/newsfirstlive-kannada/media/post_attachments/wp-content/uploads/2025/01/NITISH_KUMAR-5.jpg)
ನಿತೀಶ್ ಕುಮಾರ್ ರೆಡ್ಡಿ ಟೀಮ್ ಇಂಡಿಯಾದ ನಯಾ ಯಂಗ್ ಸ್ಟಾರ್. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನದಿಂದ ಹೊಸ ಹವಾ ಎಬ್ಬಿಸಿರುವ ನಿತೀಶ್ ಕುಮಾರ್ ಮೈಮೇಲಿರುವ ಟ್ಯಾಟೂಗಳಿಂದ ಕೂಡ ಗಮನ ಸೆಳೆದಿದ್ದಾರೆ. ಆ ಟ್ಯಾಟೂಗಳು ನಿತೀಶ್ ಕುಮಾರ್ ವಿಶೇಷ ಗುಣವನ್ನೇ ಪರಿಚಯಿಸಿವೆ.
ಟೀಮ್ ಇಂಡಿಯನ್ ಕ್ರಿಕೆಟರ್ಗಳಿಗೂ ಟ್ಯಾಟೂಗಳಿಗೂ ಒಂದು ರೀತಿ ವಿಶೇಷ ನಂಟಿದೆ. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಹೀಗೆ ಟ್ಯಾಟೂ ಪ್ರಿಯರ ದಂಡೇ ಟೀಮ್ ಇಂಡಿಯಾದಲ್ಲಿದೆ. ಟ್ಯಾಟೂ ಕ್ರೇಜ್ ಹೊಂದಿರುವ ಕ್ರಿಕೆಟಿಗರು, ತಮ್ಮ ಕೈಗಳ ಮೇಲೆ, ದೇಹದ ಮೇಲೆ ವಿಶೇಷವಾದ ಹಚ್ಚೆ ಹಾಕಿಸಿಕೊಂಡಿದ್ದಿದೆ. ಈ ಪೈಕಿ ಟೀಮ್ ಇಂಡಿಯಾದ ನಯಾ ಸೆನ್ಸೇಷನ್ ನಿತೀಶ್ ಕುಮಾರ್ ರೆಡ್ಡಿ ಕೂಡ ಒಬ್ಬರು.
ನಿತೀಶ್ ರೆಡ್ಡಿಯ ಬಲಗೈ ಮೇಲಿದೆ ಸ್ಪೆಷಲ್ ಟ್ಯಾಟೊ..!
ವಿರಾಟ್ ಕೊಹ್ಲಿಯನ್ನೇ ಆರಾಧ್ಯ ದೈವವಾಗಿ ಸ್ವೀಕರಿಸಿರುವ ನಿತೀಶ್ ಕುಮಾರ್ ರೆಡ್ಡಿ, ಫಿಟ್ನೆಸ್, ಡಯಟ್ ವಿಚಾರದಲ್ಲಿ ಮಾತ್ರವೇ ಅಲ್ಲ. ಟ್ಯಾಟೂ ವಿಚಾರದಲ್ಲೂ ವಿರಾಟ್ ಕೊಹ್ಲಿಯನ್ನೇ ಹಿಂಬಾಲಿಸಿದ್ದಾರೆ. ಕೊಹ್ಲಿಯಂತೆ ನಿತೀಶ್ ಕುಮಾರ್, ಬಲಗೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಿತೀಶ್ ಕುಮಾರ್ ಬಲಗೈ ತೋಳಿನ ಮೇಲ್ಭಾಗದಲ್ಲಿ ಘರ್ಜಿಸ್ತಿರುವ ಹುಲಿ ಇದೆ.
ಕೆಳ ಭಾಗದಲ್ಲಿ ಯೋಧನ ಚಿತ್ರವಿದೆ. ಬರೋಬ್ಬರಿ 13 ಗಂಟೆಗಳನ್ನ ವ್ಯಯಿಸಿ ನಿತೀಶ್ ರೆಡ್ಡಿ ಈ ಟ್ಯಾಟೋವನ್ನ ಹಾಕಿಸಿಕೊಂಡಿದ್ದಾರಂತೆ. ಬಲಗೈ ಮೇಲಿರುವ ವಿಶೇಷವಾದ ಹಚ್ಚೆಯ ಬಗ್ಗೆ ಖುದ್ದು ನಿತೀಶ್ ಕುಮಾರ್ ರೆಡ್ಡಿಯೇ ವಿವರಿಸಿದ್ದು ಹಚ್ಚೆ ಪ್ರಾಮುಖ್ಯತೆ, ಪ್ರಭಾವ ಬೀರಿದ ಅಂಶಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ಈ ಟ್ಯಾಟೂ ಯೋಧ, ಹುಲಿಯನ್ನು ಪ್ರತಿನಿಧಿಸುತ್ತದೆ. ಆಟದ ನಡುವೆ ಈ ಹಚ್ಚೆ ನೋಡಿದಾಗಲೆಲ್ಲಾ, ನಾನು ಒಬ್ಬ ಯೋಧ ಎಂದು ಭಾವನೆ ಬರುತ್ತದೆ. ಒಂದು ಹುಲಿ ಕಾಡಿನಲ್ಲಿ ತನ್ನ ಭೂಭಾಗವನ್ನು ಸ್ಥಾಪಿಸಿದ್ರೆ, ಇತರೆ ಯಾವುದೇ ಪ್ರಾಣಿಗಳ ಪ್ರವೇಶಕ್ಕೆ ಅದು ಅನುಮತಿಸುವುದಿಲ್ಲ. ಆ ಹುಲಿಯಂತೆ ಭಾವಿಸಲು ಇಷ್ಟ ಪಡುತ್ತೇನೆ. ಆಟದಲ್ಲಿದ್ದಾಗ ಕಿಂಗ್ನಂತೆ ಫೀಲ್ ಆಗುತ್ತೇನೆ.
ನಿತೀಶ್ ಕುಮಾರ್, ಆಟಗಾರ
ಟ್ಯಾಟೂ ಹಾಕಿಸಿಕೊಂಡಿದ್ದು, ಅದರ ಬಗ್ಗೆ ವಿವರಣೆ ನೀಡಿದ್ದು ಮಾತ್ರವಲ್ಲ. ಈ ಟ್ಯಾಟೂ ನಿತೀಶ್ ರೆಡ್ಡಿಯ ಕರಿಯರ್ನಲ್ಲಿ ಒಳ್ಳೆ ರೋಲ್ ಪ್ಲೇ ಮಾಡಿದೆ. ಬಾರ್ಡರ್-ಗವಾಸ್ಕರ್ ಸರಣಿಯ ಅದ್ಭುತ ಆಟಕ್ಕೂ ಇದೇ ಸ್ಪೂರ್ತಿ.
ಮೆಲ್ಬರ್ನ್ನಲ್ಲಿ ವಾರಿಯರ್ನಂತೆ ಹೋರಾಟ..!
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ನಿತೀಶ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಟೀಮ್ ಇಂಡಿಯಾ ಪರ ಟಾಪ್-2 ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಡೆಬ್ಯೂ ಸರಣಿಯಲ್ಲೇ ಆಮೋಘ ಆಟದಿಂದ ಮೆರೆದಾಡಿದ್ದಾರೆ. ವಾರಿಯರ್ನಂತೆ ಹೋರಾಡುವ ಗುಣ, ಫಿಯರ್ಲೆಸ್ ಆ್ಯಟಿಟ್ಯೂಡ್ ಎಲ್ಲಾ ನಿತೀಶ್ ಆಟದಲ್ಲಿತ್ತು. ಮೆಲ್ಬರ್ನ್ನಲ್ಲಿ 191 ರನ್ಗೆ 6 ವಿಕೆಟ್ ಕಳೆದುಕೊಂಡಾಗ ಸುಂದರ್ ಜೊತೆ ಕಟ್ಟಿದ ಇನ್ನಿಂಗ್ಸ್, 8ನೇ ಕ್ರಮಾಂಕದಲ್ಲಿ ಸಿಡಿಸಿದ ಆ ಸೆಂಚುರಿ ಇದಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಗುಡ್ನ್ಯೂಸ್.. ಹುಟ್ಟುಹಬ್ಬಕ್ಕೆ ಗಿಫ್ಟ್ ಇದು
ಕೊಹ್ಲಿ ಕೈ ಮೇಲೆ ಜಪಾನೀಸ್ ಸಮರಾಯ್ ಟ್ಯಾಟೂ!
ನಿತೀಶ್ ರೆಡ್ಡಿಯ ಐಡಿಯಲ್, ವಿರಾಟ್ ಕೊಹ್ಲಿಗೂ ಟ್ಯಾಟೂ ಕ್ರೇಜ್ ಇದೆ. ವಿವಿಧ ರೀತಿಯ 14 ಟ್ಯಾಟೂ ಹೊಂದಿರುವ ಕೊಹ್ಲಿಯ ಕೈ ಮೇಲೂ ಸೈನಿಕನ ಟ್ಯಾಟೂ ಇದೆ. ಆದ್ರೆ, ಅದು ಜಪಾನೀಸ್ ಸಮರಾಯ್ ಟ್ಯಾಟೂ. ಈ ಸಮರಾಯ್‌ಗಳು ಆಧುನಿಕ ಪೂರ್ವ ಜಪಾನ್‌ನ ಯೋಧರಾಗಿದ್ದು, Justice, Courage, ನಿಷ್ಠೆ, ಶಿಸ್ತಿನ ಪ್ರತೀಕ ಎನ್ನಲಾಗುತ್ತೆ. ಹಾಗಾಗಿ ಈ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿಯನ್ನೇ ಆದರ್ಶವಾಗಿ ತೆಗೆದುಕೊಂಡು ಕರಿಯರ್ ಆರಂಭಿಸಿದ ನಿತೀಶ್ ಕುಮಾರ್ ರೆಡ್ಡಿ, ಡೆಬ್ಯೂ ಟೆಸ್ಟ್ ಸೀರೀಸ್ನಲ್ಲೇ ಆನ್ಫೀಲ್ಡ್ ಆ್ಯಂಡ್ ಆಫ್ ದಿ ಫೀಲ್ಡ್ನಲ್ಲಿ ಕೊಹ್ಲಿಯ ಫಾಲೋವರ್ ಅನ್ನೋದನ್ನು ನಿರೂಪಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ