ಅಂದದ ಗೊಂಬೆಗೆ ಚಂದದ ಶೃಂಗಾರ.. ಕೈಮಗ್ಗದ ಕಾಂಚೀಪುರಂ ಸೀರೆಯಲ್ಲಿ ಮಿಂಚಿದ ನೀತಾ ಅಂಬಾನಿ

author-image
AS Harshith
Updated On
ಅಂದದ ಗೊಂಬೆಗೆ ಚಂದದ ಶೃಂಗಾರ.. ಕೈಮಗ್ಗದ ಕಾಂಚೀಪುರಂ ಸೀರೆಯಲ್ಲಿ ಮಿಂಚಿದ ನೀತಾ ಅಂಬಾನಿ
Advertisment
  • ಅನಂತ್​ ಅಂಬಾನಿಯ ಪ್ರಿ-ವೆಡ್ಡಿಂಗ್​ ಶೂಟ್
  • ಕಾಂಚೀಪುರಂ ಸೀರೆಯಲ್ಲಿ ಕಾಣಿಸಿಕೊಂಡ ನೀತಾ ಅಂಬಾನಿ
  • ಕೈಮಗ್ಗದಿಂದ ತಯಾರಿಸಲಾದ ಸೀರೆ ಧರಿಸಿ ಕಂಗೊಳಿಸಿದ ಮುಖೇಶ್​ ಅಂಬಾನಿ ಪತ್ನಿ

ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿಯ ಪ್ರಿ-ವೆಡ್ಡಿಂಗ್​ ಶೂಟ್​ ಅದ್ಧೂರಿಯಾಗಿ ನಡೆದಿದೆ. ಗುಜರಾತ್​ನ ಜಾಮ್​ನಗರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳಿಂದ ಸೆಲೆಬ್ರಿಟಿಗಳು ಬಂದಿದ್ದರು. ಈ ಅದ್ಧೂರಿ ಕಾರ್ಯಕ್ರಮದಲ್ಲಿ ಮುಖೇಶ್​ ಅಂಬಾನಿ ಪತ್ನಿ ನೀತಾ ಅಂಬಾನಿ ಕೈಮಗ್ಗದ ಕಾಂಚೀಪುರಂ ಸೀರೆಯಲ್ಲಿ ಮಿಂಚಿದ್ದಾರೆ.

ಹೌದು. ಮಗ ಅನಂತ್ ಅಂಬಾನಿಯ ಪ್ರಿ-ವೆಡ್ಡಿಂಗ್​ನಲ್ಲಿ ತಾಯಿ ನೀತಾ ಅಂಬಾನಿ ಕೈಮಗ್ಗದ ಕಾಂಚೀಪುರಂ ಸೀರೆಯಲ್ಲಿ ಧರಿಸಿದ್ದರು. ಸಿಲ್ವರ್​ ಕಲರ್​ ಸೀರೆ, ಗ್ರೀನ್​ ಕಲರ್​ ನೆಕ್ಲೆಸ್​​ ಧರಿಸಿ ಗಮನಸೆಳೆದಿದ್ದಾರೆ.

ಮಗನ ವಿವಾಹಕ್ಕೆಂದು ವಿನೂತನವಾಗಿ ನೇಕಾರರ ಕರಕುಶಲತೆ ಮೇರುಕೃತಿಯಿಂದ ಈ ಸೀರೆಯನ್ನ ತಯಾರಿಸಲಾಗಿದೆ. ತಲೆಮಾರುಗಳಿಂದ ತಮ್ಮ ಕಲೆಯನ್ನು ಸಾಣೆ ಹಿಡಿದಿರೋ ನೇಕಾರರಿಗೆ ಗೌರವ ಕೊಡೋ ಮೂಲಕ ನೀತಾ ಅಂಬಾನಿ ಸೀರೆಯುಟ್ಟು ಭಾರತೀಯ ಸಂಸ್ಕೃತಿಯನ್ನ ಎತ್ತಿಹಿಡಿದಿದ್ದಾರೆ.

ಇನ್ನು ದುಬಾರಿಯಾಗಿ ಈ ಪ್ರಿ-ವೆಡ್ಡಿಂಗ್​ ಕಾರ್ಯಕ್ರಮ ನಡೆಸಲಾಗಿದೆ. ಖ್ಯಾತ ಬಾರ್ಬಡಿಯನ್​ ಸಿಂಗರ್​ ರಿಯಾನಳನ್ನು ಅಂಬಾನಿ ಕುಟುಂಬ ಭಾರತಕಗ್ಕೆ ಕರೆಸಿದ್ದಲ್ಲದೆ. ಆಕೆಯ ಬಾಯಾರೆ ಹಾಡಿಸಿದ್ದಾರೆ. ಮಾಹಿತಿಯಂತೆ ಆಕೆಗೆ 74 ಕೋಟಿ ರೂಪಾಯಿ ನೀಡಿ ಭಾರತಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment