/newsfirstlive-kannada/media/post_attachments/wp-content/uploads/2024/07/ambhani.jpg)
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಮದುವೆ ಆಗಲಿದ್ದಾರೆ. ಇದಾದ ಬಳಿಕ ಜುಲೈ 13ರಂದು ಪೂಜೆ ಮತ್ತು ಜುಲೈ 14 ರಂದು ಆರತಕ್ಷತೆ ನಡೆಯಲಿದೆ.
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮೊದಲ ಹಾಗೂ ಎರಡನೇ ಪೂರ್ವ ವಿವಾಹ ಕಾರ್ಯಕ್ರಮಕ್ಕೆ ಭಾರಿ ಮೊತ್ತದ ಹಣವನ್ನು ಖರ್ಚು ಮಾಡಿದ್ದಾರೆ ಎಂದು ವರದಿಯಾಗಿತ್ತು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಅತ್ಯಂತ ದುಬಾರಿ ಮದುವೆಗಳಲ್ಲಿ ಒಂದಾಗಲಿದೆ.
ಹಿಂದೆಯೂ ಯಾರು ಮಾಡಿಲ್ಲದ, ಮುಂದೆಯೂ ಯಾರು ಮಾಡದ ರೀತಿಯಲ್ಲಿ ಅನಂತ್ ಅಂಬಾನಿ ಮದುವೆ ಮಾಡಬೇಕೆಂದು ಮುಖೇಶ್ ಅಂಬಾನಿ ದಂಪತಿ ನಿರ್ಧರಿಸಿಕೊಂಡಿದ್ದರು. ಅದರಲ್ಲೂ ತಮ್ಮ ಕೊನೆಯ ಮಗನ ಮದುವೆಯನ್ನು ಕುಟುಂಬಸ್ಥರು ಬಹಳ ಅದ್ಧೂರಿಯಾಗಿ ಮದುವೆಯಾಗಲು ಸಜ್ಜಾಗಿದ್ದಾರೆ. ಅಂಬಾನಿ ಕುಟುಂಬವು ತಮ್ಮ ಶ್ರೀಮಂತ ಜೀವನಶೈಲಿಗೆ ಹೆಸರು ವಾಸಿಯಾಗಿದೆ ಮತ್ತು ಅದ್ಧೂರಿ ವಿವಾಹ ಆಚರಣೆಗಳು ಸಾಕಷ್ಟು ಪುರಾವೆಯಾಗಿದೆ.
ಇದಷ್ಟೇ ಅಲ್ಲದೇ ಅಂಬಾನಿ ಕುಟುಂಬವು ಉನ್ನತ ಮಟ್ಟದ, ಅದ್ಭುತವಾದ ಆಭರಣ ಸಂಗ್ರಹವನ್ನು ಹೊಂದಿದೆ. ಉದಾಹರಣೆಗೆ ನೀತಾ ಅಂಬಾನಿಯ ಧರಿಸಿದ 500 ಕೋಟಿ ರೂಪಾಯಿ ಮೌಲ್ಯದ ಅಂದವಾದ ಪಚ್ಚೆ-ವಜ್ರದ ನೆಕ್ಲೇಸ್ ಆಗಿರಬಹುದು, ಅನಂತ್ ಅಂಬಾನಿಯವರ ಧರಿಸದ್ದ 200 ಕೋಟಿ ರೂಪಾಯಿ ಮೌಲ್ಯದ ಪಾಟೆಕ್ ಫಿಲಿಪ್ ಮತ್ತು ರಿಚರ್ಡ್ ಮಿಲ್ಲೆ ಸೇರಿದಂತೆ ವಾಚ್ ಸಂಗ್ರಹವಾಗಲಿ ಪಟ್ಟಿಯು ಜನರಲ್ಲಿ ಸಾಕಷ್ಟು ಕುತೂಹಲ ಮೂಡುವಂತೆ ಇದೆ.
ಅಂಬಾನಿ ಕುಟುಂಬದಲ್ಲಿ ಯಾರೆಲ್ಲ ದುಬಾರಿ ಆಭರಣ ಹೊಂದಿದ್ದಾರೆ?
1. ನೀತಾ ಅಂಬಾನಿಯವರ 500 ಕೋಟಿ ರೂಪಾಯಿಯ ಪಚ್ಚೆ-ವಜ್ರದ ನೆಕ್ಲೇಸ್
ಜಾಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ರ ವಿವಾಹಪೂರ್ವದಲ್ಲಿ ನೀತಾ ಅಂಬಾನಿ ಅವರು ಚಿನ್ನದ ಸೀರೆಯನ್ನು ಧರಿಸಿದ್ದರು. ಅದರ ಜೊತೆಗೆ ಸುಂದರವಾದ ಪಚ್ಚೆಯ ಬಣ್ಣ ಹೊದಿಕೆಯ ವಜ್ರವನ್ನು ಒಳಗೊಂಡ ನೆಕ್ಲೇಸ್, ಹೂವಿನ ಆಕಾರದ ಕಿವಿಯೋಲೆಗಳು, ಬಳೆಗಳು ಮತ್ತು ಉಂಗುರಗಳನ್ನು ಧರಿಸಿದ್ದರು. ಫ್ರೀ ಪ್ರೆಸ್ ಜರ್ನಲ್ ಪ್ರಕಾರ, ನೀತಾ ಅಂಬಾನಿ ಧರಿಸಿದ್ದ ಕೇವಲ ನೆಕ್‌ಪೀಸ್ 400 ರಿಂದ 500 ಕೋಟಿ ರೂಪಾಯಿಗೆ ಬೆಲೆ ಬಾಳುತ್ತದೆಯಂತೆ. ಜೊತೆಗೆ ನೀತಾ ಅವರು ಧರಿಸಿದ್ದ ಉಂಗುರದ ಬೆಲೆ 53 ಕೋಟಿ ರೂಪಾಯಿ ಇದೆ.
2. ಶ್ಲೋಕಾ ಮೆಹ್ತಾ ಅವರ 451 ಕೋಟಿ ರೂ. ವಜ್ರದ ನೆಕ್ಲೇಸ್
ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಮಗ ಆಕಾಶ್ ಅಂಬಾನಿ ಅವರ ಪತ್ನಿಯ ಬಳಿ ಕೂಡ ಬಹು ಕೋಟಿ ಬೆಲೆ ಬಾಳುವ ನೆಕ್ಷೇಸ್ ಇದೆ. ಹೌದು, ಆಕಾಶ್ ಅಂಬಾನಿ ಪತ್ನಿ ಶ್ಲೋಕಾ ಮೆಹ್ತಾ ಬಳಿ 407.48 ಕ್ಯಾರೆಟ್ ನೀಲಿ ಬಣ್ಣದ ಟೋಪಾಜ್ ವಜ್ರದ ನೆಕ್ಲೇಸ್ ಇದೆ. 91-ಡೈಮಂಡ್ ನೆಕ್‌ಪೀಸ್ ಬೆಲೆ 451 ಕೋಟಿ ರೂಪಾಯಿ ಆಗಿದೆ.
3. ಇಶಾ ಅಂಬಾನಿ ಅವರ 167 ಕೋಟಿ ರೂ ವಜ್ರದ ನೆಕ್ಲೇಸ್
ಅನಂತ್ ಅಂಬಾನಿಯವರ ಸಹೋದರಿ ಇಶಾ ಅಂಬಾನಿ ಅವರ ಬಳಿ 20 ಮಿಲಿಯನ್ ಡಾಲರ್ಗೆ ಬೆಲೆ ಬಾಳುವ ವಜ್ರದ ನೆಕ್ಲೇಸ್ ಅನ್ನು ಹೊಂದಿದ್ದಾರಂತೆ. ಅನಂತ್ ಅಂಬಾನಿ ಅವರ ವಿವಾಹಪೂರ್ವ ಆಚರಣೆಗಳಲ್ಲಿ ಆ ವಜ್ರದ ನೆಕ್ಲೇಸ್ ಧರಿಸಿದ್ದರು.
4. ಅನಂತ್ ಅಂಬಾನಿಯವರ 67.5 ಕೋಟಿ ರೂ ಪಾಟೆಕ್ ಫಿಲಿಪ್ ವಾಚ್
ಅನಂತ್ ಅಂಬಾನಿ ಅವರು ಐಷಾರಾಮಿ ಗಡಿಯಾರ ಸಂಗ್ರಾಹಕರಾಗಿದ್ದಾರೆ. ಪಾಟೆಕ್ ಫಿಲಿಪ್ ಬಹುಶಃ ಅವರ ಸಾರ್ವಕಾಲಿಕ ಮೆಚ್ಚಿನವರಾಗಿದ್ದಾರೆ. ಪಾಟೆಕ್ ಫಿಲಿಪ್ ಗ್ರ್ಯಾಂಡ್ ಮಾಸ್ಟರ್ ಚೈಮ್‌ನ ಹೆಮ್ಮೆಯ ಮಾಲೀಕರಾಗಿದ್ದಾರೆ. ಇದು ಐಕಾನಿಕ್ ಸ್ವಿಸ್ ಐಷಾರಾಮಿ ಬ್ರಾಂಡ್‌ನಿಂದ ಇದುವರೆಗೆ ತಯಾರಿಸಿದ ಅತ್ಯಂತ ಸಂಕೀರ್ಣವಾದ ಗಡಿಯಾರವಾಗಿದೆ. ಸೌಂದರ್ಯದ ಟೈಮ್‌ಪೀಸ್‌ನ ಕಡಿದಾದ ಬೆಲೆ 67.5 ಕೋಟಿ ರೂಪಾಯಿ ಉಳ್ಳದ್ದಾಗಿದೆ.
5. ರಾಧಿಕಾ ಮರ್ಚೆಂಟ್ ಅವರ ಬಹುಕೋಟಿ ಬೆಲೆಯ ಮುತ್ತು ಮತ್ತು ವಜ್ರದ ಚೋಕರ್
ನೀತಾ ಅಂಬಾನಿ ಹಾಗೂ ಮುಕೇಶ್ ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್‌ಗೆ ತನ್ನ ಸ್ವಂತ ಸಂಗ್ರಹದಿಂದ ಸೊಗಸಾದ ನೆಕ್‌ಪೀಸ್ ಅನ್ನು ಉಡುಗೊರೆಯಾಗಿ ನೀಡಿದರು. ಒಂದು ಸುಂದರವಾದ ಮುತ್ತು ಮತ್ತು ವಜ್ರದ ಬಹು-ದಾರಿಯ ಚೋಕರ್ ಸರವನ್ನು ಹೊಂದಿದ್ದಾರೆ. ಸೋನಮ್ ಕಪೂರ್ ಮತ್ತು ಆನಂದ್ ಅಹುಜಾ ಅವರ ವಿವಾಹದ ಆರತಕ್ಷತೆಗಾಗಿ ಆ ಸರವನ್ನು ಧರಿಸಿದ್ದರು. ಅಷ್ಟೇ ಬಿಟ್ಟರೆ ವಿಶಿಷ್ಟ ಆಭರಣದ ನಿಖರವಾದ ಬೆಲೆ ತಿಳಿದು ಬಂದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ