ಬಿಕ್ಕಿ ಬಿಕ್ಕಿ ಅತ್ತ ನಿವೇದಿತಾ ಗೌಡ.. ಕಣ್ಣೀರು ಒರೆಸಿ ಸಮಾಧಾನ ಮಾಡಿದ ಚಂದನ್ ಶೆಟ್ಟಿ; VIDEO

author-image
Veena Gangani
Updated On
ಚಂದನ್​ ಶೆಟ್ಟಿ ಪಕ್ಕದಲ್ಲೇ ಇದ್ರೂ ಐ ಡೋಂಟ್ ಕೇರ್ ಎಂದ ನಿವೇದಿತಾ ಗೌಡ.. ಏನಿದು ಹೊಸ ಟ್ವಿಸ್ಟ್‌?
Advertisment
  • ನಾನೊಂದು ತೀರಾ ನೀನೊಂದು ತೀರಾ ಅಂತ ದೂರ ಆಗಿದ್ದ ಜೋಡಿ ಮತ್ತೆ ಒಂದಾದ್ರಾ?
  • 9 ತಿಂಗಳು ನಂತರ ಮತ್ತೆ ಮುಖಾಮುಖಿಯಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ
  • ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದೇಕೆ ಗೊತ್ತಾ?

ಕನ್ನಡ ಸಿನಿಮಾ ಇಂಡಸ್ಟ್ರಿಯ ಬ್ಯೂಟಿಫುಲ್ ಕಪಲ್ ಆಗಿದ್ದರು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಆದರೆ, ಈ ಜೋಡಿ ತಮ್ಮ ದಾಂಪತ್ಯಕ್ಕೆ ಬ್ರೇಕ್​ ಹಾಕಿ ಡಿವೋರ್ಸ್ ಪಡೆದು “ನಾನೊಂದು ತೀರಾ ನೀನೊಂದು ತೀರಾ” ಆಗಿದೆ. ಆದರೆ ವಿಚ್ಛೇದನದ ಬಳಿಕ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಾಳೆಯಿಂದ ಬೆಂಗಳೂರಲ್ಲಿ RCB ಕ್ಯಾಂಪ್ ಆರಂಭ.. ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್!

publive-image

ಹೌದು, ಒಂಬತ್ತು ತಿಂಗಳು ನಂತರ ಮತ್ತೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮುಖಾಮುಖಿಯಾಗಿದ್ದಾರೆ. ಒಂದೇ ಸಿನಿಮಾದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಟಿಸಿದ್ದಾರೆ. ಇಂದು ‘ಮುದ್ದು ರಾಕ್ಷಸಿ’ ಸಿನಿಮಾದ ಕೊನೆ ದಿನ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು.

ಇದೇ ವೇಳೆ ‘ಮುದ್ದು ರಾಕ್ಷಸಿ’ ಕೊನೆಯ ಸೀನ್​ನಲ್ಲಿ ಚಂದನ್​ ಶೆಟ್ಟಿ ಅವರನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಈ ಇಬ್ಬರು ಮತ್ತೆ ಒಂದಾಗಬೇಕು ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ. ಇನ್ನೂ, ವಿಚ್ಚೇದನಕ್ಕೂ ಮೊದಲೇ ಈ ಸಿನಿಮಾ ಸೆಟ್ಟೇರಿತ್ತು. ಸಿನಿಮಾದ ಕ್ಲೈಮ್ಯಾಕ್ಸ್ ಶೂಟ್ ಆಗೋಕು ಮೊದಲೇ ವಿಚ್ಚೇದನ ಆಗಿತ್ತು. ಈ ಮೊದಲು ಸಿನಿಮಾಗೆ ಕ್ಯಾಂಡಿ ಕ್ರಶ್ ಅಂತಾ ಟೈಟಲ್ ಇಡಲಾಗಿತ್ತು. ಆದ್ರೆ ಈಗ ಇದೀಗ ಮುದ್ದು ರಾಕ್ಷಸಿ ಅಂತಾ ಟೈಟಲ್ ಚೇಂಚ್​ ಮಾಡಿದ್ದಾರೆ.

ಬಿಗ್​ಬಾಸ್​ನಲ್ಲಿ ಪರಸ್ಪರ ಪರಿಚಯ!

ಬಿಗ್‌ಬಾಸ್‌‌ನಲ್ಲಿ ಇಬ್ಬರು ಪರಸ್ಪರ ಭೇಟಿಯಾಗಿದ್ದು, ಆಮೇಲೆ ಮದುವೆ ಕೂಡ ಆದ್ರು. ಮದುವೆಯಾದ ಹೊಸತರಲ್ಲಿ ಇವರಿಬ್ಬರ ರೀಲ್ಸ್ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. 26 ಫೆಬ್ರವರಿ 2020ರಂದು ಪ್ರೀತಿಸಿ ಮದುವೆ ಆಗಿದ್ದ ಈ ಜೋಡಿ ಬೇರೆ ಬೇರೆಯಾಗಿದ್ದರು. ಈಗ ಚಂದನ್‌ ಶೆಟ್ಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ನಿವೇದಿತಾ ಗೌಡ ಬಾಯ್ಸ್​ ವರ್ಸಸ್​ ಗರ್ಲ್ಸ್ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರು ಸೇರಿ ಮಾಡಿರೋ ‘ಮುದ್ದು ರಾಕ್ಷಸಿ’ ಸಿನಿಮಾದಲ್ಲಿ ಆ್ಯಕ್ಟ್​ ಕೂಡ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment