Advertisment

4,4,4,4,4,6; ನಿತೀಶ್​ ಮನಮೋಹಕ ಬ್ಯಾಟಿಂಗ್​.. ಫಸ್ಟ್​ ಫಿಫ್ಟಿ ಬಾರಿಸಿ ಪುಷ್ಪ ಸ್ಟೈಲ್ ಮಾಡಿದ ಯುವ ಬ್ಯಾಟ್ಸ್​ಮನ್

author-image
Bheemappa
Updated On
ಅಪ್ಪನ ತ್ಯಾಗ ಒಂದೇ ಅಲ್ಲ.. ನಿತೀಶ್ ರೆಡ್ಡಿ ಯಶಸ್ಸಿನ ಹಿಂದೆ ಮತ್ತೊಬ್ಬ ಗಾಡ್​ ಫಾದರ್..!
Advertisment
  • 2ನೇ ದಿನದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡಿರವ ಭಾರತ ತಂಡ
  • ಓಪನರ್ ಆಗಿ ವಿಫಲ ಬ್ಯಾಟಿಂಗ್ ಮಾಡಿದ್ದ ಕ್ಯಾಪ್ಟನ್ ರೋಹಿತ್
  • ನಿತೀಶ್​ ಕುಮಾರ್​ಗೆ ಉತ್ತಮ ಸಾಥ್ ಕೊಟ್ಟಿರುವ ವಾಷಿಂಗ್ಟನ್​

ಆಸ್ಟ್ರೇಲಿಯಾ ಹಾಗೂ ಟೀಮ್ ಇಂಡಿಯಾ ನಡುವಿನ 4ನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಯುವ ಆಟಗಾರ ನಿತೀಶ್ ಕುಮಾರ್ ಅಮೋಘವಾದ ಅರ್ಧ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆ ಆಗಿದ್ದಾರೆ. ಹಾಫ್​ ಸೆಂಚುರಿ ಸಿಡಿಸುತ್ತಿದ್ದಂತೆ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮಾಡುವಂತೆ ನಿತೀಶ್ ಕುಮಾರ್ ಬ್ಯಾಟ್​ನಿಂದ ಮ್ಯಾನರಿಸಂ ಮಾಡಿ ಗಮನ ಸೆಳೆದಿದ್ದಾರೆ.

Advertisment

ಮೆಲ್ಬೋರ್ನ್​​ನ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೂರನೇ ದಿನದಾಟ ನಡೆಯುತ್ತಿದ್ದು ನಿತೀಶ್ ಕುಮಾರ್ ತಾಳ್ಮೆಯಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ. ರಿಷಬ್ ಪಂತ್ ಹಾಗೂ ಜಡೇಜಾ ಔಟ್ ಆದ ಬಳಿಕ ಕ್ರೀಸ್ ಕಚ್ಚಿಕೊಂಡಿರುವ ನಿತೀಶ್ ಕುಮಾರ್, ಆಸ್ಟ್ರೇಲಿಯಾ ಬೌಲರ್​ಗಳನ್ನು ದಂಡಿಸುತ್ತಿದ್ದಾರೆ. ಭಾರತ ತಂಡವನ್ನು 300 ರನ್​ಗಳ ಗಡಿಯನ್ನು ದಾಟಿಸಿರುವ ರೆಡ್ಡಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.

publive-image

ತಂಡದಲ್ಲಿ 8ನೇ ಬ್ಯಾಟ್ಸ್​ಮನ್​ ಆಗಿ ಕ್ರೀಸ್​​ಗೆ ಆಗಮಿಸಿರುವ ನಿತೀಶ್ ಕುಮಾರ್, ಆಸಿಸ್​ ಬೌಲರ್​ಗಳಿಗೆ ಬಿಸಿ ಮುಟ್ಟಿಸಿದ್ದಾರೆ. 81 ಬೌಲ್​​ಗಳನ್ನು ಎದುರಿಸಿರುವ ಯುವ ಆಟಗಾರ ಹಾಫ್​ಸೆಂಚುರಿಯನ್ನು ಪೈರೈಸಿ ಸಂಭ್ರಮಿಸಿದರು. ಸದ್ಯ ನಿತೀಶ್ ಕುಮಾರ್ 110 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಮೇತ 71 ರನ್​ಗಳಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನು ನಿತೀಶ್ ಕುಮಾರ್​ಗೆ ವಾಷಿಂಗ್ಟನ್ ಸುಂದರ್ ಉತ್ತಮವಾದ ಸಾಥ್ ಕೊಟ್ಟಿದ್ದು 84 ಎಸೆತಗಳಲ್ಲಿ 33 ರನ್​ಗಳನ್ನು ಗಳಿಸಿ ಕ್ರೀಸ್​ನಲ್ಲಿದ್ದಾರೆ. ಸದ್ಯ ಭಾರತ 7 ವಿಕೆಟ್​ಗೆ 307 ರನ್​ ಗಳಿಸಿದೆ.

ಇದಕ್ಕೂ ಮೊದಲು ರಿಷಬ್ ಪಂತ್ ಮೇಲೆ ಭರವಸೆ ಇಟ್ಟುಕೊಳ್ಳಲಾಗಿತ್ತು. ಆದರೆ ಅದನ್ನು ನಿರಾಸೆ ಮಾಡಿರುವ ಪಂತ್ 37 ಎಸೆತಗಳಲ್ಲಿ 3 ಬೌಂಡರಿಗಳಿಂದ ಕೇವಲ 28 ರನ್​ಗೆ ಸ್ಕಾಟ್ ಬೋಲ್ಯಾಂಡ್​ ಓವರ್​ನಲ್ಲಿ ನಾಥನ್ ಲಿಯಾನ್​ಗೆ ಕ್ಯಾಚ್ ಕೊಟ್ಟು ಹೊರ ನಡೆದರು. ಜಡೇಜಾ ಕೂಡ 3 ಬೌಂಡರಿಯಿಂದ 17 ರನ್​ ಗಳಿಸಿ ಆಡುವಾಗ ನಾಥನ್ ಲಿಯಾನ್​ ಓವರ್​​ನಲ್ಲಿ ಎಲ್​​ಬಿಡಬ್ಲುಗೆ ಬಲಿಯಾದರು. ಇದರಿಂದ ಭಾರತ ತಂಡಕ್ಕೆ ಪೆಟ್ಟು ಬಿದ್ದಂತೆ ಆಯಿತು.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment