Advertisment

ಅಷ್ಟು ಸ್ಟ್ರಾಂಗ್​ ಆಗಿದ್ದ ಚಂದನ್​​, ನಿವೇದಿತಾ ಬಾಂಡ್​ ಮುರಿದು ಬಿದ್ದಿದ್ದೇಕೆ? ಕೋರ್ಟ್​ನಲ್ಲಿ ಆಗಿದ್ದೇನು?

author-image
Veena Gangani
Updated On
ಅಷ್ಟು ಸ್ಟ್ರಾಂಗ್​ ಆಗಿದ್ದ ಚಂದನ್​​, ನಿವೇದಿತಾ ಬಾಂಡ್​ ಮುರಿದು ಬಿದ್ದಿದ್ದೇಕೆ? ಕೋರ್ಟ್​ನಲ್ಲಿ ಆಗಿದ್ದೇನು?
Advertisment
  • ನಿವೇದಿತಾ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡ್ಬೇಕು ಅನ್ನೋ ಇಚ್ಚೆ ಇದೆ!
  • ದಂಪತಿಗಳ ಅರ್ಜಿಯಲ್ಲಿ ಆರೋಪ ಪ್ರತ್ಯಾರೋಪ ಇಲ್ಲವೇ ಇಲ್ಲ ಏಕೆ?
  • ಕೋರ್ಟ್​ ಮೆಟ್ಟಿಲಿನಲ್ಲಿ ಮುರಿದು ಬಿದ್ದ 4 ವರ್ಷದ ದಾಂಪತ್ಯ ಜೀವನ

ಕನ್ನಡದ ಬಿಗ್​ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿರೋ ನಿವೇದಿತಾ ಗೌಡ ಹಾಗೂ ಚಂದನ್​​ ಶೆಟ್ಟಿ ಬಾಳಿನ ಗೀತೆ ತಾಳ ತಪ್ಪಿದೆ. ಈ ಜೋಡಿನಾ ನೋಡಿ ನಾವು ಹಿಂಗೆ ಇದ್ರೆ ಚೆನ್ನಾಗಿ ಇರ್ತಿತ್ತು ಅಂದವರೆ ಹೆಚ್ಚು. ಆದ್ರೆ ಯಾರ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ ಲವಲವಿಕೆಯಿಂದ ಇದ್ದ ಜೋಡಿ ದಾಂಪತ್ಯದಲ್ಲಿ ಬಿರುಕು ಮೂಡಿದೆ.

Advertisment

publive-image

ಇದನ್ನೂ ಓದಿ:8 ವರ್ಷದ ತಂಗಿಯ ಕುತ್ತಿಗೆಗೆ ದುಪ್ಪಟ್ಟ ಬಿಗಿದು ಕೊಂದ ಸ್ವಂತ ಅಣ್ಣ.. ತನಿಖೆ ವೇಳೆ ಕೊಲೆ ರಹಸ್ಯ ರಿವೀಲ್..

ಕೋರ್ಟ್​ ಮೆಟ್ಟಿಲಿನಲ್ಲಿ ನಾಲ್ಕು ವರ್ಷದ ದಾಂಪತ್ಯ ಜೀವನ ಮುರಿದು ಬಿದ್ದಿದೆ. ನಾಲ್ಕು ವರ್ಷಗಳ ಹಿಂದೆ ಶುರುವಾಗಿದ್ದ ಇವರಿಬ್ಬರ ಪ್ರೀತಿ ಪಯಣ ಈಗ ಮುರಿದು ಬಿದ್ದಿದೆ. ಯಾವ ಖುಷಿ ಸಂತೋಷದಿಂದ ಏಳು ಹೆಜ್ಜೆ ಇಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರೋ ಅದೇ ಖುಷಿಯಲ್ಲಿ ಇಂದು ಕೈ ಕೈ ಹಿಡಿದು ಬಂದ ಜೋಡಿಯ ಅನುಬಂಧ ಕೋರ್ಟ್​ ಮೆಟ್ಟಿಲಿನಲ್ಲಿ ಕೊನೆಯಾಗಿದೆ.  2017-2018ರಲ್ಲಿ ನಡೆದಿದ್ದ ಬಿಗ್​ಬಾಸ್ ಸೀಸನ್​​ 5ರಲ್ಲಿ ಱಪರ್​ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಭಾಗಿಯಾಗಿದ್ರು. ಬಿಗ್​ ಮನೆಯಲ್ಲಿ ಇಬ್ಬರ ಮಧ್ಯೆ ಫ್ರೆಂಡ್​ಶಿಪ್​ ಇತ್ತು.

publive-image

ಆದ್ರೆ ದೊಡ್ಮನೆಯಿಂದ ಚಂದನ್​ ವಿನ್​ ಆಗಿ ಹೊರ ಬಂದ ಮೇಲೆ ಇವರ ಬಾಂಡಿಗ್​ ಇನ್ನಷ್ಟು ಸ್ಟ್ರಾಂಗ್​ ಆಗಿತ್ತು. ಕೊನೆಗೂ ಎಲ್ಲರ ನಿರೀಕ್ಷೆಯಂತೆ 2019ರ ಮೈಸೂರು ದಸರಾ ಈವೆಂಟ್‌ನಲ್ಲೇ ಬಹಿರಂಗವಾಗಿ ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಲವ್ ಪ್ರಪೋಸ್ ಮಾಡಿ ಕಾಂಟ್ರೋವರ್ಸಿ ಮಾಡಿಕೊಂಡಿದ್ರು. ಆದ್ರೆ ಇದಾದ ಮೇಲೆ ಇಬ್ಬರೂ ಅದ್ಧೂರಿಯಾಗಿ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೀಗ ಈ ಜೋಡಿಯ ಪ್ರೀತಿ ಡಿವೋರ್ಸ್ ಮೂಲಕ ಅಂತ್ಯಗೊಂಡಿದೆ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಕೋರ್ಟ್​ನಲ್ಲಿ ಎಷ್ಟೇ ಒಪ್ಪಿಸೋಕೆ ಟ್ರೈ ಮಾಡಿದ್ರೂ ನೋ ಎಂದಿದ್ದಾರೆ. ಶಾಂತಿನಗರದ ಫ್ಯಾಮಿಲಿ ಕೋರ್ಟ್​ನಲ್ಲಿ ಎರಡನೇ ಹೆಚ್ಚುವರಿ ಪ್ರಿನ್ಸಿಪಲ್ ಜಡ್ಜ್ ಮುಂದೆ ಹಾಜರಾಗಿದ್ದ ನಿವ್ವಿ, ಚಂದು, ಪರಸ್ಪರ ಒಪ್ಪಿ ಬೇರೆ ಆಗಲು ನಿರ್ಧರಿಸಿರೋದಾಗಿ, ಸ್ವಲ್ಪ ಭಿನ್ನಾಭಿಪ್ರಾಯವಿದೆ.

Advertisment

publive-image

ಇಬ್ಬರಿಗೂ ಕರಿಯರ್ ಬಗ್ಗೆ ಕನಸುಗಳು ಇವೆ. ನಿವೇದಿತಾ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡ್ಬೇಕು ಅನ್ನೋ ಇಚ್ಚೆ ಇದೆ ಎಂದಿದ್ದಾರೆ. ಇಬ್ಬರ ಮಧ್ಯೆ ಆರೋಪ ಪ್ರತ್ಯಾರೋಪ ಇಲ್ಲದ ಕಾರಣ, ದಂಪತಿಗಳ ಅರ್ಜಿಯನ್ನ ಕೋರ್ಟ್ ಪುರಸ್ಕರಿಸಿದೆ. ಇನ್ನೂ ಜಡ್ಜ್​ ಮುಂದೆ ಹೇಳಿಕೆ ನೀಡಿದ ಬಳಿಕ ದಂಪತಿ ಕೈ ಕೈ ಹಿಡಿದು ಹೊರ ನಡೆದಿದ್ದಾರೆ. ಅದೇನೆ ಇರಲಿ ಕರ್ನಾಟಕದ ಕ್ಯೂಟ್​ ಕಪಲ್​ ಯಾರು ಅಂತ ಕೇಳಿದ್ರೆ ಥಟ್​ ಅಂತ ನೆನಪಾಗ್ತಾ ಇದ್ದಿದ್ದು ಚಂದನ್​ ನಿವೇದಿತಾ ಗೌಡ. ಆದ್ರೆ, ಇಬ್ಬರ ಮೇಲೆ ಯಾರ ಕಣ್ಣು ಬಿತ್ತು ಗೊತ್ತಿಲ್ಲ ನಾಲ್ಕು ವರ್ಷದ ಲವ್​ ಡಿವೋರ್ಸ್​ನಲ್ಲಿ ಎಂಡ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment