ಅಬ್ಬಾ.. ಸಿಕ್ಕಾಪಟ್ಟೆ ವೈರಲ್ ಆದ ನೀತಾ ಅಂಬಾನಿ ಪಾಪ್​ಕಾರ್ನ್​ ಬ್ಯಾಗ್​! ಇದರ ಬೆಲೆ ಎಷ್ಟು ಗೊತ್ತಾ?

author-image
Gopal Kulkarni
Updated On
ಅಬ್ಬಾ.. ಸಿಕ್ಕಾಪಟ್ಟೆ ವೈರಲ್ ಆದ ನೀತಾ ಅಂಬಾನಿ ಪಾಪ್​ಕಾರ್ನ್​ ಬ್ಯಾಗ್​! ಇದರ ಬೆಲೆ ಎಷ್ಟು ಗೊತ್ತಾ?
Advertisment
  • ಫ್ಯಾಶನ್ ಜಗತ್ತಿನಲ್ಲಿ ಮತ್ತೆ ಸುದ್ದಿಯಾದ ನೀತಾ ಅಂಬಾನಿ
  • ಬ್ಯೂಟಿ ಇವೆಂಟ್​ನಲ್ಲಿ ಎಲ್ಲರ ಕಣ್ಮನ ಸೆಳೆದ ಅವರ ಬ್ಯಾಗ್​
  • ನೀತಾ ಅಂಬಾನಿ ಕೈಯಲ್ಲಿ ತೂಗುತ್ತಿದ್ದ ಬ್ಯಾಗ್​ನ ಬೆಲೆ ಎಷ್ಟು?

ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ಇತ್ತೀಚೆಗೆ ಫ್ಯಾಶನ್​ ಜಗತ್ತಿನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಪ್ರತ್ಯಕ್ಷವಾಗಿ ಅವರು ಗುರುತಿಸಿಕೊಳ್ಳದಿದ್ದರು. ಅವರು ಆಯ್ಕೆ ಮಾಡಿಕೊಳ್ಳುತ್ತಿರುವ ಧಿರಿಸುಗಳು ಸೋಷಿಯಲ್ ಮೀಡಿಯಾ ಜಗತ್ತಿನ ಕಣ್ಣನ್ನು ಸೆಳೆಯುತ್ತಿವೆ. ಇತ್ತೀಚೆಗೆ ಮುಂಬೈನ ಬ್ಯೂಟಿ ಇವೆಂಟ್ ಒಂದರಲ್ಲಿ ಭಾಗಿಯಾಗಿದ್ದರು ನೀತಾ ಅಂಬಾನಿ ಹಾಗೂ ನಿಶಾ ಅಂಬಾನಿ. ಈ ವೇಳೆ ಅವರು ಕೈಯಲ್ಲಿ ಹಿಡಿದುಕೊಂಡಿದ್ದ ಪಾಪ್​ಕಾರ್ನ್​ ಬ್ಯಾಗ್ ಎಲ್ಲರ ಗಮನ ಸೆಳೆದಿದೆ. ಎಲ್ಲರ ಐ ಬಾಲ್ ಅವರ ಹಿಡಿದುಕೊಂಡಿರುವ ಬ್ಯಾಗ್ ಮೇಲೆಯೇ ಬಿದ್ದಿದ್ದು. ಬ್ಯಾಗ್ ಬಗ್ಗೆ ದೊಡ್ಡ ಚರ್ಚೆಗಳು ಶುರುವಾಗಿವೆ.

ಬ್ಯೂಟಿ ಇವೆಂಟ್​ಗೆ ಬಂದಿದ್ದ ನೀತಾ ಅಂಬಾನಿ ಅವರ ಸ್ಟೈಲಿಶ್​ ಬ್ಯುಸಿನೆಸ್ ಕ್ಯಾಸ್ಯೂವಲ್ ಟ್ವೀಡ್ ಬ್ಲೆಜರ್ ಹಾಗೂ ಸೆಕ್ವೆನ್ಡ್ ಫ್ಲೇರ್ಡ್ ಪ್ಯಾಂಟ್​ನಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಅವರು ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಪಾಪ್​ಕಾರ್ನ್ ಬ್ಯಾಗ್ ಎಲ್ಲರ ಕಣ್ಮನ ಸೆಳೆದಿತ್ತು. ಕಪ್ಪು ಮತ್ತು ಬಿಳಿ ಬಣ್ಣದಿಂದ ಕೂಡಿದ ಬ್ಯಾಗ್ ಪರ್ಷಿಯನ್ ಲಕ್ಸುರಿ ಲೇಬಲ್ ಇರುವ ಬ್ಯಾಗ್. ಇದನ್ನು ಪಾಪ್‌ಕಾರ್ನ್ ಮಿನಾಡಿಯರ್ ಬ್ಯಾಗ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: 1000 ರೂಪಾಯಿ ಹೂಡಿಕೆ ಮಾಡಿ ಲಕ್ಷ ಲಕ್ಷ ಗಳಿಸುತ್ತಿರುವ ಮಹಿಳೆ! ಇದು ಗೃಹಿಣಿಯೊಬ್ಬಳ ಯಶೋಗಾಥೆ

publive-image

ಇನ್​​ಸ್ಟಾಗ್ರಾಮ್ ಪೇಜ್​ @luxuriousbymm ಹೇಳುವ ಪ್ರಕಾರ ನೀತಾ ಅಂಬಾನಿ ತಮ್ಮೊಂದಿಗೆ ತೆಗೆದುಕೊಂಡು ಬಂದಿದ್ದ ಬ್ಯಾಗ್​​ನ ಬೆಲೆ ಸುಮಾರು 24 ಲಕ್ಷ ರೂಪಾಯಿ ಎಂದು ಹೇಳಲಾಗುತ್ತದೆ. ಈ ಬ್ಯಾಗ್​ನ ಹ್ಯಾಂಡಲ್ ಅ​ನ್ನು ಕಪ್ಪು ಬಣ್ಣದ ಬಟ್ಟೆಯೊಂದಿಗೆ ಬಂಗಾರದ ಎಳೆಯನ್ನು ಬಿಗಿಯಲಾಗಿದೆ. ಹಲವು ಮುತ್ತುಗಳಿಂದ ಬ್ಯಾಗ್​ನ ಹೊರಭಾಗವನ್ನು ಡಿಸೈನ್ ಮಾಡಲಾಗಿದ್ದು ಅದರಲ್ಲಿ ಬಂಗಾರದ ಟೋನ್​ಗಳು ಇವೆ ಎಂದು ಈ ಇನ್​ಸ್ಟಾಗ್ರಾಮ್ ಪೇಜ್ ಹೇಳಿದೆ.

publive-image

ಇನ್ನು ಇದೇ ಇವೆಂಟ್​ಗೆ ಆಗಮಿಸಿದ್ದ ನಿಶಾ ಅಂಬಾನಿಯವರ ಬ್ಯಾಗ್​ ಕೂಡ ಸದ್ದು ಮಾಡಿತ್ತು. ಜಿಯಾರ್ಜಿಯೊ ಅರಮಾನಿ ಕಾಸ್ಟ್ಯೂಮ್​ನೊಂದಿಗೆ ಬಂದಿದ್ದ ನಿಶಾ ಜುದಿತ್ ಲೈಬರ್ ವಿನ್ಯಾಸದ ಬ್ಯಾಗ್​​ನ್ನು ಕೈಯಲ್ಲಿ ಹಿಡಿದಿದ್ದರು. ಈ ಬ್ಯಾಗ್​ನ ಬೆಲೆ ಸುಮಾರು 5 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ.ನಿಶಾ ಅಂಬಾನಿಯವರ ಬ್ಯಾಗ್​ಗಿಂತ ನಿತಾ ಅಂಬಾನಿಯವರ ಬ್ಯಾಗ್ ಬೆಲೆ ಐದು ಪಟ್ಟು ದುಬಾರಿ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment