ನಿವೇದಿತಾ ಗೌಡ ಹೊಸ ವಿಡಿಯೋ ಪೋಸ್ಟ್‌ಗೆ ಕಮೆಂಟ್‌ಗಳ ಸುರಿಮಳೆ; ಸ್ಟುಪಿಡ್‌, ಗೆಟೌಟ್‌ ಎಂದ ಗೊಂಬೆ!

author-image
admin
Updated On
ನಿವೇದಿತಾ ಗೌಡ ಹೊಸ ವಿಡಿಯೋ ಪೋಸ್ಟ್‌ಗೆ ಕಮೆಂಟ್‌ಗಳ ಸುರಿಮಳೆ; ಸ್ಟುಪಿಡ್‌, ಗೆಟೌಟ್‌ ಎಂದ ಗೊಂಬೆ!
Advertisment
  • ಚಂದನ್ ಶೆಟ್ಟಿ ವಿಚ್ಛೇದನದ ಬಳಿಕ ನಿವೇದಿತಾ ಗೌಡ ಫುಲ್ ಆ್ಯಕ್ಟಿವ್
  • ನಿವೇದಿತಾ ಗೌಡ ಅವರ ಹೊಸ ರೀಲ್ಸ್‌ಗಳಿಗೆ ನೆಟ್ಟಿಗರು ಕೆಂಡಾಮಂಡಲ
  • ಕೊನೆಗೆ ನಮಗೆ ಈಗ ಶೆಡ್‌ ನೆನಪಾಗುತ್ತಿದೆ ಎಂದು ಸುಮ್ಮನಾದ ಫ್ಯಾನ್ಸ್‌!

ಬಿಗ್‌ಬಾಸ್ ಹಾಗೂ ಗಿಚ್ಚಿಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಮಿಂಚಿದ್ದ ನಿವೇದಿತಾ ಗೌಡ ಅವರು ಟ್ರೋಲ್ ಆಗೋದು ಹೊಸದೇನೂ ಅಲ್ಲ. ಸೋಷಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ಅವರ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತೆ. ಕನ್ನಡದ ಱಪರ್‌ ಚಂದನ್ ಶೆಟ್ಟಿ ಅವರೊಂದಿಗೆ ವಿಚ್ಛೇದನದ ಬಳಿಕ ನಿವೇದಿತಾ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.

ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಹಾಟ್​ ಲುಕ್​ನಲ್ಲಿ ಚಂದನ್​​ ಶೆಟ್ಟಿ ಮಾಜಿ ಪತ್ನಿ; ನಿವೇದಿತಾ ಗೌಡಗೆ ನೆಟ್ಟಿಗರು ಹೀಗಾ ಅನ್ನೋದು! 

ಇತ್ತೀಚೆಗೆ ಹೊಸ, ಹೊಸ ರೀಲ್ಸ್‌ ಮಾಡುತ್ತಿರುವ ನಿವೇದಿತಾ ಗೌಡ ಅವರು ನೆಟ್ಟಿಗರ ಕಣ್ಣಿಗೆ ಬಿದ್ದಿದ್ದಾರೆ. ಅದರಲ್ಲೂ ಕನ್ನಡ ಬಿಟ್ಟು ಬರೀ ಇಂಗ್ಲೀಷ್ ಹಾಡುಗಳಿಗೆ ರೀಲ್ಸ್‌ ಮಾಡುತ್ತಿರುವುದಕ್ಕೆ ಟೀಕೆಗೂ ಗುರಿಯಾಗಿದ್ದಾರೆ. ನಿವೇದಿತಾ ಗೌಡ ಅವರ ರೀಲ್ಸ್‌ಗಳಿಗೆ ಸಿಕ್ಕಾಪಟ್ಟೆ ಬ್ಯಾಡ್‌ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೊನೆಗೆ ನಮಗೆ ಶೆಡ್‌ ನೆನಪಾಗುತ್ತಿದೆ ಎಂದು ಸುಮ್ಮನಾಗುವವರು ಇದ್ದಾರೆ.

ನಿವೇದಿತಾ ಗೌಡ ಅವರು ಜಾಲಿಯಾಗಿ ರೀಲ್ಸ್‌ ಮಾಡೋದರ ಜೊತೆಗೆ ತನ್ನ ತಮ್ಮನ ಜೊತೆ ವಿಡಿಯೋ ಹಂಚಿಕೊಂಡಿದ್ದಾರೆ. ಇಂಗ್ಲೀಷ್ ಹಾಡು ಹಾಡೋದಕ್ಕೆ ಪ್ರಯತ್ನಿಸಿರೋ ನಿವೇದಿತಾ ಗೌಡಗೆ ಪ್ರೀತಿಯ ತಮ್ಮ ಸಖತ್ ಕ್ವಾಟ್ಲೆ ಕೊಟ್ಟಿದ್ದೇನೆ. ತಮ್ಮನ ಕಿರಿಕಿರಿಗೆ ರೋಸಿ ಹೋದ ನಿವೇದಿತಾ ಗೌಡ ಅವರು ಹೌದು ನಾನು ಸ್ಟುಪಿಟ್‌. ಗೆಟೌಟ್ ಅಂತೆಲ್ಲಾ ತಿರುಗೇಟು ಕೊಟ್ಟಿದ್ದಾರೆ. ಒಂದು ಇಂಗ್ಲೀಷ್ ಹಾಡಲು ಹರಸಾಹಸ ಪಟ್ಟಿರೋ ನಿವೇದಿತಾ ಗೌಡ ತನ್ನ ತಮ್ಮ ಕೀಟಲೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಎಲ್ಲಾ ತಮ್ಮಂದಿರು ಹೀಗೆ ಇರುತ್ತಾರೆ ಅನ್ನೋ ಕ್ಯಾಪ್ಶನ್ ಹಾಕಿದ್ದಾರೆ.

ನಿವೇದಿತಾ ಗೌಡ ಹಾಗೂ ಅವರ ತಮ್ಮನ ವಿಡಿಯೋ ನೋಡಿದ ನೆಟ್ಟಿಗರು ಸಾಕಷ್ಟು ಕಮೆಂಟ್‌ಗಳು ಸುರಿಮಳೆಗೈದಿದ್ದಾರೆ. ಕನ್ನಡದ ಹಾಡು ಮರೆತು ಇಂಗ್ಲಿಷ್ ಹಾಡಿನ ಮೊರೆ ಹೋಗಿರೋದಕ್ಕೆ ಸಿಟ್ಟು ಹೊರ ಹಾಕಿದ್ದಾರೆ. ಇದರ ಜೊತೆಗೆ ಕನ್ನಡ ಮಾತಾಡಮ್ಮ, ಕನ್ನಡ ಕೊಲ್ಲುತ್ತಿರುವವರಿಗೆ ನನ್ನದೊಂದು ನಮಸ್ಕಾರ. ಡೌ ರಾಣಿ no 1 ಅಂತೆಲ್ಲಾ ಕಿಡಿಕಾರಿದ್ದಾರೆ. ಇನ್ನು ಕೆಲವರು ಲವ್ಲಿ ಬ್ರದರ್ ಮತ್ತು ಸಿಸ್ಟರ್, ಅಕ್ಕ-ತಮ್ಮನ ಈ ಬಾಂಡಿಂಗ್ ಯಾವಗಲೂ ಸ್ವೀಟ್ ಆಗಿರುತ್ತೆ ಎಂದಿದ್ದಾರೆ.

ಇದನ್ನೂ ಓದಿ: ಡಿವೋರ್ಸ್‌ ಬೆನ್ನಲ್ಲೇ ಚಂದನ್​ ಶೆಟ್ಟಿ ಮಾಜಿ ಪತ್ನಿ ಪ್ರತ್ಯಕ್ಷ; ನಿವೇದಿತಾ ಗೌಡ ವಿಡಿಯೋ ವೈರಲ್! 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment