಮದುವೆ ನಂತರದ ಕಾರ್ಯಕ್ರಮ
  • ವಿಶ್ವದ ಅತ್ಯಂತ ದುಬಾರಿ ಮದುವೆಗಳಲ್ಲಿ ಇದೂ ಒಂದು

ಶ್ರೀಮಂತ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಜುಲೈ 12 ರಂದು ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾದರು. ಈಗ ಅಂಬಾನಿ ಕುಟುಂಬದಲ್ಲಿ ಮದುವೆಯ ನಂತರದ ಕಾರ್ಯಕ್ರಮಗಳು ನಡೆಯುತ್ತಿವೆ.

ಮದುವೆ ಕಾರ್ಯಕ್ರಮಕ್ಕೆ ದೇಶ ಮತ್ತು ವಿದೇಶಗಳಿಂದ ಗಣ್ಯರು ಆಗಮಿಸಿದ್ದರು. ದೇಶ ಹಾಗೂ ವಿಶ್ವದ ಮಾಧ್ಯಮಗಳು ಅಂಬಾನಿ ಕುಟುಂಬದಲ್ಲಿ ನಡೆದ ಮದುವೆ ಕಾರ್ಯಕ್ರಮಗಳ ಮೇಲೆ ಕೇಂದ್ರೀಕರಿಸಿದ್ದವು. ಹಗಲು-ರಾತ್ರಿ ನಡೆದ ಕಾರ್ಯಕ್ರಮಗಳನ್ನು ಹಾಗೂ ಅಲ್ಲಿಗೆ ಬಂದಿರುವ ಅತಿಥಿಗಳ ಕುರಿತು ವರದಿ ಮಾಡಿದ್ದವು. ಇದಕ್ಕೆ ನೀತಾ ಅಂಬಾನಿ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಮದುವೆಯ ಸಂದರ್ಭದಲ್ಲಿ ನಮ್ಮಲ್ಲಿ ಯಾರಾದರೂ ತಪ್ಪು ಮಾಡಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಹೆಚ್ಚಿದ ಗೌರವ.. ಸ್ಥಳೀಯ ಆರ್ಥಿಕತೆಗೆ ಬಲ.. ಮುಖೇಶ್​ ಅಂಬಾನಿ ಪುತ್ರನ ಮದ್ವೆಯಿಂದ ಯಾರಿಗೆ, ಹೇಗೆ ಲಾಭ..?

publive-image

ಜೊತೆಗೆ ಇಂದು ನಡೆಯಲಿರುವ ಆರತಕ್ಷತೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯ ಕುಟುಂಬದ ಸರಳತೆಗೆ ಜನ ಸಂತೋಷಗೊಂಡಿದ್ದಾರೆ. ಮತ್ತೊಂದೆಡೆ ಮದುವೆಯ ನಂತರ ಮುಕೇಶ್ ಅಂಬಾನಿ ತುಂಬಾ ಭಾವುಕರಾಗಿ ಕಾಣಿಸಿಕೊಂಡಿದ್ದಾರೆ. ಅವರ ಕಣ್ಣುಗಳಲ್ಲಿ ಕಣ್ಣೀರು ಬಂದಿದೆ. ಈ ಮದುವೆಗೆ ಅಂಬಾನಿ ಕುಟುಂಬ ಸುಮಾರು 5000 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದೆ. ಈ ಕಾರಣಕ್ಕಾಗಿ ವಿಶ್ವದ ಅತ್ಯಂತ ದುಬಾರಿ ಮದುವೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ:ಮುಕೇಶ್ ಅಂಬಾನಿ ಅಲ್ಲವೇ ಅಲ್ಲ.. ರಿಲಯನ್ಸ್​ ಇಂಡಸ್ಟ್ರೀಸ್​ನಲ್ಲಿ ಹೆಚ್ಚು ಷೇರು ಹೊಂದಿರೋದು ಯಾರು ಗೊತ್ತೇ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment