newsfirstkannada.com

ಕಳೆದ ಬಾರಿ ಮಿಸ್, ಈ ಬಾರಿ ಮಿಸ್ ಆಗುವ ಚಾನ್ಸೇ ಇಲ್ಲ ಅಂತಿದ್ದಾರೆ ನಿತೀಶ್ ಕುಮಾರ್.. ಏನದು..?

Share :

Published June 6, 2024 at 9:31am

    ‘ದೇಶಕ್ಕೆ ನಿತೀಶ್‌ ಕುಮಾರ್​ಗಿಂತ ಒಳ್ಳೆಯ ಪ್ರಧಾನಿ ಯಾರಿದ್ದಾರೆ’

    ಸಂಚಲನ ಸೃಷ್ಟಿಸಿದ ಜೆಡಿಯು ನಾಯಕ ಖಾಲಿದ್ ಅನ್ವರ್ ಹೇಳಿಕೆ

    ನಿತೀಶ್​ ಕುಮಾರ್ ರೈಲ್ವೇ ಖಾತೆಗೆ ಬೇಡಿಕೆ ಇಡುವ ಸಾಧ್ಯತೆ

ಲೋಕಸಭಾ ಚುನಾವಣೆ ಫಲಿತಾಂಶ ಕೇಸರಿ ಪಡೆಯ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. 400ರ ಟಾರ್ಗೆಟ್‌ ಇಟ್ಟುಕೊಂಡಿದ್ದ ಎನ್‌ಡಿಎ 300 ಕೂಡ ರೀಚ್‌ ಆಗಲು ಆಗಿಲ್ಲ. ಅಲ್ಲದೇ ಈ ಬಾರಿ ಬಿಜೆಪಿ, ಕೇಂದ್ರದಲ್ಲಿ ಸರ್ಕಾರ ರಚಿಸಲು ಮಿತ್ರ ಪಕ್ಷಗಳನ್ನು ಅನಿವಾರ್ಯವಾಗಿ ಅವಲಂಬಿಸಬೇಕಿದೆ. ಪರಿಸ್ಥಿತಿ ಹೀಗಿರಬೇಕಾದ್ರೆ ಮಿತ್ರಪಕ್ಷವಾದ ಜೆಡಿಯುಗೆ ಸಖತ್ ಡಿಮ್ಯಾಂಡ್ ಬಂದ್ಬಿಟ್ಟಿದೆ. ನಿತೀಶ್‌ ಕುಮಾರ್‌ ಕಿಂಗ್‌ ಮೇಕರ್‌ ಆಗಿ ಹೊರಹೊಮ್ಮಿದ್ದಾರೆ. ಎನ್‌ಡಿಎ ಜೊತೆ ಹೋಗ್ತೀವಿ ಎಂದಿರುವ ನಿತೀಶ್​ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಮುಂದೆ ದೊಡ್ಡ ಬೇಡಿಕೆಗಳನ್ನೇ ಇಟ್ಟಿದ್ದಾರೆ.

ಎನ್​ಡಿಎನಲ್ಲೇ ಉಳಿಯಲು ಪ್ರಧಾನಿ ಮೋದಿ ಮುಂದೆ ನಿತೀಶ್​ ಕುಮಾರ್​ ಅಸಾಧ್ಯವಾದ ಡಿಮ್ಯಾಂಡ್‌ಗಳನ್ನ ಇಡ್ತಾರಾ ಅನ್ನೋ ಪ್ರಶ್ನೆ ಹಾಗೂ ಕುತೂಹಲ ಎದುರಾಗಿದೆ. ಈ ನಡುವೆಯೇ ನಿತೀಶ್‌ ಕುಮಾರ್‌ ಪ್ರಧಾನಿಯಾಗಲಿ ಅಂತ ಬಿಹಾರದ ವಿಧಾನಪರಿಷತ್‌ ಸದಸ್ಯ ಖಾಲಿದ್ ಅನ್ವರ್ ಹೇಳಿಕೆ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ:ಮತ್ತೆ ಬಾರದ ಮಳೆರಾಯ.. KRS ಡ್ಯಾಮ್​​ನಲ್ಲಿ ನೀರಿನ ಹರಿವಿನಲ್ಲಿ ಏರಿಳಿತ..! ಇಂದು ಎಷ್ಟಿದೆ..?

ಕಳೆದ ಬಾರಿ ಮಿಸ್, ಈ ಬಾರಿ ಮಿಸ್ ಆಗುವ ಚಾನ್ಸೇ ಇಲ್ಲ
ಈಗಾಗಲೇ ಪ್ರಧಾನಿ ಮೋದಿಯನ್ನ ಭೇಟಿಯಾಗಿರುವ ನಿತೀಶ್​ ಕುಮಾರ್ ಕ್ಯಾಬಿನೆಟ್‌ ಸ್ಥಾನ ಹಂಚಿಕೆ ಬಗ್ಗೆ ಮಾತುಕತೆ ನಡೆಸಿ ಬಂದಿದ್ದಾರೆ. ಭಾರೀ ಬೇಡಿಕೆಗಳನ್ನ ಮುಂದಿಟ್ಟು ಕಳೆದ ಬಾರಿ ಕ್ಯಾಬಿನೆಟ್‌ ಸೇರದೆ ಹೊರಗುಳಿದಿದ್ದ ನಿತೀಶ್‌ ಕುಮಾರ್ ಈ ಬಾರಿ ಹೊರಗುಳಿಯುವ ಚಾನ್ಸೇ ಇಲ್ಲ. ಯಾಕಂದ್ರೆ ಈ ಬಾರಿ ಸಂಖ್ಯಾಬಲದ ಕೊರತೆ ಕಾರಣಕ್ಕೆ ನಿತೀಶ್‌ ಬೇಡಿಕೆಗೆ ಪ್ರಧಾನಿ ಮೋದಿ ಮಣಿಯುವ ಪ್ರಮೇಯ ಹೆಚ್ಚಾಗಿದೆ.

ಪರಿಸ್ಥಿತಿಯ ತುಸು ಹೆಚ್ಚೇ ಲಾಭ ಪಡೆಯುವ ನಿರೀಕ್ಷೆಯಲ್ಲಿರುವ ನಿತೀಶ್​ ಕುಮಾರ್​ ರೈಲ್ವೇ ಖಾತೆಗೆ ಬೇಡಿಕೆ ಇಡುವ ಸಾಧ್ಯತೆ ಇದೆ. ಇದರ ಜೊತೆಗೆ ಬಿಹಾರಕ್ಕೆ ವಿಶೇಷ ಅನುದಾನಕ್ಕೂ ಬೇಡಿಕೆ ಇಡುವ ಸಂಭವವಿದೆ. ಜೆಡಿಯು ಪಕ್ಷ ರೈಲ್ವೇ, ಗ್ರಾಮೀಣಾಭಿವೃದ್ಧಿ, ಕೃಷಿ ಖಾತೆಗಳಿಗೆ ಬೇಡಿಕೆ ಇಡಬಹುದು. ಯಾಕಂದ್ರೆ ನಿತೀಶ್ ಕುಮಾರ್, ವಾಜಪೇಯಿ ಕಾಲದಲ್ಲಿ ರೈಲ್ವೇ ಖಾತೆ ಕ್ಯಾಬಿನೆಟ್ ಸಚಿವರಾಗಿದ್ದರು. ಈಗ ತಮ್ಮ ಪಕ್ಷಕ್ಕೆ ಮತ್ತೆ ರೈಲ್ವೇ ಖಾತೆ ಬೇಕೆಂಬ ಬೇಡಿಕೆ ಇಡುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ:ಮೊದಲ ಪಂದ್ಯದಲ್ಲೇ ಕೈಕೊಟ್ಟ ಸ್ಟಾರ್​.. ಟೀಂ ಇಂಡಿಯಾದ ಮೊದಲ ಪ್ರಯೋಗ ಫೇಲ್..!

ಒಟ್ಟಾರೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಉಳಿಯಲು ಮೋದಿ ಕ್ಯಾಬಿನೆಟ್‌ನಲ್ಲಿ ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದಿದ್ದಾರೆ. ಇದರ ಜೊತೆ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆಯೂ ಆಗ್ರಹಿಸಿದ್ದಾರೆ. ಇಂಡಿಯಾ ಒಕ್ಕೂಟ ತಮಗೆ ಉಪಪ್ರಧಾನಿ ಪಟ್ಟದ ಆಫರ್‌ನ್ನು ನೀಡಿರುವ ಬಗ್ಗೆಯೂ ನಿತೀಶ್‌ ಕುಮಾರ್‌, ಅಮಿತ್‌ ಶಾ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಆದರೆ ಉಪ ಪ್ರಧಾನಿ ಹುದ್ದೆ ನೀಡುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗ್ತಿದೆ. ಮೊದಲೇ ಜಂಪಿಂಗ್ ಸ್ಟಾರ್ ಎಂದೇ ಜನಜನಿತವಾಗಿರುವ ನಿತೀಶ್ ಕುಮಾರ್ ಏನ್​ ಮಾಡ್ತಾರೋ ಕಾದು ನೋಡ್ಬೇಕು.

ಇದನ್ನೂ ಓದಿ:ಪಾಕ್ ವಿರುದ್ಧದ ಪಂದ್ಯಕ್ಕೂ ಮೊದಲೇ ದೊಡ್ಡ ಆಘಾತ.. ಕ್ಯಾಪ್ಟನ್ ರೋಹಿತ್ ಆಡೋದು ಡೌಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಳೆದ ಬಾರಿ ಮಿಸ್, ಈ ಬಾರಿ ಮಿಸ್ ಆಗುವ ಚಾನ್ಸೇ ಇಲ್ಲ ಅಂತಿದ್ದಾರೆ ನಿತೀಶ್ ಕುಮಾರ್.. ಏನದು..?

https://newsfirstlive.com/wp-content/uploads/2024/06/NITISH-KUMAR.jpg

Load More