3,900 ಚದರ ಕಿ.ಮೀ ಭೂಕಬಳಿಕೆಗೆ ಯತ್ನ.. ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ನಿತ್ಯಾನಂದ! ಅಸಲಿಯತ್ತು ಏನು?

author-image
admin
Updated On
ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗ ಬಹಿರಂಗ.. ಕೋರ್ಟ್​ನಲ್ಲಿ ಶಿಷ್ಯರಿಂದ ಅಸಲಿ ಸತ್ಯ..!
Advertisment
  • ಅಂತರಾಷ್ಟ್ರೀಯ ಮಟ್ಟದಲ್ಲಿ ಭೂಮಿ ಕಬಳಿಕೆಗೆ ನಿತ್ಯಾ ಪ್ರಯತ್ನ!
  • 3,900 ಚದರ ಕಿ.ಮೀ ಭೂಮಿ ಭೋಗ್ಯಕ್ಕೆ ನಿತ್ಯಾನಂದ ಒಪ್ಪಂದ
  • ಚೆನ್ನೈ ನಗರದ 9 ಪಟ್ಟು, ಬೆಂಗಳೂರು ನಗರದ 5 ಪಟ್ಟು ಜಾಗ ಇದು!

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭೂಮಿ ಕಬಳಿಕೆಗೆ ಯತ್ನಿಸಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ವಿದೇಶದಲ್ಲಿ ನಿತ್ಯಾನಂದ ಕಬಳಿಕೆಗೆ ಯತ್ನಿಸಿರೋದು ಎಷ್ಟು ಜಾಗ ಗೊತ್ತಾ?
ನಿತ್ಯಾನಂದ ಒಂದು ದೇಶದಷ್ಟು ವಿಸ್ತೀರ್ಣದ ಭೂಮಿ ಕಬಳಿಕೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಅಮೆಜಾನ್ ರೈನ್ ಫಾರೆಸ್ಟ್​ನ 3,900 ಚದರ ಕಿ.ಮೀ ಜಾಗ ಖರೀದಿಸಲು ಮುಂದಾಗಿರೋ ಸ್ಫೋಟಕ ಸುದ್ದಿ ಬಯಲಾಗಿದೆ.

ನಿತ್ಯಾನಂದ ಬೊಲಿವಿಯಾದ ಬುಡಕಟ್ಟು ಜನರ ಜೊತೆಗೆ ಅತಿ ದೊಡ್ಡ ಒಪ್ಪಂದಕ್ಕೆ ಮುಂದಾಗಿದ್ರು. ಬೊಲಿವಿಯಾ ಬುಡಕಟ್ಟು ಜನರ ಜೊತೆ ಭೂಮಿ ಲೀಸ್‌ಗೆ ನಿತ್ಯ ಒಪ್ಪಂದಕ್ಕೆ ರೆಡಿಯಾಗಿದ್ದರು. ಆದರೆ ಈ ವಿಷಯ ತಿಳಿಯುತ್ತಿದ್ದಂತೆ ಬೊಲಿವಿಯಾ ಸರ್ಕಾರ ಮಧ್ಯಪ್ರವೇಶ ಮಾಡಿದೆ. ನಿತ್ಯಾನಂದ ಭೂಮಿ ಲೀಸ್‌ಗೆ ಪಡೆಯುವ ಪ್ರಯತ್ನಕ್ಕೆ ಬ್ರೇಕ್ ಹಾಕಲಾಗಿದೆ.

publive-image

ನಿತ್ಯಾನಂದ ‘ಭೂ’ಸ್ವಾಹ!
ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಅಸ್ತಿತ್ವದಲ್ಲಿ ಇಲ್ಲದಿರೋ ಕೈಲಾಸ ದೇಶಕ್ಕೆ ಭೂಮಿ ಲೀಸ್‌ಗೆ ಪಡೆಯಲು ಯತ್ನಿಸಿದ್ದಾರೆ. ಬೊಲಿವಿಯಾದ ಬುಡಕಟ್ಟು ಸಮುದಾಯದ ಜೊತೆಗೆ ಬರೋಬ್ಬರಿ 3,900 ಚದರ ಕಿ.ಮೀ ಭೂಮಿಯನ್ನು ಭೋಗ್ಯಕ್ಕೆಗೆ ಪಡೆಯಲು ನಿತ್ಯಾನಂದ ಒಪ್ಪಂದ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಅನ್ನನ ಪಾಥಿಯ ಅಪಾ ತಿ ತೇ ತೇನಾ.. ಸಖತ್ ವೈರಲ್ ಆದ ಥಾಯ್ ಸಾಂಗ್‌; ಯಾರು ಈ ಸುಂದರಿ? 

3,900 ಚದರ ಕಿ.ಮೀ ಭೂಮಿಗೆ ದಿನಕ್ಕೆ 2,455 ರೂಪಾಯಿ ಲೀಸ್ ಹಣ ನೀಡೋ ಒಪ್ಪಂದ ಇದಾಗಿತ್ತು. 3,900 ಚದರ ಕಿ.ಮೀ ಭೂಮಿಗೆ ತಿಂಗಳಿಗೆ 74,667 ರೂಪಾಯಿ, ವರ್ಷಕ್ಕೆ 8.96 ಲಕ್ಷ ರೂಪಾಯಿ ಹಣ ಪಾವತಿಸಿ ದೊಡ್ಡ ಭೂಮಿ ಲೀಸ್‌ಗೆ ಪಡೆಯೋ ಪ್ಲಾನ್ ಮಾಡಲಾಗಿತ್ತು.

ಅಮೆಜಾನ್ ರೈನ್ ಫಾರೆಸ್ಟ್​ನ 3,900 ಚದರ ಕಿ.ಮೀ ಜಾಗ ಅಂದ್ರೆ ಚೆನ್ನೈ ನಗರದ 9 ಪಟ್ಟು, ಬೆಂಗಳೂರು ನಗರದ ವಿಸ್ತೀರ್ಣದ 5 ಪಟ್ಟು ಹೆಚ್ಚಿನ ವಿಸ್ತೀರ್ಣದ ಜಾಗ ಇದಾಗಿತ್ತು.

publive-image

ನಿತ್ಯಾನಂದನ ‘ಭೂ’ ಕನಸು ಭಗ್ನ!
ನಿತ್ಯಾನಂದನ ಲೀಸ್‌ ಯತ್ನ ಗಮನಕ್ಕೆ ಬರುತ್ತಿದ್ದಂತೆ, ಬೊಲಿವಿಯಾ ಸರ್ಕಾರ ಮಧ್ಯಪ್ರವೇಶ ಮಾಡಿದೆ. ಬುಡಕಟ್ಚು ಸಮುದಾಯದವರಿಂದ ಭೂಮಿ ಲೀಸ್‌ ಪಡೆಯಲು ಅವಕಾಶವಿಲ್ಲ ಎಂದಿದೆ.

ನಿತ್ಯಾನಂದನಿಂದ ಭೂಮಿ ಲೀಸ್‌ಗೆ ಪಡೆಯುವ ಯತ್ನಕ್ಕೆ ಇದೀಗ ಸಂಪೂರ್ಣ ಬ್ರೇಕ್ ಬಿದ್ದಿದೆ. ಒಪ್ಪಂದ ಮಾಡಿಕೊಂಡಿದ್ದರೂ, ಮಾನ್ಯತೆ ಇಲ್ಲ ಎಂದು ಬೊಲಿವಿಯಾ ಸರ್ಕಾರ ಸ್ಪಷ್ಪಪಡಿಸಿದೆ. ಅಲ್ಲದೇ ಈ ಲ್ಯಾಂಡ್ ಡೀಲ್​ನಲ್ಲಿ ಭಾಗಿಯಾದವರನ್ನೆಲ್ಲಾ ಬೊಲಿವಿಯಾದಿಂದ ಗಡೀಪಾರು ಮಾಡುವ ಕಠಿಣ ಕ್ರಮಕ್ಕೆ ಮುಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment