newsfirstkannada.com

ಸ್ವಲ್ಪವೂ ಸುಳಿವು ಬಿಟ್ಟು ಕೊಡದ ಚಂದು-ನಿವಿ.. ಡಿವೋರ್ಸ್ ವಿಚಾರ ಈಗಲೂ ನಂಬಲಾಗುತ್ತಿಲ್ಲ ಎಂದ ಆಪ್ತ ಸ್ನೇಹಿತ

Share :

Published June 9, 2024 at 6:22am

  ಶಾಕ್‌ ಉಂಟು ಮಾಡಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಡಿವೋರ್ಸ್‌

  ಸ್ನೇಹಿತರಂತಿದ್ದ ಇವರಿಬ್ಬರು ಯಾಕೆ ಈ ರೀತಿ ನಿರ್ಧಾರ ಕೈಗೊಂಡ್ರು ಗೊತ್ತಾ..?

  ಇಬ್ಬರು ಒಟ್ಟಿಗೆ ನಟಿಸಿದ್ದ ಸಿನಿಮಾ ಅರ್ಧದಲ್ಲೇ ನಿಂತು ಹೋಗುತ್ತಾ, ಇಲ್ವಾ?

ಚಂದನ್ ಶೆಟ್ಟಿ ಮತ್ತು ನಿವೇದಿತಾ ಡಿವೋರ್ಸ್‌ ವಿಚಾರದಿಂದ ಬಹುತೇಕರು ಶಾಕ್‌ಗೆ ಒಳಗಾಗಿದ್ದಾರೆ. ಅದು ಫ್ಯಾನ್ಸ್ ಇರಬಹುದು ಅಥವಾ ಅವರ ಆಪ್ತ ವಲಯ ಇರಬಹುದು. ಎಲ್ಲರಿಗೂ ಒಂದು ರೀತಿಯ ದಿಗ್ಭ್ರಮೆಯಾಗಿದೆ. ಯಾಕಂದ್ರೆ, ಸ್ನೇಹಿತರಂತೆ ಇದ್ದ ಇವರಿಬ್ಬರು ಯಾಕೆ ಈ ರೀತಿಯ ನಿರ್ಧಾರ ಕೈಗೊಂಡಿದ್ದಾರೆ ಅನ್ನೋದರ ಬಗ್ಗೆ ಅವ್ರಿಗೆ ನಿಜಕ್ಕೂ ಅತೃಪ್ತಿಯಿದೆ. ಕಳೆದ ವರ್ಷ ರಿಲೀಸ್ ಆದ ಸುಕ್ಕಾ ಪಾರ್ಟಿ ಸಾಂಗ್ ಒಂದು ಮಟ್ಟಿಗೆ ಸೌಂಡ್ ಮಾಡಿತ್ತು. ಚಂದನ್ ಶೆಟ್ಟಿ ಸಖತ್ ಸ್ಟೆಪ್ ಹಾಕಿದ್ದರು. ರೆಟ್ರೋ ಸ್ಟೈಲ್‌ನಲ್ಲಿ ಹೆಜ್ಜೆ ಹಾಕಿದ್ದ ಚಂದನ್‌ ಫ್ಯಾನ್ಸ್‌ಗೆ ಕಿಕ್ಕ್ ಕೊಟ್ಟಿದ್ದರು.

ಇದನ್ನೂ  ಓದಿ: 6 ತಿಂಗಳ ಹಿಂದೆಯೇ ಡಿವೋರ್ಸ್​ಗೆ ನಿರ್ಧಾರ, ರಾಜಿ ಪಂಚಾಯ್ತಿ ಮಾಡಿದ್ರು; ವಕೀಲೆ ಅನಿತಾ ಏನಂದ್ರು ಗೊತ್ತಾ?

ಚಂದನ್‌ ಬೇಗ ಪಾಪ್ಯುಲರ್ ಆದ ಇಂಡಿಪೆಂಡೆಂಟ್ ಮ್ಯೂಸಿಕ್ ಲೋಕದ ಸ್ಟಾರ್‌. ಕಂಪೋಸರ್‌, ಲಿರಿಕ್ಸ್ ರೈಟರ್ ಅಂಡ್ ಸಿಂಗರ್ ಆಗಿರೋ ಚಂದನ್ ಟ್ಯಾಲೆಂಟ್‌ಗೆ ಸ್ಯಾಂಡಲ್‌ವುಡ್‌ನ ಖ್ಯಾತನಾಮರು ಸಾಥ್ ಕೊಟ್ಟಿದ್ದರು. ಅದರಲ್ಲಿ ಪ್ರಮುಖರು ರಚಿತಾ ರಾಮ್‌. ಲಕ ಲಕ ಲ್ಯಾಂಬೋರ್ಗನಿ ಹಾಡಿಗೆ ರಚಿತಾ ರಾಮ್ ಚಂದನ್ ಶೆಟ್ಟಿ ಜೊತೆ ಡ್ಯಾನ್ಸ್ ಮಾಡಿದ್ದರು. ಈ ಹಾಡು ಕೂಡ ಹಿಟ್ ಆಗಿತ್ತು. ಯಾವಾಗ ಚಂದನ್‌ ಹಾಡುಗಳು ಹಿಟ್ ಆಗಿ, ಅವರಿಗೊಂದು ದೊಡ್ಡ ಫ್ಯಾನ್‌ ಬಳಗ ಕ್ರಿಯೇಟ್ ಆಯ್ತೋ, ಚಿತ್ರರಂಗದ ಹಲವರು ಚಂದನ್‌ ಜೊತೆ ಸಿನಿಮಾ ಮಾಡೋಕೆ ಮುಂದಾದರೂ. ಅದರಲ್ಲಿ ಪ್ರಮುಖರು ನವರಸನ್.

ನವರಸನ್‌ ಮತ್ತು ಚಂದನ್‌ ತುಂಬಾ ಕ್ಲೋಸ್‌ ಫ್ರೆಂಡ್ಸ್. ಇಂಡಸ್ಟ್ರಿಯಲ್ಲಿರೋರಿಗೆ ನವರಸನ್ ಚಿರಪರಿಚಿತರು. ಅವರು ಸಿನಿಮಾ ನಿರ್ಮಿಸೋಕೆ ಮುಂದಾದಾಗ, ಅವರ ಕನಸಿಗೆ ಸಾಥ್ ಕೊಟ್ಟಿದ್ದೇ ಚಂದನ್‌. ಇವರಿಬ್ಬರೂ ಅನೌನ್ಸ್ ಮಾಡಿದ ಸಿನಿಮಾದ ಹೆಸರು ಸೂತ್ರಧಾರಿ. ಈ ಸಿನಿಮಾದ ಹೀರೋ ಆಗಿ ಕಾಣಿಸಿಕೊಂಡಿದ್ದ ಚಂದನ್‌ಗೆ ನಾಯಕಿಯಾಗಿ ಆಯ್ಕೆ ಆಗಿದ್ದವರು ಸಂಜನಾ ಆನಂದ್‌.

ಈ ಸಿನಿಮಾ ಕ್ರಿಯೇಟಿವ್ ಡೈರೆಕ್ಟರ್‌ ಮತ್ತು ನಿರ್ಮಾಪಕರಾಗಿದ್ದು ನವರಸನ್‌. ಆಶ್ಚರ್ಯ ಅಂದ್ರೆ, ಇವರಿಗೂ ಕೂಡ ಡಿವೋರ್ಸ್ ವಿಚಾರ ಶಾಕ್‌ ಕೊಟ್ಟಿದೆ. ಹಲವು ವರ್ಷಗಳಿಂದ ಕ್ಲೋಸ್ ಫ್ರೆಂಡ್ಸ್ ಆಗಿರೋ ಇವರಿಗೂ ನಿವಿ, ಚಂದನ್‌ ವಿಚ್ಛೇದನದ ವಿಚಾರ ಗೊತ್ತೇ ಇರಲಿಲ್ಲ. ಸ್ನೇಹಿತ ನವರಸನ್ ಜೊತೆ ಚಂದನ್ ಶೆಟ್ಟಿ, ಎಂದಿಗೂ ಕೂಡ ಈ ರೀತಿಯ ವಿಚಾರವನ್ನ ಪ್ರಸ್ತಾಪನೇ ಮಾಡಿರರಲಿಲ್ಲವಂತೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಸುದ್ದಿ ಶುದ್ಧ ಸುಳ್ಳ ಅಂತಾರೆ ನವರಸನ್.

ಇಂಡಸ್ಟ್ರಿಯಲ್ಲಿ ಕನೆಕ್ಷನ್ ಇದ್ದ ಅನೇಕರಿಗೆ ಗೊತ್ತಿರೋ ಒಂದು ಸತ್ಯ ಏನಂದ್ರೆ, ಚಂದನ್ ಮತ್ತು ನಿವೇದಿತಾ ತುಂಬಾ ಅನೋನ್ಯವಾಗಿದ್ದರು. ಇಬ್ಬರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇವೆ ಅನ್ನೋ ರೀತಿ ಅವರು ಎಂದಿಂಗೂ ತೋರಿಸಿಕೊಂಡಿರಲಿಲ್ಲ. ಇವರನ್ನ ಹತ್ತಿರದಿಂದ ನೋಡಿರೋ ನವರಸನ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇನ್‌ಫ್ಯಾಕ್ಟ್‌ ನವರಸನ್ ಜೊತೆ ಚಂದನ್‌ ಮಾತುಕತೆ ನಡೆಸಿದ್ದಾರೆ. ಆಗ ಕೂಡ ಯಾವುದೇ ರೀತಿಯ ಸುಳಿವು ಬಿಟ್ಟು ಕೊಟ್ಟಿಲ್ಲ. ನಾವಿಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇವೆ ಅನ್ನೋ ಬಗ್ಗೆ ಹೇಳಿಕೊಂಡೇ ಇಲ್ವಂತೆ. ಇನ್ನು, ಸೂತ್ರಧಾರಿ ಸಿನಿಮಾದ ಕುರಿತಾಗಿ ನಿವೇದಿತಾ, ಚಂದನ್‌ಗೆ ಸಾಕಷ್ಟು ಸಪೋರ್ಟ್ ಮಾಡಿದ್ದಾರೆ.

ಇದನ್ನೂ ಓದಿ: T20 World Cup; ಉಗ್ರರ ಬೆದರಿಕೆ.. ಇಂಡಿಯಾ- ಪಾಕ್ ಮ್ಯಾಚ್​ ನಡೆಯೋದೆ ಡೌಟ್!

ಇದನ್ನೂ  ಓದಿ: ಚಂದನ್ ಶೆಟ್ಟಿಗೆ ಆ ವಿಡಿಯೋ ಕಳುಹಿಸ್ತೀನಿ -ಇಬ್ಬರೂ ಒಂದಾಗುವ ಬಗ್ಗೆ ಮಾತಾಡಿದ ಪ್ರಥಮ್..!

ಈಗಲೂ ಮಾಡ್ತಿದ್ದಾರೆ ಅಂತಾ ನಿರ್ಮಾಪಕರಾದ ನವರಸನ್ ಹೇಳ್ತಾರೆ. ಇನ್ನು, ಇವರಿಬ್ಬರ ವಿಚಾರವಾಗಿ ನಟ ನಿರ್ದೇಶಕ ಪ್ರಥಮ್ ಕೂಡ ರಿಯಾಕ್ಟ್ ಮಾಡಿದ್ದಾರೆ. ಇಲ್ಲಿಯವರೆಗೂ ಆಗಿರೋ ಡೆವಲಪ್‌ಮೆಂಟ್ ಬಗ್ಗೆ ಆಪ್ತವಲಯ ನಿಜಕ್ಕೂ ಬೇಸರಗೊಂಡಿದೆ. ಅವರಿಬ್ಬರೂ ಚೆನ್ನಾಗಿರಲಿ ಅಂತಾ ಆಶಿಸಿದ್ದಾರೆ. ಮುಂದೊಂದು ದಿನ ಇವರಿಬ್ಬರೂ ಮತ್ತೆ ಒಟ್ಟಿಗೆ ಜೀವನ ನಡೆಸೋಕೆ ಡಿಸೈಡ್ ಮಾಡಿದ್ರೆ, ಅದಕ್ಕಿಂತ ಖುಷಿ ವಿಚಾರ ಮತ್ತೊಂದಿಲ್ಲ ಅನ್ನೋದು ಆಪ್ತವಲಯದ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ವಲ್ಪವೂ ಸುಳಿವು ಬಿಟ್ಟು ಕೊಡದ ಚಂದು-ನಿವಿ.. ಡಿವೋರ್ಸ್ ವಿಚಾರ ಈಗಲೂ ನಂಬಲಾಗುತ್ತಿಲ್ಲ ಎಂದ ಆಪ್ತ ಸ್ನೇಹಿತ

https://newsfirstlive.com/wp-content/uploads/2024/06/nivi3.jpg

Load More