/newsfirstlive-kannada/media/post_attachments/wp-content/uploads/2024/12/NITISH_KUMAR_PUSHPA.jpg)
ನಿತೀಶ್​ ಕುಮಾರ್​ ರೆಡ್ಡಿ ಮೆಲ್ಬೋರ್ನ್​​ನಲ್ಲಿ ಶತಕ ಸಿಡಿಸಿ ಮಿರಾಕಲ್​ ಸೃಷ್ಟಿಸಿದ್ದಾರೆ. ಇದ್ರ ಬೆನ್ನಲ್ಲೇ ತಂದೆಯ ತ್ಯಾಗದ ಕಥೆ ಕ್ರಿಕೆಟ್​ ಜಗತ್ತಿನಲ್ಲಿ ಸದ್ದು ಮಾಡ್ತಿದೆ. ತಂದೆಯ ತ್ಯಾಗ ಮಾತ್ರವಲ್ಲ.. ಒಬ್ಬ ಗಾಡ್​ ಫಾದರ್​ ಸಹಾಯ ಇಂದು ನಿತೀಶ್​ ರೆಡ್ಡಿಗೆ ಯಶಸ್ಸು ತಂದು ಕೊಟ್ಟಿದೆ.
ಸಕ್ಸಸ್​ ಹಿಂದೆ ‘ಗಾಡ್​​​ ಫಾದರ್​’​..!
21 ವರ್ಷದ ನಿತೀಶ್​​ ಕುಮಾರ್​​ ಎಮ್​ಸಿಎನಲ್ಲಿ ಮ್ಯಾಜಿಕ್​​ ಮಾಡಿದ ಬೆನ್ನಲ್ಲೇ ತಂದೆಯ ತ್ಯಾಗದ ಕಥೆ ಅನಾವರಣಗೊಂಡಿದೆ. ತ್ಯಾಗ, ಅಪಮಾನ, ಕಣ್ಣೀರಿನ ನಡುವೆ ನಿತೀಶ್​ ಕುಮಾರ್​ ಎಂಬ ಭರವಸೆಯ ಆಲ್​​ರೌಂಡರ್​​ ಬೆಳೆದು ಬಂದ ಬಗೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ನಿತೀಶ್​ ಕುಮಾರ್​​ ಬೆಳವಣಿಗೆ ಹಿಂದೆ ತಂದೆಯ ತ್ಯಾಗ ಮಾತ್ರವಲ್ಲ. ಮತ್ತೊಬ್ಬ ಗಾಡ್​​​ ಫಾದರ್​ ಪಾತ್ರ ಇದೆ. ಆ ವ್ಯಕ್ತಿಯ ಹೆಸರೇ MSK ಪ್ರಸಾದ್​.
10 ವರ್ಷದ ಹಿಂದೆಯೇ ಟ್ಯಾಲೆಂಟ್​ ಗುರುತಿಸಿದ್ದ ಪ್ರಸಾದ್​​
ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ, ಮಾಜಿ ಸೆಲೆಕ್ಟರ್​​ MSK ಪ್ರಸಾದ್​ ಈ ನಿತೀಶ್​ ಕುಮಾರ್​​ ಎಂಬ ಆಲ್​​ರೌಂಡರ್​​ ಬೆಳವಣಿಗೆಯ ಹಿಂದಿರೋ ಗಾಡ್​ಫಾದರ್​. ನಿತೀಶ್​ ಕುಮಾರ್​ ಎಂಬ ಟ್ಯಾಲೆಂಟೆಡ್​ ಯಂಗ್​ಸ್ಟರ್​​ ಪ್ರಸಾದ್​ ಕಣ್ಣಿಗೆ ಬೀಳದಿದ್ದಿದ್ರೆ, ​ಭರವಸೆಯ ಆಲ್​​ರೌಂಡರ್​ ಟೀಮ್​ ಇಂಡಿಯಾಗೆ ಸಿಗ್ತಿರಲಿಲ್ವೇನೋ? ನಿತೀಶ್​ ಕುಮಾರ್​ ರೆಡ್ಡಿ ಹೆಸ್ರು ಕಳೆದ ಐಪಿಎಲ್​ನಿಂದ ಕ್ರಿಕೆಟ್​ ಲೋಕದಲ್ಲಿ ಸದ್ದು ಮಾಡ್ತಿದೆ. ಈತನ ಟ್ಯಾಲೆಂಟ್​​ ಅನ್ನ 10 ವರ್ಷದಿಂದ ಹಿಂದೆಯೇ ಗುರುತಿಸಿದ್ದು MSK ಪ್ರಸಾದ್​​​.
/newsfirstlive-kannada/media/post_attachments/wp-content/uploads/2024/12/NITISH_KUMAR_REDDY.jpg)
ಮಗನಿಗಾಗಿ ಕೆಲಸ ಬಿಟ್ಟ ಅಪ್ಪ..!
ನಿತೀಶ್​ ತಂದೆ ಮುತ್ಯಾಲ ರೆಡ್ಡಿ ಮಗನನ್ನು ಕ್ರಿಕೆಟರ್​ ಮಾಡೋ ಕನಸು ಕಂಡಿದ್ರು. ಸರ್ಕಾರಿ ಕೆಲಸದಲ್ಲಿದ್ದ ಮುತ್ಯಾಲ ರೆಡ್ಡಿಯನ್ನ ರಾಜಸ್ಥಾನಕ್ಕೆ ಟ್ರಾನ್ಸ್​​ಫರ್​ ಮಾಡಲಾಗಿತ್ತು. ರಾಜಸ್ಥಾನಕ್ಕೆ ಹೋದರೆ ಮಗನನ್ನ ಕ್ರಿಕೆಟರ್​​ ಮಾಡೋಕೆ ಅನ್ನೋ ಕಾರಣಕ್ಕೆ ಕೆಲಸವನ್ನೇ ತ್ಯಜಿಸಿಬಿಟ್ರು. ತಂದೆ ಕೆಲಸ ಬಿಟ್ಟ ಪರಿಣಾಮ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಆರ್ಥಿಕ ಸಂಕಷ್ಟ ಎದುರಾಗಿತ್ತು. ಈ ವೇಳೆ ಮುತ್ಯಾಲ ರೆಡ್ಡಿ ಹೋಗಿದ್ದೆ ಎಮ್​​ಎಸ್​ಕೆ ಪ್ರಸಾದ್​ ಬಳಿ.
ನಿತೀಶ್​ ಆಟಕ್ಕೆ MSK ಪ್ರಸಾದ್​ ಕ್ಲೀನ್​ಬೋಲ್ಡ್​
ಎಮ್​ಎಸ್​​ಕೆ ಪ್ರಸಾದ್​​ ಆಂದರೆ ಕ್ರಿಕೆಟ್​ ಅಸೋಸಿಯೇಶನ್​ ಹೆಡ್​ ಆಗಿದ್ರು. ಆ ಸಮಯದಲ್ಲಿ ವಿಶೇಷ ಪ್ಲಾನ್​ ರೂಪಿಸಿದ್ದ ಪ್ರಸಾದ್, ಯುವ ಕ್ರಿಕೆಟಿಗರಿಗಾಗಿ​ ರೆಸಿಡೆನ್ಸಿಯಲ್​ ಅಕಾಡೆಮಿಯನ್ನ ಆರಂಭಿಸಿದ್ರು. ಈ ಅಕಾಡೆಮಿಗೆ ಆಯ್ಕೆಯಾದ ಕ್ರಿಕೆಟಿಗರಿಗೆ ಎಲ್ಲಾ ಫ್ರೀಯಾಗಿ ಆಂದ್ರ ಕ್ರಿಕೆಟ್​ ಅಸೋಸಿಯೇಶನ್​ನಿಂದಲೇ ಸಿಗ್ತಿತ್ತು. ಊಟ, ವಸತಿ, ಬಟ್ಟೆ, ಕೋಚಿಂಗ್​ ಎಲ್ಲಾ ಫ್ರೀಯಾಗಿ ನೀಡಲಾಗ್ತಿತ್ತು. ಆಗ ಪ್ರಸಾದ್​ ಭೇಟಿಯಾಗಿದ್ದ ಮುತ್ಯಾಲ ರೆಡ್ಡಿ, ತಮ್ಮ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ನನ್ನ ಮಗ ಟ್ಯಾಲೆಂಟೆಡ್​ ಕ್ರಿಕೆಟರ್​, ಆತನನ್ನ ಅಕಾಡೆಮಿಗೆ ಸೇರಿಸಿಕೊಳ್ಳುವಂತೆ ಕೇಳಿಕೊಂಡಿದ್ರು. ಬಳಿಕ ಟ್ರಯಲ್ಸ್​ನಲ್ಲಿ ನಿತೀಶ್​ ರೆಡ್ಡಿ ಆಟವನ್ನ ನೋಡಿ ಇಂಪ್ರೆಸ್​ ಆದ ಪ್ರಸಾದ್​​, ನಿತೀಶ್​ ಅಕಾಡೆಮಿಯ ಡೋರ್​ ಓಪನ್​ ಮಾಡಿದ್ರು. ಅಲ್ಲಿಂದ ಶುರುವಾಗಿದ್ದು ನೋಡಿ ನಿತೀಶ್​ ರೆಡ್ಡಿ ರಿಯಲ್​ ಕ್ರಿಕೆಟ್​ ಜರ್ನಿ.
/newsfirstlive-kannada/media/post_attachments/wp-content/uploads/2024/11/NITISH_KUMAR.jpg)
ಅಂಡರ್​​ 14 ಏಜ್​ ಗ್ರೂಪ್​ನಲ್ಲಿ ಅಕಾಡೆಮಿಗೆ ಎಂಟ್ರಿ ಕೊಟ್ಟ ನಿತೀಶ್​ ರೆಡ್ಡಿ, ಹಾರ್ಡ್​​ವರ್ಕ್​, ಡೆಡಿಕೇಶನ್​ನಿಂದ ಗಮನಸೆಳೆದರು. ಕ್ರಿಕೆಟ್​ನ ತುಂಬಾ ಸೀರಿಯಸ್ಸಾಗಿ ತೆಗೆದುಕೊಂಡಿದ್ದ ನಿತೀಶ್ ಕಠಿಣ ಪರಿಶ್ರಮದಿಂದ ಉತ್ತಮ​​ ಆಲ್​​ರೌಂಡರ್​ ಆಗಿ ರೂಪುಗೊಂಡರು. ಅಂಡರ್​ 16, ಅಂಡರ್​ 19 ತಂಡಗಳಲ್ಲಿ ಮಿಂಚು ಹರಿಸಿ ಡೊಮೆಸ್ಟಿಕ್​ ಲೆವೆಲ್​ನಲ್ಲಿ ಪರ್ಫಾಮೆನ್ಸ್​ ನಿಂದ ಸೌಂಡ್​ ಮಾಡಿದ್ರು. ಇದರ ಬೆನ್ನಲ್ಲೇ ಐಪಿಎಲ್​ ಡೋರ್​​ ಓಪನ್​ ಆಯ್ತು. ಬಳಿಕ ನಿತೀಶ್​ ಮಾಡಿದ ಸಾಧನೆ ನಿಮಗೆ ಗೊತ್ತೇ ಇದ್ಯಲ್ಲ. 21 ವರ್ಷಕ್ಕೆ ಆಸ್ಟ್ರೇಲಿಯಾದ ಟಫ್​ ಪಿಚ್​ನಲ್ಲಿ, ಡೆಡ್ಲಿ ಬೌಲರ್​ಗಳ ಎದುರು, ಹೈ-ಪ್ರೆಶರ್​ ಗೇಮ್​ನಲ್ಲಿ ಸೆಂಚುರಿ ಸಿಡಿಸಿ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/12/NITISH-KUMAR-REDDY.jpg)
ನಿತೀಶ್​ ಆಟಕ್ಕೆ ತಲೆಬಾಗಿದ ಕ್ರಿಕೆಟ್​ ದೇವರು
ನಿತೀಶ್​ ರೆಡ್ಡಿಯ ಸೆಂಚುರಿಗೆ ಲೆಜೆಂಡ್​ಗಳೆಲ್ಲಾ ಕ್ಲೀನ್​​ ಬೋಲ್ಡ್​​ ಅಗಿದ್ದಾರೆ. ರವಿ ಶಾಸ್ತ್ರಿ, ಸುನಿಲ್​​ ಗವಾಸ್ಕರ್​​ರಂತ ದಿಗ್ಗಜರು ಆನಂದ ಭಾಷ್ಪ ಸುರಿಸಿದ್ದಾರೆ. ಕ್ರಿಕೆಟ್​ ದೇವರು ಸಚಿನ್​ ತೆಂಡುಲ್ಕರ್​ ಕೂಡ ತಲೆಬಾಗಿದ್ದಾರೆ. ನಿತೀಶ್​ ರೆಡ್ಡಿಯ ಮೊದಲ ಇನ್ನಿಂಗ್ಸ್​​ ನೋಡಿಯೇ ಇಂಪ್ರೆಸ್​ ಆಗಿದ್ದೆ. ಈ ಶತಕದ ಇನ್ನಿಂಗ್ಸ್​ ಅಂತೂ ಅದ್ಭುತ ಎಂದು ಬರೆದುಕೊಂಡಿದ್ದಾರೆ. ಅಂದು ತಂದೆ ಮಾಡಿದ್ದ ತ್ಯಾಗ, ಎಮ್​​ಎಸ್​​ಕೆ ಪ್ರಸಾದ್​ ಇಟ್ಟಿದ್ದ ನಂಬಿಕೆಗೆ ನಿತೀಶ್​ ರೆಡ್ಡಿ ಇದೀಗ ಬೆಲೆ ತಂದುಕೊಟ್ಟಿದ್ದಾರೆ. ಭವಿಷ್ಯದ ಟೀಮ್​ ಇಂಡಿಯಾದ ಸೂಪರ್​ ಸ್ಟಾರ್​ ಆಗೋ ಎಲ್ಲಾ ಭರವಸೆಯನ್ನ ಮೊದಲ ಟೂರ್​​ನಲ್ಲೇ ಹುಟ್ಟು ಹಾಕಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us