newsfirstkannada.com

ನಿವೇದಿತಾಗೆ ಹೈದ್ರಾಬಾದ್ ಹುಡುಗನ ಜೊತೆ ಸಂಬಂಧ ಇದಿಯಾ.. ಸಂಬರ್ಗಿಗೆ ಚಂದನ್ ಸಖತ್ ಕ್ಲಾಸ್

Share :

Published June 10, 2024 at 6:17pm

  ಬೇರೆಯವ್ರ ಪರ್ಸನಲ್ ಲೈಫ್ ಬಗ್ಗೆ ಅವರು ಮಾತಾಡಿದ್ದು, ಸರಿಯಲ್ಲ

  ಸತ್ಯ ಅಂದುಕೊಳ್ಳಬೇಕು ಆ ಮಟ್ಟಿಗೆ ನಮ್ಮ ಬಗ್ಗೆ ವದಂತಿ ಹಬ್ಬಿಸುತ್ತಿದ್ದಾರೆ

  ನಮ್ಮಿಬ್ಬರ ಮಧ್ಯೆ ಜಗಳ ತರಲು ಇಂಥ ಕೆಲಸ ಮಾಡ್ತಿದ್ರಾ ಅನ್ನಿಸುತ್ತಿದೆ?

ಬೆಂಗಳೂರು: ಸದ್ಯ ದಾಂಪತ್ಯ ಜೀವನದಿಂದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಬೇರೆ ಬೇರೆಯಾಗಿದ್ದಾರೆ. ಇವರ ಡಿವೋರ್ಸ್​ ಕುರಿತು ಮಾತನಾಡಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಹೆಸರನ್ನು ಹೇಳದೇ ಚಂದನ್ ಶೆಟ್ಟಿ, ನಿವೇದಿತಾ ಗೌಡ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಮೂರನೇ ವ್ಯಕ್ತಿ ವಿಚಾರ ಕೇಳಿ ಬಂದ ಕೂಡಲೇ ನಾನೇ ಅವರಿಗೆ ಕಾಲ್ ಮಾಡಿದೆ’ -ನಿವೇದಿತಾ ಹೇಳಿದ್ದೇನು?

ಮಾಗಡಿ ರಸ್ತೆಯಲ್ಲಿನ ಎಂಎಂಬಿ ಲೆಗಸಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಚಂದನ್ ಶೆಟ್ಟಿ ಮಾತನಾಡಿದರು, ಇನ್ನೊಬ್ಬ ವ್ಯಕ್ತಿ (ಪ್ರಶಾಂತ್ ಸಂಬರ್ಗಿ) ಸಂದರ್ಶನ ಕೊಟ್ಟಿರುವುದು ನೋಡಿದೆ. ಅವರು ನನ್ನ ಕ್ಲೋಸ್ ಫ್ರೆಂಡ್ ಅಂತ ಹೇಳುತ್ತಿದ್ದಾರೆ. ಆ ರೀತಿ ಯಾವುದು ಇಲ್ಲ. ಅವರು ಹೇಳಿದಂತ ಮಾತುಗಳನ್ನು ಕೇಳಿ ನನಗೆ ಒಂದು ನಿಮಿಷ ಶಾಕ್ ಆಯಿತು. ಯಾಕೆ ಈ ರೀತಿ ಸುಳ್ಳು ಹೇಳುತ್ತಿದ್ದರಲ್ಲ ಅನಿಸಿತು. 6 ತಿಂಗಳು ಹಿಂದೆ ನನಗೆ ಸಿಕ್ಕಾಗ ಹೇಳಿದರು ಅಂತ ಹೇಳಿದ್ದು ಸುಳ್ಳು. ನಿವೇದಿತಾ ಅವರಿಗೆ ಹೈದರಾಬಾದ್​ನಲ್ಲಿ ಒಂದು ಹುಡುಗನ ಜೊತೆ ಸಂಬಂಧ ಇದೆ ಅಂತ. ಅವರು ಯಾಕೆ ಹೈದರಾಬಾದ್​ಗೆ ಹೋಗ್ತಾರೆ ಎಂದು ಹೇಳಿದ್ದಾರೆ ಎಂದಿದ್ದಾರೆ. ಆದರೆ ಈ ರೀತಿಯಾದ ಯಾವುದೇ ಮಾತು ನಮ್ಮಿಬ್ಬರ ಮಧ್ಯೆ ನಡೆದಿಲ್ಲ. ಅವರು ಹೇಳಿದ್ದೆಲ್ಲ ಸುಳ್ಳು ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಮಕ್ಕಳು ಮಾಡಿಕೊಳ್ಳೋ ವಿಚಾರಕ್ಕೆ ಡಿವೋರ್ಸ್​ ಆಯ್ತಾ? ಈ ಬಗ್ಗೆ ಚಂದನ್​ ಶೆಟ್ಟಿ ಹೇಳಿದ್ದೇನು?

ಸಿನಿಮಾ ಮಾಡುವಾಗ ಇಬ್ಬರು ಸಿಕ್ಕಿದ್ವಿ. ಆಗ ಸಿನಿಮಾ ಬಗ್ಗೆ ಮಾತಾಡಿದ್ದೇವೆ ಹೊರತು ಈ ರೀತಿಯಾದ ಯಾವುದೇ ಮಾತುಗಳನ್ನಾಡಿಲ್ಲ. ಇಬ್ಬರ ತಂದೆ, ತಾಯಿ ಹತ್ತಿರ ಡಿವೋರ್ಸ್​ ಬಗ್ಗೆ ಮಾತಾಡಿದಾಗ ಅವರು ಹೇಳಿದ್ದು, ನಿಮಗೆ ಸಮಾಜದಲ್ಲಿ ಸ್ಥಾನಮಾನ ಸಿಕ್ಕಿದೆ. ನಿಮ್ಮ ನಿರ್ಧಾರ ಅಂತಿಮವಾಗಿರುತ್ತದೆ. ನಮ್ಮಿಬ್ಬರ ತಂದೆ, ತಾಯಿಗಳೇ ಸುಮ್ಮನಿರುವಾಗ ಈ ಪ್ರಶಾಂತ್ ಸಂಬರ್ಗಿ ಯಾಕೆ ನಡುವೆ ಬಂದು ನಮ್ಮ ಪರ್ಸನಲ್​ ಬಗ್ಗೆ ಮಾತಾಡಬೇಕು. ಈಗ ಖುಷಿ ಆಗಿರಬೇಕು ಅಂತಲೇ ವಿಚ್ಛೇದನ ಪಡೆದುಕೊಂಡಿದ್ದೇವೆ. ಆದರೆ ಈ ವ್ಯಕ್ತಿ ಹೇಳೋ ರೀತಿ ಹೇಗಿದೆ ಅಂದರೆ ನಾವೀಬ್ಬರು ಯಾವಾಗಲೂ ಜಗಳ ಆಡುತ್ತಿರಬೇಕು ಎನ್ನುವ ಮನಸ್ಥಿತಿ ಇಟ್ಟುಕೊಂಡು ಇಲ್ಲದೇ ಇರುವ ಊಹಾಪೋಹಾಗಳನ್ನೆಲ್ಲ ಬಿತ್ತುತ್ತಿದ್ದಾರೆ. ದಯವಿಟ್ಟು ಇದು ಇಲ್ಲಿಗೆ ನಿಲ್ಲಿಸಿ ಬಿಡಿ, ಮಾನವೀಯತೆ ಮರೆತ್ತಿದ್ದಾರೆ ಅನಿಸುತ್ತೆ. ಇದು ಯಾರಿಗೂ ಖುಷಿ ಕೊಡೋ ವಿಚಾರ ಅಲ್ಲ ಎಂದು ಹೇಳಿದ್ದಾರೆ.

ನಿವೇದಿತಾ ಗೌಡ ಮಾತನಾಡಿ, ಆ ಮನುಷ್ಯ ಪ್ರಶಾಂತ್ ಸಂಬರ್ಗಿ ಹೇಳಿದಂತೆ ನಾನು ಯಾವುದೋ ತೆಲುಗು ಡೈರೆಕ್ಟರ್ ಹಿಂದೆ ಹೋಗಿದ್ದೀನಿ ಎಂದು ಏನೇನೋ ಹೇಳಿದ್ದಾರೆ. ಅದೆಲ್ಲ ನಿಜವಲ್ಲ. ನಿಜವಾಗಲೂ ನಾವು ಟ್ಯಾಲೆಂಟೆಡ್ ಆಗಿದ್ದರೇ ಆಪ್ರಾಚ್ಯುನಿಟಿ ಅದಾಗೆ ಅದು ಬರುತ್ತದೆ. ನಮ್ಮ ಕರಿಯರ್​ಗೆ ಮದುವೆ ಅಡ್ಡಿಯಾಗಿಲ್ಲ. ಮದುವೆಯಾದ ಮೇಲೆಯೇ ನಾವು ಇನ್ನಷ್ಟು ಚೆನ್ನಾಗಿ ಬೆಳೆದಿದ್ದೇವೆ. ಒಬ್ಬರಿಗೊಬ್ಬರು ಬೆಳೆಯಬೇಕು ಅಂತಾ ಈ ನಿರ್ಧಾರ ತೆಗೆದುಕೊಂಡಿದ್ದೀವಿ. ಬೇರೆ ವ್ಯಕ್ತಿ ಜೊತೆ ಲಿಂಕ್ ಮಾಡಿ ಅವರ ಜೊತೆ ಫಾರೀನ್​ಗೆ ಹೋಗಿ ಇದೆಲ್ಲ ಸುಳ್ಳು. ಬೇರೆಯವರಿಗೆ ಹರ್ಟ್​ ಮಾಡೋ ರೀತಿ ಮಾಡಬೇಡಿ ಪ್ಲೀಸ್​ ಎಂದು ಪ್ರಶಾಂತ್ ಸಂಬರ್ಗಿಗೆ ನಿವೇದಿತಾ ಗೌಡ ಅವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿವೇದಿತಾಗೆ ಹೈದ್ರಾಬಾದ್ ಹುಡುಗನ ಜೊತೆ ಸಂಬಂಧ ಇದಿಯಾ.. ಸಂಬರ್ಗಿಗೆ ಚಂದನ್ ಸಖತ್ ಕ್ಲಾಸ್

https://newsfirstlive.com/wp-content/uploads/2024/06/CHANDAN_SHETTY_VINEDITHA-1.jpg

Load More