/newsfirstlive-kannada/media/post_attachments/wp-content/uploads/2024/12/NITISH_KUMAR-2.jpg)
ಬಾರ್ಡರ್ ಗವಾಸ್ಕರ್ ಟ್ರೋಫಿಯ 4ನೇ ಪಂದ್ಯ ಟೀಮ್ ಇಂಡಿಯಾಕ್ಕೆ ಅತ್ಯಂತ ಮುಖ್ಯವಾಗಿದೆ. ಟ್ರೋಫಿಯಲ್ಲಿ ಭಾರತ- ಆಸಿಸ್ ತಲಾ 1-1 ಗೆದ್ದುಕೊಂಡಿದ್ದು 3ನೇ ಟೆಸ್ಟ್ ಪಂದ್ಯ ಡ್ರಾ ಆಗಿದೆ. ಟೀಮ್ ಇಂಡಿಯಾ ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಆದರೆ ಪ್ಲೇಯಿಂಗ್- 11ರಲ್ಲಿ ಯಾವ್ಯಾವ ಆಟಗಾರರು ಆಡುತ್ತಾರೆ ಎನ್ನುವುದು ಕುತೂಹಲವಾಗಿದ್ದು ಯಂಗ್ ಬ್ಯಾಟರ್ ನಿತೀಶ್ ಕುಮಾರ್ ಆಡುವುದು ಡೌಟ್ ಎಂದು ಹೇಳಲಾಗುತ್ತಿದೆ.
ಹೈದರಾಬಾದ್ ಮೂಲದ ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಬಾರ್ಡರ್ ಗವಾಸ್ಕರ್ ಟೂರ್ನಿಯಲ್ಲಿ ಉತ್ತಮವಾದ ಪ್ರದರ್ಶನ ನೀಡಿದ್ದಾರೆ. ಆದರೆ 4ನೇ ಪಂದ್ಯವನ್ನು ಟೀಮ್ ಇಂಡಿಯಾದ ಫೈನಲ್ ಹಾದಿಯನ್ನು ನಿರ್ಧರಿಸಲಿದೆ. ಹೀಗಾಗಿ ಈ ಮ್ಯಾಚ್ನಲ್ಲಿ ನಿತೀಶ್ ಕುಮಾರ್ ಬದಲಿಗೆ ವಾಷಿಂಗ್ಟನ್ ಸುಂದರ್ ಆಡುವ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ ಮೆಲ್ಬೋರ್ನ್ ಸ್ಟೇಡಿಯಂ ಪಿಚ್ ಸ್ಪಿನ್ ಸ್ನೇಹಿ ಆಗಿದ್ದರಿಂದ ಆಲ್ರೌಂಡರ್ ಸುಂದರ್ಗೆ ಅವಕಾಶ ಕೊಡಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ:ಟೀಮ್ ಇಂಡಿಯಾದ ಓಪನಿಂಗ್ ಬ್ಯಾಟಿಂಗ್ನಲ್ಲಿ ದೊಡ್ಡ ಬದಲಾಣೆ.. ಕನ್ನಡಿಗ KL ರಾಹುಲ್ಗೆ ಬಿಗ್ ಶಾಕ್
ನಿತೀಶ್ ಕುಮಾರ್ ಬಾರ್ಡರ್ ಗವಾಸ್ಕರ್ ಟ್ರೋಫಿಯ ಐದು ಇನ್ನಿಂಗ್ಸ್ನಲ್ಲಿ 179 ರನ್ ಗಳಿಸಿದ್ದು 44ಕ್ಕಿಂತ ಹೆಚ್ಚು ಸರಾಸರಿ ಜೊತೆಗೆ 72 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದರೂ 4ನೇ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಒಬ್ಬರಾಗಿದ್ದಾರೆ. ಅಲ್ಲದೇ ಟೆಸ್ಟ್ನಲ್ಲಿ 27 ಓವರ್‌ಗಳು ಬೌಲ್ ಮಾಡಿ ಮೂರು ವಿಕೆಟ್ಗಳನ್ನು ಕಬಳಿಸಿದ್ದಾರೆ.
ಟೀಮ್ ಇಂಡಿಯಾದಲ್ಲಿ ಓಪನರ್ ಬ್ಯಾಟರ್ ಆಗಿ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಕ್ರೀಸ್ಗೆ ಬರುವುದು ಫಿಕ್ಸ್ ಆಗಿದೆ. ಬಳಿಕ ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ ಬ್ಯಾಟಿಂಗ್ಗೆ ಬರುತ್ತಾರೆ. ಆದರೆ ಗಿಲ್ ಯಾವ ಹಂತದಲ್ಲಿ ಬರುತ್ತಾರೆ ಎನ್ನುವುದು ಕನ್ಫರ್ಮ್ ಆಗಿಲ್ಲ. ಅಲ್ಲದೇ ಪಿಚ್ ಸ್ಪಿನ್ ಬೌಲಿಂಗ್ಗೆ ಹೆಚ್ಚು ಸಹಕಾರಿ ಆಗಿದ್ದರಿಂದ ರವೀಂದ್ರ ಜಡೇಜಾ ಜೊತೆಗೆ ಸುಂದರ್ ಆಡುತ್ತಾರೆ. ಹೀಗಾಗಿ ನಿತೀಶ್ ಕುಮಾರ್ ಅವರನ್ನು ಡ್ರಾಪ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ