newsfirstkannada.com

ಬಿಹಾರ ಸಿಎಂ ಸ್ಥಾನಕ್ಕೆ ಇಂದು ನಿತೀಶ್ ಕುಮಾರ್ ರಾಜೀನಾಮೆ? ಯಾರಾಗ್ತಾರೆ ಕಿಂಗ್‌ಮೇಕರ್‌? ಯಾರಿಗೆ ಎಷ್ಟು ಬಲ?

Share :

Published January 27, 2024 at 12:25pm

Update January 27, 2024 at 1:34pm

  10 ವರ್ಷದಲ್ಲಿ ನಾಲ್ಕು ಭಾರಿ ಮೈತ್ರಿ ಬದಲಾಯಿಸಿದ ನಿತೀಶ್ ಕುಮಾರ್

  ಜೆಡಿಯು ಶಾಸಕರ ಆಪರೇಷನ್‌ಗೆ ಗಾಳ ಹಾಕಿದ ಆರ್‌ಜೆಡಿ ನಾಯಕರು

  122 ಮ್ಯಾಜಿಕ್ ನಂಬರ್ ತಲುಪಲು ಬಿಜೆಪಿ, ಜೆಡಿಯು ಮಾಸ್ಟರ್ ಪ್ಲಾನ್

ಪಾಟ್ನಾ: ಬಿಹಾರದಲ್ಲಿ ಅತಂತ್ರ ರಾಜಕೀಯ ಪರಿಸ್ಥಿತಿ ಎದುರಾಗಿದ್ದು, ಯಾವುದೇ ಕ್ಷಣದಲ್ಲೂ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ಆರ್‌ಜೆಡಿ ಜೊತೆ ದೋಸ್ತಿ ಮುರಿದುಕೊಂಡಿರುವ ಜೆಡಿಯು ಬಿಜೆಪಿ ಜೊತೆ ಹಳೇ ಮೈತ್ರಿ ಸರ್ಕಾರ ರಚಿಸುವ ಸುಳಿವು ನೀಡಿದೆ. ಆದರೆ ಸಿಎಂ ನಿತೀಶ್ ಕುಮಾರ್‌ಗೆ ಸೆಡ್ಡು ಹೊಡೆಯಲು ಆರ್‌ಜೆಡಿ ನಾಯಕರು ಜೆಡಿಯು ಶಾಸಕರಿಗೆ ಗಾಳ ಹಾಕಿದ್ದಾರೆ.

ಆಯಾ ರಾಮ್ ಗಯಾ ರಾಮ್ ಮಾತಿನಂತೆ ಕಳೆದ 10 ವರ್ಷದಲ್ಲಿ ಸಿಎಂ ನಿತೀಶ್ ಕುಮಾರ್ ಅವರು ನಾಲ್ಕು ಭಾರಿ ಮೈತ್ರಿಕೂಟ ಬದಲಾಯಿಸಿದ್ದಾರೆ. ಈಗ ಮತ್ತೊಮ್ಮೆ ಮೈತ್ರಿಕೂಟದ ಬದಲಾವಣೆಗೆ ಸಿದ್ದರಾಗಿದ್ದಾರೆ. ಇಂದು ನಿತೀಶ್ ಕುಮಾರ್ ಬಿಹಾರ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದರೆ ನಾಳೆ ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸಿಎಂ ಆಗಿ ಪ್ರಮಾಣವಚನ‌ ಸ್ವೀಕರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಬಿಹಾರದಲ್ಲಿ ಪತನವಾಗುತ್ತಾ ನಿತೀಶ್ ಕುಮಾರ್‌ ಸರ್ಕಾರ? ಶಾಸಕರ ಆಪರೇಷನ್ ಶುರು!

ಸಿಎಂ ನಿತೀಶ್ ಕುಮಾರ್ ದಿಢೀರ್‌ ರಾಜಕೀಯ ನಿಲುವಿನ ಹಿನ್ನೆಲೆಯಲ್ಲಿ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಇಂದು ಪಾಟ್ನಾದಲ್ಲಿ RJD, ಬಿಜೆಪಿ ತನ್ನ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಈ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತಿದೆ.

ಮತ್ತೊಂದೆಡೆ ಜೆಡಿಯು ಬೆಂಬಲ ಇಲ್ಲದೇ ಸರ್ಕಾರ ರಚಿಸಲು ಲಾಲೂ ಪ್ರಸಾದ್ ಯಾದವ್ ನೇತೃತ್ವದ RJD ಕೂಡ ಮೆಗಾ ಪ್ಲ್ಯಾನ್ ಮಾಡಿದೆ. ಇದಕ್ಕಾಗಿ ಜೆಡಿಯು ಪಕ್ಷದ 16 ಶಾಸಕರನ್ನು ತಮ್ಮತ್ತ ಸೆಳೆಯಲು ಯತ್ನಿಸಲಾಗುತ್ತಿದೆ. ಆದರೆ RJD, ಕಾಂಗ್ರೆಸ್‌ ನೇತೃತ್ವದ ಘಟಬಂಧನ್‌ ಶೇಕ್ ಆಗುವ ಭೀತಿಯಲ್ಲಿದೆ. ಕಾಂಗ್ರೆಸ್ ಪಕ್ಷದ 8 ಶಾಸಕರು ನಿತೀಶ್ ಕುಮಾರ್‌ಗೆ ಬೆಂಬಲ ನೀಡುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ಬಿಹಾರದಲ್ಲಿ ನಡೆದ 2020ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಒಂದು ಪಕ್ಷಕ್ಕೂ 122 ಮ್ಯಾಜಿಕ್ ನಂಬರ್ ಸಿಗಲಿಲ್ಲ. ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ನಂತರ ಆರ್‌ಜೆಡಿ, ಕಾಂಗ್ರೆಸ್‌ ಜೊತೆ ಕೈ ಜೋಡಿಸಿದ್ದರು. ಇದೀಗ ಮತ್ತೆ ಆರ್‌ಜೆಡಿ, ಕಾಂಗ್ರೆಸ್ ದೋಸ್ತಿ ಬಿಟ್ಟು ಬಿಜೆಪಿ ಜೊತೆ ಸರ್ಕಾರ ರಚಿಸಲು ಮುಂದಾಗಿದ್ದಾರೆ.

ಬಿಹಾರ ವಿಧಾನಸಭೆ ಬಲ (243)

ಬಿಜೆಪಿ- 78
ರಾಷ್ಟ್ರೀಯ ಜನತಾ ದಳ- 79
ಜೆಡಿಯು- 43
ಕಾಂಗ್ರೆಸ್- 19
ಎಡಪಕ್ಷ- 16
ಹಿಂದೂಸ್ತಾನಿ ಅವಾಮ್ ಮೋರ್ಚಾ -04
ಇತರೆ- 06

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಹಾರ ಸಿಎಂ ಸ್ಥಾನಕ್ಕೆ ಇಂದು ನಿತೀಶ್ ಕುಮಾರ್ ರಾಜೀನಾಮೆ? ಯಾರಾಗ್ತಾರೆ ಕಿಂಗ್‌ಮೇಕರ್‌? ಯಾರಿಗೆ ಎಷ್ಟು ಬಲ?

https://newsfirstlive.com/wp-content/uploads/2023/11/Cm-nitish-Kumar.jpg

Load More