/newsfirstlive-kannada/media/post_attachments/wp-content/uploads/2025/04/niveditha.jpg)
ಕನ್ನಡದ ಬಿಗ್‌ಬಾಸ್ ಹಾಗೂ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಮೂಲಕ ಸಖತ್ ಫೇಮಸ್ ಆದವರು ನಿವೇದಿತಾ ಗೌಡ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಇರುತ್ತವೆ. ಚಂದನ್ ಶೆಟ್ಟಿಗೆ ಡಿವೋರ್ಸ್ ನೀಡಿದ ಬಳಿಕವೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದ ನಿವೇದಿತಾ ಗೌಡ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ರಾಮಾಚಾರಿ ಸೀರಿಯಲ್ ಚಾರು ಸೀರೆ ಮೇಲೆ ಹೆಣ್ಮಕ್ಕಳ ಕಣ್ಣು; ನಟಿ ಮೌನ ಗುಡ್ಡೆಮನೆ ಕಲೆಕ್ಷನ್ ನೋಡಿ!
ಹೌದು, ಬಾಯ್ಸ್ v/s ಗರ್ಲ್ಸ್ ಶೋನಲ್ಲಿ ನಿವೇದಿತಾ ಗೌಡ ಅವರು ತಂದೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಈ ವೇಳೆ ಜೀವನದ ಕಹಿಘಟನೆಯನ್ನು ಎಲ್ಲರ ಮುಂದೆ ಬಿಚ್ಚಿಟ್ಟಿದ್ದಾರೆ. ಕಲರ್ಸ್ ಕನ್ನಡ ರಿಲೀಸ್ ಮಾಡಿದ ಪ್ರೋಮೋದಲ್ಲಿ ನಿವೇದಿತಾ ಗೌಡ ತನ್ನ ತಂದೆ ಎಷ್ಟು ಬೆಂಬಲ ನೀಡಿದ್ರು ಎಂಬುವುದರ ಬಗ್ಗೆ ಮಾತಾಡುತ್ತಾ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ನಿವೇದಿತಾ ಗೌಡ ತಂದೆಯ ಬಗ್ಗೆ ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರ ಕಣ್ಣಲ್ಲೂ ನೀರು ತುಂಬಿ ಬಂದಿದೆ.
ಬಾಯ್ಸ್ v/s ಗರ್ಲ್ಸ್ ಶೋಗೆ ಅತಿಥಿಗಳಾಗಿ ಅದಿತಿ ಪ್ರಭುದೇವ, ನೆನಪಿರಲಿ ಪ್ರೇಮ್ ಅವರು ಬಂದಿದ್ದರು. ಇದೇ ವೇಳೆ ನಿವೇದಿತಾ ಗೌಡ ಹಾಗೂ ಬಿಗ್‌ಬಾಸ್ ಖ್ಯಾತಿಯ ಧನರಾಜ್ ಆಚಾರ್ಯ ಇಬ್ಬರೂ ತಂದೆ-ಮಗಳ ಬಾಂಧವ್ಯದ ಕುರಿತ ಮುಗಿಲು ಬೆಳ್ಮುಗಿಲು ನನ್ನ ಈ ಮಗಳು ಎಂಬ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಈ ಡ್ಯಾನ್ಸ್ ಬಗ್ಗೆ ಮಾತಾಡಿದ ನಟ ಪ್ರೇಮ್, ಪ್ರಪಂಚದಲ್ಲಿ ತಂದೆ ಎನ್ನೋ ಜೀವನೇ ಹಾಗೆ. ವಿಶೇಷವಾಗಿ ಹೆಣ್ಣು ಮಕ್ಕಳು ಏನಾದರೂ ಕೇಳಿದಾಗ ಜೀವ ಬಿಟ್ಟು, ಏನು ಬೇಕಿದ್ರೂ ತಂದುಕೊಡ್ತಾರೆ ಎಂದು ಹೇಳಿದ್ದರು.
View this post on Instagram
ನಿವೇದಿತಾ ಗೌಡ ಹೇಳಿದ್ದೇನು?
ನನ್ನ ಲೈಫ್‌ನಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿ ಆಗಿರೋಕೆ ನನ್ನ ತಂದೆಯೇ ಕಾರಣ. ನಾನು ನಿನ್ನ ಜೊತೆಗೆ ಇದೀನಿ, ತಲೆ ಕೆಡಿಸಿಕೊಳ್ಳಬೇಡ ಅಂತ ಹೇಳ್ತಾರೆ. ಇದು ಅವರಿಗೆ ನಿಜಕ್ಕೂ ಕಷ್ಟ ಎಂದು ನಿವೇದಿತಾ ಗೌಡ ಕಣ್ಣೀರು ಹಾಕಿದ್ದಾರೆ. ಇನ್ನೂ ನಿವೇದಿತಾ ಮಾತು ಕೇಳಿ ಐಶ್ವರ್ಯಾ ಶಿಂಧೋಗಿ, ಅನುಪಮಾ ಗೌಡ, ರಜತ್ ಕಿಶನ್ ಕಣ್ಣಲ್ಲೂ ನೀರು ತುಂಬಿ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ