newsfirstkannada.com

ಮೋದಿ ಕಾಲಿಗೆ ನಮಸ್ಕರಿಸಲು ಹೋದ ನಿತೀಶ್ ಕುಮಾರ್; ಎಲ್ಲರಿಗೂ ಶಾಕ್‌ ಕೊಟ್ಟ ಲೀಡರ್ಸ್‌; ಆಗಿದ್ದೇನು?

Share :

Published June 7, 2024 at 9:24pm

    ನಿತೀಶ್​ ಕುಮಾರ್​, ಮೋದಿ ಜುಗಲ್​ ಬಂಧಿಗೆ ಸಾಕ್ಷಿಯಾದ ಸೆಂಟ್ರಲ್​ ಹಾಲ್

    ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ನಿತೀಶ್ ಕುಮಾರ್​ ಏನಂದ್ರು?

    ಮೋದಿಯವರ ಜರ್ನಿಯಲ್ಲಿ ಸಂಪೂರ್ಣ ಜೊತೆಗಿರುತ್ತೇವೆ ಎಂದು ವಿಶ್ವಾಸ

ಮೋದಿ ಸದ್ಯ ನಡೆಸ್ತಾ ಇರೋದು ಸಮ್ಮಿಶ್ರ ಸರ್ಕಾರ. ಎನ್​ಡಿಎ ಮಿತ್ರಪಕ್ಷಗಳ ಕೂಟದಲ್ಲಿ ಎಲ್ಲರ ಚಿತ್ತ ನೆಟ್ಟಿರೋದು ನಿತೀಶ್ ಕುಮಾರ್‌ ಮೇಲೆ. ಇವತ್ತಿನ ಎನ್‌ಡಿಎ ನಾಯಕನ ಆಯ್ಕೆ ಸಭೆಯಲ್ಲಿ ನಿತೀಶ್‌ ಆಡಿರೋ ಮಾತುಗಳು ಬಿಜೆಪಿ ಪಾಳಯವನ್ನ ಕೊಂಚ ನಿರಾಳವಾಗಿಸಿದೆ. ಜಂಪಿಂಗ್ ಸ್ಟಾರ್ ಎಂದೇ ಕರೆಯಲ್ಪಡುವ ಬಿಹಾರ ಸಿಎಂ ನಿತೀಶ್ ಕುಮಾರ್ ಮೋದಿಗೆ ಬೆಂಬಲ ನೀಡಿದ್ದಲ್ಲದೆ ಅವರ ಗುಣಗಾನ ಮಾಡಿದ್ದಾರೆ. ಮೋದಿ ಕಾಲಿಗೆ ಬೀಳಲು ಹೋಗಿ ವಿರೋಧಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ.

ಇದನ್ನೂ ಓದಿ: 8 ವರ್ಷದ ತಂಗಿಯ ಕುತ್ತಿಗೆಗೆ ದುಪ್ಪಟ್ಟ ಬಿಗಿದು ಕೊಂದ ಸ್ವಂತ ಅಣ್ಣ.. ತನಿಖೆ ವೇಳೆ ಕೊಲೆ ರಹಸ್ಯ ರಿವೀಲ್..

ಇವತ್ತು ಇಡೀ ದೇಶದ ಕಣ್ಣೇ ನಿತೀಶ್​ ಕುಮಾರ್ ಮೇಲಿತ್ತು. ಅವರು ಮೋದಿಗೆ ಬೆಂಬಲ ಕೊಡ್ತಾರಾ ಅಥವಾ ಆಕಾಶಕ್ಕೆ ಏಣಿ ಹಾಕುವಂತ ಬೇಡಿಕೆಗಳನ್ನಿಟ್ಟು ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟಕ್ಕೆ ಗುಡ್​ಬೈ ಹೇಳ್ತಾರಾ ಅಂತ ಹಲವರು ಕಣ್ಣುಗಳು ಎದುರು ನೋಡ್ತಿದ್ದವು. ಆದ್ರೆ ನಿತೀಶ್​ಕುಮಾರ್ ಮಾತ್ರ ಅವರಿಗೆಲ್ಲಾ ನಿರಾಸೆ ಮೂಡಿಸಿದ್ದಾರೆ. ಮೋದಿಗೆ ಭೇಷರತ್ ಬೆಂಬಲ ನೀಡೋ ಮೂಲಕ ಎಲ್ಲರನ್ನೂ ತಬ್ಬಿಬ್ಬಾಗುವಂತೆ ಮಾಡಿದ್ದಾರೆ. ಬಿಹಾರ ಸಿಎಂ ನಿತೀಶ್​ ಕುಮಾರ್​. ಜಂಪಿಂಗ್ ಸ್ಟಾರ್ ಅಂತಾನೇ ಗುರುತಿಸಿಕೊಂಡವರು. ಆರು ಕೊಟ್ರೆ ಅತ್ತೆ ಕಡೆ ಮೂರು ಕೊಟ್ರೆ ಸೊಸೆ ಕಡೆ ಅಂತೆಲ್ಲ ತರಹೇವಾರಿ ಮಾತುಗಳನ್ನು ನಿತೀಶ್​ ಬಗ್ಗೆ ಮಾತಾಡ್ತಾರೆ. ಇಂತ ನಿತೀಶ್​ ಎನ್​ಡಿಎ ಭಾಗವಾಗಿ ಪ್ರಧಾನಿ ಮೋದಿಗೆ ಬೇಷರತ್ ಬೆಂಬಲ ಕೊಟ್ಟಿದ್ದಲ್ಲದೆ ಅವರ ಗುಣಗಾನ ಮಾಡಿ ಎಲ್ಲರನ್ನೂ ಅಚ್ಚರಿಯನ್ನುಂಟು ಮಾಡಿದ್ದಾರೆ. ಸಭೆಯಲ್ಲಿ ಮಾತನಾಡಲು ಹೋಗುವ ಮೊದಲು ಖುದ್ದು ಪ್ರಧಾನಿ ಮೋದಿಯೇ ಎದ್ದು ನಿತೀಶ್​ಗೆ ಜಾಗ ಮಾಡಿಕೊಟ್ಟ ವಿಶೇಷ ಪ್ರಸಂಗ ನಡೆಯಿತು.

ಬಳಿಕ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ನಿತೀಶ್​, ಮೋದಿಯವರೇ ನೀವು ಪ್ರಮಾಣ ವಚನ ಸ್ವೀಕರಿಸಿದಾಗಲೆಲ್ಲಾ ನಾವು ನಿಮ್ಮೊಂದಿಗಿರುತ್ತೇವೆ. ನಿಮ್ಮ ನಾಯಕತ್ವದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಕಳೆದ 10 ವರ್ಷಗಳಿಂದ ಮೋದಿ ಪ್ರಧಾನಿ ಆಗಿದ್ದರು, ಮತ್ತೆ ಪ್ರಧಾನಿ ಆಗ್ತಿದ್ದಾರೆ. ಮೋದಿಯವರ ಮುಂದಿನ ಜರ್ನಿಯಲ್ಲಿ ಸಂಪೂರ್ಣ ಜೊತೆಗಿರುತ್ತೇವೆ ಅಂತ ಮೋದಿಯಲ್ಲಿ ವಿಶ್ವಾಸ ಮೂಡಿಸಿದ್ದಾರೆ. ಎಲ್ಲೆಲ್ಲಿ ಕೆಲಸಗಳು ಬಾಕಿ ಉಳಿದಿದ್ದವೋ ಆ ಎಲ್ಲಾ ಕೆಲಸಗಳನ್ನು ಈಗ ಪೂರ್ಣಗೊಳಿಸಲಿದ್ದಾರೆ. 3ನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: VIDEO: NDA ನಾಯಕನಾಗಿ ನರೇಂದ್ರ ಮೋದಿ ಆಯ್ಕೆ; ಹೆಚ್‌.ಡಿ ಕುಮಾರಸ್ವಾಮಿ ಅನುಮೋದನೆ

ನರೇಂದ್ರ ಮೋದಿಯವರಿಗೆ ಭಾರತದ ಪ್ರಧಾನಮಂತ್ರಿಯಾಗಲು ನನ್ನ ಬೆಂಬಲವಿದೆ. 10 ವರ್ಷಗಳಿಂದ ಮೋದಿ ಪ್ರಧಾನಿಯಾಗಿದ್ದರು. ಈಗ ಮತ್ತೆ ಪ್ರಧಾನಿಯಾಗಲಿದ್ದಾರೆ. ಮೋದಿ ಇಡೀ ದೇಶದ ಸೇವೆ ಮಾಡಿದ್ದಾರೆ. ಎಲ್ಲೆಲ್ಲಿ ಕೆಲಸಗಳು ಬಾಕಿ ಉಳಿದಿವೆಯೋ ಆ ಎಲ್ಲಾ ಕೆಲಸಗಳನ್ನು ಈಗ ಪೂರ್ಣಗೊಳಿಸಲಿದ್ದಾರೆ. ಮೋದಿಯವರ ಎಲ್ಲಾ ಕೆಲಸದಲ್ಲಿ ನಾವು ಅವರ ಪರವಾಗಿ ನಿಲ್ಲಲಿದ್ದೇವೆ.

ನಿತೀಶ್​ ಕುಮಾರ್, ಬಿಹಾರ ಸಿಎಂ

ಮೋದಿಯ ಗುಣಗಾನ ಮಾತ್ರವಲ್ಲದೆ ಇಂಡಿ ಮೈತ್ರಿ ಕೂಟಕ್ಕೆ ನಿತೀಶ್ ಕುಮಾರ್ ಟಾಂಗ್ ಕೊಟ್ಟರು. ಈ ಬಾರಿ ಯಾರ್ಯಾರು ಅಲ್ಲಲ್ಲಿ ಗೆದ್ದಿದ್ದಾರೋ ಮುಂದಿನ ಬಾರಿ ಎಲ್ಲರೂ ಸೋಲುತ್ತಾರೆ. ಈ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ರು. ಈ ವೇಳೆ ಮೋದಿ ಮನಸ್ಸು ಬಿಚ್ಚಿ ನಗಾಡಿದ್ರು.

ನಮಗನಿಸುತ್ತದೆ ಮುಂದಿನ ಬಾರಿ ನೀವು ಗೆದ್ದಾಗ ಈಗ ಯಾರ್ಯಾರು ಅಲ್ಲಲ್ಲಿ ಗೆದ್ದವರೋ ಅವರು ಸೋಲುತ್ತಾರೆ ಎನ್ನುವ ಭರವಸೆ ನನಗಿದೆ. ಇವರೆಲ್ಲ ಏನಾದ್ರೂ ಕೆಲಸ ಮಾಡಿದ್ದಾರಾ? ಅವರು ಇದುವರೆಗೆ ಯಾವುದೇ ಕೆಲಸ ಮಾಡಿಲ್ಲ. ದೇಶಕ್ಕಾಗಿ ಯಾವ ಸೇವೆಯನ್ನೂ ಮಾಡಿಲ್ಲ. ಆದ್ರೆ ನೀವು ದೇಶಕ್ಕಾಗಿ ಸೇವೆ ಮಾಡಿದ್ದೀರಿ.

ನಿತೀಶ್​ ಕುಮಾರ್, ಬಿಹಾರ ಸಿಎಂ

ಇನ್ನು ನಿತೀಶ್​ ಕುಮಾರ್ ಮೋದಿಗೆ ಬೆಂಬಲ ಘೋಷಿಸಿ ಮಾತು ಮುಗಿಸಿದ ಬಳಿಕ ವಾಪಸ್ ತಮ್ಮ ಸ್ಥಾನಕ್ಕೆ ತೆರಳಿದ್ರು. ಈ ವೇಳೆ ನಿತೀಶ್ ಕುಮಾರ್, ಮೋದಿ ಕಾಲಿಗೆ ನಮಸ್ಕರಿಸಲು ಬಾಗುತ್ತಿದ್ದಂತೆ ಅವರನ್ನು ಕಾಲು ಮುಟ್ಟಿಸಿಕೊಳ್ಳದಂತೆ ಮೋದಿ ತಡೆದ್ರು. ಒಟ್ಟಾರೆ ಇಂದು ದೆಹಲಿಯಲ್ಲಿ ನಡೆದ ಎನ್‍ಡಿಎ ಒಕ್ಕೂಟ ಸಂಸದರ ಸಭೆಯಲ್ಲಿ ಎಲ್ಲಾ ನಾಯಕರು ಮೋದಿ ಹೆಸರನ್ನೇ ಪ್ರಧಾನಿ ಸ್ಥಾನಕ್ಕೆ ಸೂಚಿಸಿದ್ರು. ಈ ವೇಳೆ ನಿತೀಶ್​ ಕುಮಾರ್ ಮೋದಿ ಗುಣಗಾನ ಮಾಡಿದ ಪರಿ ಮಾತ್ರ ಎಲ್ಲರನ್ನು ಆಶ್ಚರ್ಯಕ್ಕೀಡು ಮಾಡುವಂತೆ ಮಾಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಕಾಲಿಗೆ ನಮಸ್ಕರಿಸಲು ಹೋದ ನಿತೀಶ್ ಕುಮಾರ್; ಎಲ್ಲರಿಗೂ ಶಾಕ್‌ ಕೊಟ್ಟ ಲೀಡರ್ಸ್‌; ಆಗಿದ್ದೇನು?

https://newsfirstlive.com/wp-content/uploads/2024/06/mitish-kumar.jpg

Load More