ನಿತೀಶ್​ ಕುಮಾರ್​ 5 ಕೋಟಿ ರೂಪಾಯಿ ವಂಚನೆ ಆರೋಪ.. ಕ್ರಿಕೆಟರ್​​ ಅಸಲಿಗೆ ಮಾಡಿದ್ದೇನು?

author-image
Bheemappa
Updated On
ನಿತೀಶ್​ ಕುಮಾರ್​ 5 ಕೋಟಿ ರೂಪಾಯಿ ವಂಚನೆ ಆರೋಪ.. ಕ್ರಿಕೆಟರ್​​ ಅಸಲಿಗೆ ಮಾಡಿದ್ದೇನು?
Advertisment
  • ಇಂಜುರಿ ಒಳಗಾಗಿರೋ ರೆಡ್ಡಿಯ ಗಾಯದ ಮೇಲೆ ಮತ್ತೊಂದು ಬರೆ
  • ನಿತೀಶ್​ ಕುಮಾರ್ ರೆಡ್ಡಿ ವಿರುದ್ಧ ಆರೋಪಿಸಿದ ಕಂಪನಿ ಯಾವುದು?
  • ಏಕಪಕ್ಷೀಯ ನಿರ್ಧಾರ ಹಾಗೂ ಒಪ್ಪಂದವನ್ನ ಉಲ್ಲಂಘನೆ ಮಾಡಿದ್ರಾ?

ಇಂಜುರಿಗೆ ತುತ್ತಾಗಿ ಇಂಗ್ಲೆಂಡ್​ ಪ್ರವಾಸದಿಂದ ಅರ್ಧಕ್ಕೆ ಪ್ಯಾಕ್​ಅಪ್​ ಮಾಡಿಕೊಂಡು ಭಾರತಕ್ಕೆ ವಾಪಾಸ್ಸಾಗ್ತಿರುವ ನಿತೀಶ್​ ರೆಡ್ಡಿಯ ಗಾಯದ ಮೇಲೆ ಬರೆ ಬಿದ್ದಿದೆ. ಯುವ ಆಲ್​​ರೌಂಡರ್​ ಮೇಲೆ ಬಹುದೊಡ್ಡ ಆರೋಪ ಕೇಳಿ ಬಂದಿದ್ದು, ನ್ಯಾಯ ಕೇಳಿ ಕಂಪನಿಯೊಂದು ಡೆಲ್ಲಿ ಹೈಕೋರ್ಟ್​​ ಮೆಟ್ಟಿಲೇರಿದೆ. ಇಂದು ಈ 5 ಕೋಟಿ ವಂಚನೆ ಪ್ರಕರಣದ ವಿಚಾರಣೆಯೂ ನಡೆಯಲಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಿಂಚು ಹರಿಸಿದ್ದ ನಿತೀಶ್​ ರೆಡ್ಡಿ, ಆಂಗ್ಲರ ನಾಡು ಇಂಗ್ಲೆಂಡ್​ನಲ್ಲೂ ಘರ್ಜಿಸೋ ಲೆಕ್ಕಾಚಾರದಲ್ಲಿ ಫ್ಲೈಟ್​ ಹತ್ತಿದ್ರು. ಆದ್ರೆ, ಅದೃಷ್ಟ ಕೈ ಹಿಡಿಯಲಿಲ್ಲ. ಫಾರ್ಮ್​ ಒಂದು ಕಡೆ ಕೈ ಕೊಡ್ತು. ಇನ್ನೊಂದು ಕಡೆ ಇಂಜುರಿ ಸರಣಿಯಿಂದಲೇ ಹೊರ ಬೀಳುವಂತೆ ಮಾಡಿದೆ. ಆ್ಯಂಕಲ್​ ಇಂಜುರಿ ತುತ್ತಾದ ರೆಡ್ಡಿ, ಪ್ರವಾಸದ ಮದ್ಯೆಯೇ ಪ್ಯಾಕ್​​ ಅಪ್​​ ಮಾಡಿ ತವರಿಗೆ ವಾಪಾಸ್ಸಾಗ್ತಿದ್ದಾರೆ.

publive-image

ವಿವಾದದ ಸುಳಿಯಲ್ಲಿ ಸಿಲುಕಿದ ಆಲ್​​ರೌಂಡರ್​.!

ಟೀಮ್​ ಇಂಡಿಯಾ ಆಲ್​​​ರೌಂಡರ್​ ನಿತೀಶ್​ ರೆಡ್ಡಿ ಟೈಮೇ ಸರಿ ಇಲ್ಲ ಅನ್ಸುತ್ತೆ. ಇಂಜುರಿ ನೋವಲ್ಲಿ ನರಳಾಡ್ತಿರೋ ನಿತೀಶ್​​ ರೆಡ್ಡಿಯ ಗಾಯದ ಮೇಲೆ ಇದೀಗ ಮತ್ತೊಂದು ಬರೆ ಬಿದ್ದಿದೆ. ಹೊಸ ವಿವಾದದಲ್ಲಿ ನಿತೀಶ್​ ರೆಡ್ಡಿ ಸಿಲುಕಿದ್ದಾರೆ. ಆಂಧ್ರ ಪ್ರದೇಶ ಆಲ್​​ರೌಂಡರ್​​ ಮೇಲೆ ವಂಚನೆಯ ಬಹುದೊಡ್ಡ ಆರೋಪ ಕೇಳಿ ಬಂದಿದೆ.

ನಿತೀಶ್​ ರೆಡ್ಡಿ ಮೇಲೆ 5 ಕೋಟಿ ದೋಖಾ ಆರೋಪ.!

ಟೀಮ್​​ ಇಂಡಿಯಾದ ಯುವ ಆಲ್​​ರೌಂಡರ್​​​ ಮೇಲೆ ಬರೋಬ್ಬರಿ 5 ಕೋಟಿ ವಂಚನೆಯ ಆರೋಪ ಕೇಳಿ ಬಂದಿದೆ. ನಿತೀಶ್​ ರೆಡ್ಡಿಯನ್ನ ಮ್ಯಾನೇಜ್​ ಮಾಡ್ತಾ ಇದ್ದ ಮಾಜಿ ಕಂಪನಿ ಈ ಬಹುದೊಡ್ಡ ಆರೋಪವನ್ನ ಮಾಡಿದೆ. ಇಷ್ಟೇ ಅಲ್ಲ, ನ್ಯಾಯವನ್ನ ಕೇಳಿಕೊಂಡು ಹೈಕೋರ್ಟ್​ ಮೆಟ್ಟಿಲೇರಿದೆ.

ರೆಡ್ಡಿ ಮೇಲಿರೋ ಆರೋಪ ಏನು.? ಏನಿದು ಪ್ರಕರಣ.?

2021ರಿಂದ ನಿತೀಶ್​ ರೆಡ್ಡಿ ಸ್ಕೈರ್​​ ದ ಒನ್​ ಅನ್ನೋ ಮ್ಯಾನೇಜ್​ಮೆಂಟ್​ ಕಂಪನಿಯಯೊಂದಿಗೆ ಟೈ ಅಪ್​ ಆಗಿದ್ರು, ಕಳೆದ 4 ವರ್ಷಗಳಿಂದ ಈ ಕಂಪನಿ ನಿತೀಶ್​ ರೆಡ್ಡಿಯನ್ನ ಮ್ಯಾನೇಜ್​​ ಮಾಡ್ತಾ ಇತ್ತು. ಕರ್ಮಷಿಯಲ್​ಗಳು, ಬ್ರ್ಯಾಂಡ್​ ಎಂಡ್ರೋಸ್​ಮೆಂಟ್​ಗಳನ್ನ ಇದೇ ಕಂಪನಿ ನೋಡಿಕೊಳ್ತಾ ಇತ್ತು. ಆದ್ರೆ, ಕಳೆದ ವರ್ಷಾಂತ್ಯದಲ್ಲಿ ಭಿನ್ನ ನಿಲುವು ತಳೆದ ನಿತೀಶ್​ ರೆಡ್ಡಿ, ಇದಕ್ಕಿದ್ದಂತೆ ಒಪ್ಪಂದ ರದ್ದು ಮಾಡಿ ಬೇರೋಬ್ಬ ಮ್ಯಾನೇಜರ್ ನೇಮಕ ಮಾಡಿಕೊಂಡಿದ್ದಾರೆ. ಇದೇ ನೋಡಿ ವಿವಾದಕ್ಕೆ ಕಾರಣವಾಗಿರೋದು.

ಕಳೆದ ಡಿಸೆಂಬರ್​-ಜನವರಿಯಲ್ಲಿ ಟೀಮ್​ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿತ್ತು. ಮೊದಲ ಬಾರಿ ಟೆಸ್ಟ್​ ತಂಡಕ್ಕೆ ಆಯ್ಕೆಯಾಗಿದ್ದ ನಿತೀಶ್​ ರೆಡ್ಡಿ, ಮೆಲ್ಬರ್ನ್​ನಲ್ಲಿ ಶತಕ ಸಿಡಿಸಿ ಸೆನ್ಸೇಷನ್​ ಸೃಷ್ಟಿಸಿದ್ರು. ಅಮೋಘ ಶತಕ ಸಿಡಿಸಿದ ಬೆನ್ನಲ್ಲೇ ನಿತೀಶ್​ ರೆಡ್ಡಿಯ ಖ್ಯಾತಿಯೂ ಹೆಚ್ಚಾಯ್ತು. ಆ ಬಳಿಕ ಏಕಾಏಕಿ ಸ್ಕೈರ್​​ ದ ಒನ್ ಕಂಪನಿ ಬಿಟ್ಟು, ಟೀಮ್​ ಇಂಡಿಯಾ ಮತ್ತೊಬ್ಬ ಆಟಗಾರರನ ಮ್ಯಾನೇಜರ್​​ ಜೊತೆ ನಿತೀಶ್​ ರೆಡ್ಡಿ ಒಪ್ಪಂದ ಮಾಡಿಕೊಂಡರು. ಈ ಏಕಪಕ್ಷೀಯ ನಿರ್ಧಾರ ಹಾಗೂ ಒಪ್ಪಂದವನ್ನ ಉಲ್ಲಂಘಿಸಿದ್ದನ್ನ ಸ್ಕೈರ್​​ ದ ಒನ್ ಕಂಪನಿ ಪ್ರಶ್ನಿಸಿದೆ.

ಇದನ್ನೂ ಓದಿ:ಮಹಿಳೆಯರಿಗಾಗಿ ಸರ್ಕಾರದ ಯೋಜನೆ.. ಆದ್ರೆ ಕೋಟಿ ಕೋಟಿ ಹಣ ನುಂಗಿದ ರಾಜ್ಯದ ಪುರುಷರು!

publive-image

ಇಂದು ದೆಹಲಿ ಹೈಕೋರ್ಟ್​ನಲ್ಲಿ ವಿಚಾರಣೆ ಸಾಧ್ಯತೆ.!

ಏಕಪಕ್ಷೀಯವಾಗಿ ಪಾಲುದಾರಿಕೆಯನ್ನು ಕ್ಲೋಸ್​ ಮಾಡಿರೋದು ಒಂದು ಆರೋಪವಾದ್ರೆ, ಹಳೆಯ ಅಮೌಂಟ್​​ ಸೆಟಲ್​ ಆಗಿಲ್ಲ ಅನ್ನೋದು ಮತ್ತೊಂದು ಆರೋಪವಾಗಿದೆ. ನಿತೀಶ್ ರೆಡ್ಡಿ ಕಂಪನಿಯಿಂದ ಪಡೆದಿದ್ದಾರೆ ಎನ್ನಲಾಗಿರುವ 5 ಕೋಟಿ ರೂಪಾಯಿ ಪಾವತಿಸಲು ರಾಕರಿಸಿದ್ದಾರೆ. ಕಂಪನಿಗೆ ನಿತೀಶ್​ ರೆಡ್ಡಿ 5 ಕೋಟಿ ಹಣವನ್ನ ಪಾವತಿಸಬೇಕಿದೆ ಎಂದು ಆರೋಪಿಸಿ ಕಂಪನಿ ದೆಹಲಿ ಹೈಕೋರ್ಟ್​​ ಮೆಟ್ಟಿಲೇರಿದೆ. ಇಂದು ಈ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಸ್ಕೈರ್​​ ದ ಒನ್​ ಕಂಪನಿಯ ಆರೋಪ ನಿಜಾನೋ.? ಸುಳ್ಳೋ.? ಅನ್ನೋದು ನ್ಯಾಯಾಲಯ ತೀರ್ಮಾನಿಸಲಿದೆ. ಆದ್ರೆ, ಈ ಆರೋಪ ನಿತೀಶ್​ ರೆಡ್ಡಿಯ ಗಾಯದ ಮೇಲೆ ಉಪ್ಪು ಸವರಿದಂತಾಗಿರೋದಂತೂ ಸುಳ್ಳಲ್ಲ. ಇಂಗ್ಲೆಂಡ್​​ನಿಂದ ವಾಪಾಸ್ಸಾದ ಬಳಿಕ ಇಂಜುರಿ ಚೇತರಿಸಿಕೊಂಡು ಫಿಟ್​ ಆಗೋದ್ರ ಜೊತೆಗೆ ಕೋರ್ಟ್​ಗೆ ಅಲೆದಾಡಿ ಕೇಸ್​​ ಕ್ಲೀಯರ್​ ಮಾಡಿಕೊಳ್ಳೋ ಸವಾಲೂ ಇದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment